ಬಂಪರ್ ಆಫರ್, ಮಕ್ಕಳನ್ನು ಎತ್ತರೆ ಇಲ್ಲಿ ಆಫರ್ ಮೇಲೆ ಆಫರ್, ಏಳು ಮಕ್ಕಳನ್ನು ಎತ್ತರೆ ಏನೆಲ್ಲಾ ಸೌಲಭ್ಯ ಗೊತ್ತಾ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳು ಹೊರಟಿರುವುದು ಜನಸಾಂದ್ರತೆಯ ಕುರಿತಂತೆ. ಈಗಾಗಲೇ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶಗಳೆಂದರೆ ಭಾರತ ಹಾಗೂ ಚೀನಾ ಎಂದರೆ ತಪ್ಪಾಗಲಾರದು. ಹೀಗಾಗಿಯೇ ಭಾರತ ಹಾಗೂ ಚೀನಾ ಎರಡು ದೇಶಗಳು ಕೂಡ ಜನಸಂಖ್ಯೆಯನ್ನು ನಿಯಂತ್ರಿಸಲು ಹಲವಾರು ಕಾನೂನುಗಳನ್ನು ಜಾರಿಗೆ ತಂದಿದ್ದಾರೆ. ಇದರಲ್ಲಿ ಚೀನಾ ಇತ್ತೀಚಿಗೆ ಕೆಲವು ಕಾನೂನು ನಿಯಮಗಳನ್ನು ಸಡಿಲಿಸಿದೆ. ಆದರೂ ಕೂಡ ಇಂದಿಗೂ ಚೀನಾದಲ್ಲಿ ಕಡಿಮೆ ಮಕ್ಕಳನ್ನು ಹೊಂದಲು ಪ್ರೋತ್ಸಾಹಿಸಲಾಗುತ್ತದೆ.

ಇನ್ನು ನಮ್ಮ ದೇಶದ ವಿಷಯಕ್ಕೆ ಬಂದರೆ ನಮ್ಮ ದೇಶದಲ್ಲಿ ಸರ್ಕಾರ ನಾವಿಬ್ಬರು ನಮಗಿಬ್ಬರು ಎಂಬ ಘೋಷಣೆಯಡಿಯಲ್ಲಿ ನಿಯಮಗಳನ್ನು ಜಾರಿಗೆ ತಂದಿದ್ದು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಅವರಿಗೆ ಸರಕಾರದ ಕಡೆಯಿಂದ ಬರುವ ಹಲವಾರು ಯೋಜನೆಗಳನ್ನು ಸಿಗದಂತೆ ಮಾಡಲಾಗುತ್ತಿದೆ. ಇನ್ನು ಇಂದು ನಾವು ಹೇಳು ಹೊರಟಿರುವ ವಿಷಯದಲ್ಲಿ ಈ ದೇಶದಲ್ಲಿ ಒಬ್ಬ ಮಹಿಳೆ ಏಳಕ್ಕಿಂತ ಹೆಚ್ಚು ಮಕ್ಕಳನ್ನು ಹೆತ್ತರೆ ಅವರಿಗೆ ಗೋಲ್ಡ್ ಮೆಡಲ್ ನೀಡಿ ಸನ್ಮಾನಿಸಲಾಗುತ್ತದೆ. ಹಾಗಿದ್ದರೆ ಆ ದೇಶ ಯಾವುದು ಹಾಗೂ ಈ ವಿಚಿತ್ರ ಕಾನೂನಿನ ಹಿಂದಿರುವ ರಹಸ್ಯ ಏನು ಎಂಬುದರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳುತ್ತೇನೆ ಬನ್ನಿ.

ಹೌದು ಸ್ನೇಹಿತರೆ ಕಜಕಿಸ್ತಾನ ದೇಶದಲ್ಲಿ ಒಬ್ಬ ಮಹಿಳೆ ಏಳು ಮಕ್ಕಳನ್ನು ಹೆತ್ತರೆ ಆಕಿಗೆ ಗೋಲ್ಡನ್ ಜೊತೆಗೆ ಜೀವನಪರ್ಯಂತ ರೇಷನ್ ಮನೆ ಹಾಗೂ ಕರ್ಚಿಗೆ ಹಣವನ್ನು ಕೂಡ ತಿಂಗಳಿಗೆ ನೀಡುತ್ತ ಹೋಗಲಾಗುತ್ತದೆ. ಕೇವಲ ಎರಡು ಮಕ್ಕಳು ಮಾತ್ರವಲ್ಲದೆ ನಾಲ್ಕು ಮಕ್ಕಳ ಮೇಲೆ ಎಷ್ಟೇ ಮಕ್ಕಳನ್ನು ಹೆತ್ತರು ಕೂಡ ಆ ಸ್ತ್ರೀಯರಿಗೆ ಹಲವಾರು ಲಾಭಗಳನ್ನು ಹಾಗೂ ಜೀವನಪರ್ಯಂತ ಸುವಿಧಗಳನ್ನು ಸರ್ಕಾರ ನೀಡಲು ತಯಾರಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ದೇಶದ ಜನಸಂಖ್ಯೆ ತುಂಬಾನೇ ಕಡಿಮೆಯಾಗಿದೆ. ಪ್ರಪಂಚದ ದೃಷ್ಟಿಯಲ್ಲಿ ಪವರ್ಫುಲ್ ರಾಷ್ಟ್ರವಾಗಲು ಜನಸಂಖ್ಯೆ ಹೆಚ್ಚಿರುವುದು ಅಗತ್ಯವಾಗಿರುವುದರಿಂದಾಗಿ ಜನಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಈ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.

Get real time updates directly on you device, subscribe now.