ನೂರಲ್ಲ ಇನ್ನೂರಲ್ಲ ಬರೋಬ್ಬರಿ 1200 ಮನೆ ಇರುವ ಈ ಹಳ್ಳಿಯಲ್ಲಿ ಒಬ್ಬನೇ ಅಜ್ಜ ಇರುತ್ತಾರೆ ಯಾಕೆ ಗೊತ್ತೇ??

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ದೇಶದಲ್ಲಿ ಅದೆಷ್ಟು ಹಲವಾರು ವಿಚಾರಗಳನ್ನು ವಿಚಿತ್ರ ಸುದ್ದಿಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಆದರೆ ಇಂದು ನಾವು ಹೇಳಹೊರಟಿರುವ ಸುದ್ದಿ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡುವಂತೆ ಮಾಡುತ್ತದೆ. ಹೌದು ಸ್ನೇಹಿತರೆ ಈ ಘಟನೆ ನಡೆದಿರುವುದು ಅಥವಾ ಘಟನೆ ಆಗ್ತಾ ಇರೋದು ನಮ್ಮ ಭಾರತ ದೇಶದಲ್ಲಿ ಅದರಲ್ಲೂ ಕೂಡ ನಮ್ಮ ದಕ್ಷಿಣ ಭಾರತದ ತಮಿಳುನಾಡಿನ ಮೀನಾಕ್ಷಿಪುರಂ ಎಂಬ ಸ್ಥಳದಲ್ಲಿ.

ಇಲ್ಲಿ 1200 ಮನೆಗಳಿದ್ದರೂ ಕೂಡ ಈ ಊರಿನಲ್ಲಿ ವಾಸ ಮಾಡ್ತಾ ಇರೋದು ಕಂದಸ್ವಾಮಿ ಎಂಬ ಮುದುಕ ಮಾತ್ರ. ಈ ಇಳಿವಯಸ್ಸಿನಲ್ಲೂ ಕೂಡ ಇಡೀ ಊರಿನಲ್ಲಿ ಅವರು ಒಬ್ಬರೇ ವಾಸ ಮಾಡುತ್ತಿದ್ದಾರೆ. ಇನ್ನು ಈ ಮೀನಾಕ್ಷಿ ಪುರಂ ಊರಿನಲ್ಲಿ ಮೊದಲು ಹೀಗಿರಲಿಲ್ಲ ಸ್ನೇಹಿತರೆ. ಇಲ್ಲಿಯೂ ಕೂಡ ಜನ ವಾಸ್ತವ್ಯ ಚೆನ್ನಾಗಿತ್ತು. ಆದರೆ ಒಮ್ಮೆಲೆ 1200 ಮನೆಗಳ ಜನರು ವಲಸೆ ಹೋಗಿದ್ದು ಅದಕ್ಕೆ ಕಾರಣ ಏನು ಗೊತ್ತ ಸ್ನೇಹಿತರೆ ಬನ್ನಿ ನಾವು ನಿಮಗೆ ವಿವರವಾಗಿ ಹೇಳುತ್ತೇನೆ.

ಹೌದು ಮೀನಾಕ್ಷಿಪುರ ಊರಿನಲ್ಲಿ ನೀರಿನ ಅಭಾವ ಸಾಕಷ್ಟಿತ್ತು. ಮನುಷ್ಯನ ಮೂಲಭೂತ ಹಕ್ಕುಗಳಲ್ಲಿ ಒಂದು ಆದಂತಹ ಕುಡಿಯುವ ನೀರೇ ಸಿಗದಿದ್ದ ಮೇಲೆ ಊರಿನಲ್ಲಿ ಇದು ಕೂಡ ಪ್ರಯೋಜನ ಇಲ್ಲ ಎಂದು ಅಲ್ಲಿನ ಜನರು ಸಾಮೂಹಿಕವಾಗಿ ವಲಸೆ ಹೋಗಿದ್ದಾರೆ. ಇನ್ನು ಕಂದಸ್ವಾಮಿ ಅವರ ಮಕ್ಕಳು ಕೂಡ ತಮ್ಮ ತಂದೆಯನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗಲು ನೋಡಿದ್ದರು. ಆದರೆ ಕಂದಸ್ವಾಮಿ ಇದು ನನ್ನ ಪೂರ್ವಜರ ಮನೆ ನಾನು ಇಲ್ಲಿಯೇ ಇರುತ್ತೇನೆ ಎಂಬುದಾಗಿ ಹಠ ಹಿಡಿದಿದ್ದರು. ಇನ್ನು ಪಟ್ಟಣದಿಂದ ಆಹಾರ ವಸ್ತುಗಳನ್ನು ಖರೀದಿಸಿ ತಂದು ಇರುವಷ್ಟು ನೀರಿನಲ್ಲಿ ತನ್ನ ಆಹಾರವನ್ನು ಸಿದ್ಧಪಡಿಸಿಕೊಂಡು ಇಲ್ಲಿಯೇ ಇದ್ದಾರೆ ಕಂದಸ್ವಾಮಿ. ಇಂದಿಗೂ ಕೂಡ ಪಟ್ಟಣಕ್ಕೆ ಹೋಗಿ ಮತಚಲಾಯಿಸಿ ಬರುತ್ತಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.