ಬಿಡುಗಡೆಯಾಯಿತು ಅಧಿಕೃತ ಕಲೆಕ್ಷನ್, ಕೋಟಿ ಕೋಟಿ ಗಳಿಸಿದೆ ಎಂದ ಸಲಗ ಒಟ್ಟಾರೆಯಾಗಿ ನಿಜವಾಗಲೂ ಗಳಿಸಿದ್ದೆಷ್ಟು ಗೊತ್ತೇ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ 100% ಸಿನಿಮಾ ಚಿತ್ರಮಂದಿರಗಳಲ್ಲಿ ಅವಕಾಶ ಸಿಕ್ಕಮೇಲೆ ಬಿಡುಗಡೆಯಾಗಿರುವ ಎರಡು ಸ್ಟಾರ್ ನಟರ ಚಿತ್ರಗಳೆಂದರೆ ಸಲಗ ಹಾಗೂ ಕೋಟಿಗೊಬ್ಬ3. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ದುನಿಯಾ ವಿಜಯ್ ನಟನೆಯ ಸಲಗ ಚಿತ್ರದ ಕುರಿತಂತೆ.

ಹೌದು ಸ್ನೇಹಿತರೆ ನಟನಾಗಿ ಎಲ್ಲರ ಮನಗೆದ್ದಿದ್ದ ಅಂತಹ ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಕನಾಗಿ ಕೂಡ ಸಲಗ ಚಿತ್ರದ ಯಶಸ್ಸಿನ ಮೂಲಕ ಸಫಲರಾಗಿದ್ದಾರೆ ಎಂದು ಹೇಳಬಹುದಾಗಿದೆ. ನಿರ್ದೇಶಕನಾಗಿ ಮೊದಲ ಚಿತ್ರದ ಮೂಲಕವೇ ಸಿಕ್ಸರ್ ಬಾರಿಸಿದರೆ ನಮ್ಮ ದುನಿಯಾ ವಿಜಯ್ ಅಲಿಯಾಸ್ ಬ್ಲಾಕ್ ಕೋಬ್ರಾ. ಇನ್ನು ಬಾಕ್ಸ್ ಆಫೀಸ್ ನಲ್ಲಿ ಕೂಡ ಸಾಕಷ್ಟು ಭರ್ಜರಿಯಾಗಿ ಪ್ರದರ್ಶನವನ್ನು ನೀಡುತ್ತಿದೆ ಸಲಗ ಚಿತ್ರ. ಪಕ್ಕ ಲೋಕಲ್ ಕಮರ್ಷಿಯಲ್ ಎಂಟರ್ಟೇನರ್ ಆಗಿರುವ ಸಲಗ ಚಿತ್ರ ಪಡ್ಡೆಹೈಕಳ ಫೇವರಿಟ್ ಫಿಲಂ ಆಗಿದೆ. ಇನ್ನು ಸಲಗ ಚಿತ್ರದ ನಾಲ್ಕು ದಿನದ ಕಲೆಕ್ಷನ್ ಈಗಾಗಲೇ ಬಂದಿದ್ದು ಎಷ್ಟು ಕಲೆಕ್ಷನ್ ಮಾಡಿದೆ ಎಂಬುದರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ.

ಸಲಗ ಚಿತ್ರ ಮೊದಲ ದಿನ 6.5 ಕೋಟಿ ಗಳಿಸಿದೆ ಎರಡನೇ ದಿನ 4.5 ಕೋಟಿ ಗಳಿಸಿದೆ ಮೂರನೇ ದಿನ 3.5 ಕೋಟಿ ಗಳಿಸಿದೆ ಹಾಗೂ ನಾಲ್ಕನೇ ದಿನ 3.5 ಕೋಟಿ ಗಳಿಸಿದೆ. ಒಟ್ಟಾರೆಯಾಗಿ ಗ್ರಾಸ್ 18 ಕೋಟಿ ಗಳಿಸಿದ್ದು, ಇದರಲ್ಲಿ 11ಕೋಟಿ ಶೇರ್ ಎಂದು ಹೇಳಬಹುದಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಈ ಚಿತ್ರದ ಗಳಿಕೆ ದುನಿಯಾ ವಿಜಯ್ ಅವರ ಸಿನಿಮಾ ಜೀವನದಲ್ಲಿ ಅತ್ಯಂತ ದೊಡ್ಡ ಗಳಿಕೆ ಎಂದರೆ ಕೂಡ ತಪ್ಪಾಗಲಾರದು‌. ಸಲಗ ಚಿತ್ರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.