ಬದುಕಿರುವಾಗಲೇ ಸಮಾಧಿಯನ್ನು ಖರೀದಿಸಿರುವ ಖ್ಯಾತ ನಟಿ ಯಾರು ಗೊತ್ತಾ?? ಇಂಗೂ ಇರ್ತಾರ ಅಂದ್ರು ನೆಟ್ಟಿಗರು.

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬದುಕಿದ್ದಾಗ ಅದೆಷ್ಟೋ ಜನರು ಸಾಕಷ್ಟು ಆಸೆಗಳನ್ನು ಹೊಂದಿರುತ್ತಾರೆ ಅದೇನನ್ನು ಖರೀದಿಸಲು ಕೂಡ ಇಷ್ಟ ಪಡುತ್ತಿರುತ್ತಾರೆ. ಇಂದು ನಾವು ಹೇಳಹೊರಟಿರುವ ಕಥೆಯಲ್ಲಿ ನಟಿಯೊಬ್ಬರು ಬದುಕಿರುವಾಗಲೇ ಸಮಾಧಿ ಯೊಂದನ್ನು ಕೊಂಡುಕೊಂಡಿದ್ದಾರೆ ಎಂದರೆ ನೀವು ನಂಬುತ್ತೀರಾ. ಹೌದು ಸ್ನೇಹಿತರೆ ನಾವು ಎಂದು ಮಾತನಾಡಲು ಹೊರಟಿರುವುದು ಮಲಯಾಳಂ ಮೂಲದ ರೇಖಾ ಎಂಬ ನಟಿಯ ಕುರಿತಂತೆ.

ಇವರು ಕೇವಲ ಮಲಯಾಳಂ ಚಿತ್ರರಂಗದಲ್ಲಿ ಮಾತ್ರವಲ್ಲದೆ ಕನ್ನಡ ತಮಿಳು ತೆಲುಗು ಚಿತ್ರರಂಗಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಪೂರ್ಣಚಂದ್ರ ಪ್ರೇಮ ಕೈದಿ ನನ್ನ ಶತ್ರು ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಅಂಬರೀಶ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ನಟಿ ರೇಖಾ ಅವರು ತಮ್ಮ ತಂದೆಯನ್ನು ಸಾಕಷ್ಟು ಪ್ರೀತಿಸಿದ್ದರು. ತಂದೆ ಕೂಡ ತನ್ನ ಮಗಳ ಮಾತಿಗೆ ಇಲ್ಲ ಎನ್ನುತ್ತಿರಲಿಲ್ಲ ಎಲ್ಲದಕ್ಕೂ ಕೂಡ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆದರೆ ಅವರಿಗೆ ನಟಿ ರೇಖಾ ರವರು ನಟಿಸುವುದು ಇಷ್ಟವಿರಲಿಲ್ಲ ಹೀಗಾಗಿ ಅದಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಆದರೆ ನಟಿ ರೇಖಾ ರವರು ತಂದೆಯ ಮಾತನ್ನು ಮೀರಿ ನಟನೆಗೆ ತೊಡಗಿಕೊಂಡಿದ್ದರು. ಇನ್ನು ಕೆಲವು ಸಮಯಗಳ ಹಿಂದಷ್ಟೇ ನಟಿ ರೇಖಾ ರವರ ತಂದೆ ಅಸುನೀಗುತ್ತಾರೆ. ಇನ್ನು ಚೆನ್ನೈನಲ್ಲಿ ನಟಿ ರೇಖಾ ರವರ ತಂದೆಯ ಸಮಾಧಿಯನ್ನು ಕಟ್ಟಲಾಗುತ್ತದೆ. ಈ ಸಂದರ್ಭದಲ್ಲಿ ನಟಿ ರೇಖಾ ರವರು ಅದರ ಪಕ್ಕದಲ್ಲಿರುವ ಜಾಗವನ್ನು ಖರೀದಿಸಿ ನಾನು ಕೊನೆಯುಸಿರೆಳೆದ ಮೇಲೆ ನನ್ನ ಸಮಾಧಿಯನ್ನು ಇಲ್ಲಿ ನಿರ್ಮಿಸಬೇಕೆಂಬುದಾಗಿ ತನ್ನ ಕುಟುಂಬಸ್ಥರಿಗೆ ಹೇಳಿದ್ದಾರೆ. ಇದನ್ನು ನಟಿ ರೇಖಾ ರವರು ಹಲವಾರು ಸಂದರ್ಶನಗಳಲ್ಲಿ ಕೂಡ ಹೇಳಿಕೊಂಡಿದ್ದಾರೆ. ಬದುಕಿರುವಾಗಲೇ ಸಮಾಧಿಯನ್ನು ಖರೀದಿಸಿರುವುದು ಸರಿಯಾ ತಪ್ಪಾ ಎಂಬುದನ್ನು ನಿಮ್ಮ ಅನಿಸಿಕೆಯಲ್ಲಿ ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.