ಕೊಹ್ಲಿ ಗೆ ಆರ್ಸಿಬಿ ಸೋಲುವ ಮುನ್ನ ಏನಾಗಿತ್ತು?? ಫೋಟೋ ನೋಡಿ ಶಾಕ್ ಆದ ಅಭಿಮಾನಿಗಳು. ಅಸಲಿಗೆ ಏನಾಗಿದೆ ಗೊತ್ತಾ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪ್ರಸ್ತುತ ಆರ್ಸಿಬಿ ತಂಡದ ನಾಯಕ ಹಾಗೂ ಭಾರತ ತಂಡದ ನಾಯ ವಿರಾಟ್ ಕೊಹ್ಲಿ ಹೆಚ್ಚು ಚರ್ಚೆಯಲ್ಲಿರುವ ವ್ಯಕ್ತಿ. ಅದಕ್ಕೆ ಕಾರಣ ಅವರು ಈ ಸೀಸನ್ ನಂತರ ಆರ್ಸಿಬಿ ತಂಡದ ನಾಯಕತ್ವ ತೊರೆಯುತ್ತಿರುವುದು ಹಾಗೂ ಟಿ 20 ವಿಶ್ವಕಪ್ ನಂತರ ಭಾರತ ತಂಡದ ಟಿ 20 ನಾಯಕತ್ವವನ್ನ ತೊರೆಯುತ್ತಿರುವುದು. ಹಾಗಾಗಿ ವಿರಾಟ್ ಕೊಹ್ಲಿ ಈ ಭಾರಿ ಗೆಲುವಿನ ಮೂಲಕ ನಾಯಕತ್ವ ತೊರೆಯುತ್ತಾರೋ ಅಥವಾ ಎಂದಿನಂತೆ ಸೋಲಿನ ಮೂಲಕ ವಿದಾಯ ಹೇಳುತ್ತಾರಾ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿದೆ.

ಈ ನಡುವೆ ಆರ್ಸಿಬಿ ಕ್ವಾಲಿಫೈ ಹಂತಕ್ಕೆ ತೇರ್ಗಡೆಯಾದ ನಂತರ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೋವನ್ನ ಅಪ್ ಲೋಡ್ ಮಾಡಿದ್ದಾರೆ. ತಮ್ಮ ಎರಡು ಕಾಲುಗಳಿಗೆ ಅದೇನೋ ಪ್ಯಾಡ್ ಗಳನ್ನ ಕಟ್ಟಿಕೊಂಡು ಆಸ್ಪತ್ರೆಯಲ್ಲಿ ಮಲಗಿರುವಂತೆ ಮಲಗಿದ್ದರು. ಇದು ಅಭಿಮಾನಿಗಳಿಗೆ ಒಂದು ರೀತಿಯ ಶಾಕ್ ಆಗಿತ್ತು. ವಿರಾಟ್ ಕೊಹ್ಲಿಯ ಎರಡು ಕಾಲು ಮುರಿದು ಹೋಗಿದೆಯಾ ಎಂಬ ಅನುಮಾನಗಳನ್ನ ಅಭಿಮಾನಿಗಳು ವ್ಯಕ್ತಪಡಿಸಿದರು.

ಆದರೇ ಅಸಲಿಗೆ ನಡೆದಿದ್ದೇ ಬೇರೆ. ವಿರಾಟ್ ಕೊಹ್ಲಿ ತಮ್ಮ ಕಾಲುಗಳಿಗೆ ಪಲ್ಸ್ ಲೆಗ್ ರಿಕವರಿ ಎಂಬ ಕಪ್ಪು ಪ್ಯಾಡ್ ಗಳನ್ನ ಧರಿಸಿ ವಿಶ್ರಾಂತಿ ಪಡೆಯುತ್ತಿದ್ದರಂತೆ. ಪಲ್ಸ್ ಲೆಗ್ ರಿಕವರಿ ಎಂಬ ಪ್ಯಾಡ್ ಧರಿಸಿದರೇ ಕಾಲಿನ ಮಾಂಸ ಖಂಡಗಳಿಗೆ ಮೃದುವಾದ ಮಸಾಜ್ ನ್ನ ನೀಡುತ್ತದೆಯಂತೆ. ಹೀಗಾದಾಗ ಕಾಲುಗಳಲ್ಲಿನ ನೋವು ಶಮನವಾಗಿ ಫಿಟ್ ನೆಸ್ ಗೆ ಅನುಗುಣವಾಗುತ್ತದೆಯಂತೆ. ಫೀಲ್ಡ್ ನಲ್ಲಿ ಓಡಲು ಸಹ ಅತ್ಯುತ್ತಮವಾಗಿ ನೆರವಾಗುತ್ತದೆಯಂತೆ.

ಈ ಪಲ್ಸ್ ಲೆಗ್ ರಿಕವರಿ ಮಸಾಜ್ ಪ್ಯಾಡ್ ಗೆ ಬರೋಬ್ಬರಿ ಒಂದು ಲಕ್ಷ ಬೆಲೆ ಇದೆಯಂತೆ. ಕ್ರೀಡಾಪಟುಗಳು, ಫುಟ್ ಬಾಲ್ ಆಟಗಾರರು ಎಲ್ಲರೂ ಕ್ರೀಡಾಕೂಟದಲ್ಲಿ ಇದನ್ನ ದಿನನಿತ್ಯ ಬಳಸುತ್ತಾರಂತೆ. ಅಮೇಜಾನ್ ಹಾಗೂ ಫ್ಲಿಫ್ ಕಾರ್ಟ್ ನಂತಹ ಶಾಪಿಂಗ್ ಸೈಟುಗಳಲ್ಲಿ ಈ ಪಲ್ಸ್.ಲೆಗ್ ರಿಕವರಿ ಪ್ಯಾಡ್ ಗಳು ಲಭ್ಯವಿವೆ. ನೀವು ಕಾಲಿನ ಮಾಂಸಖಂಡದ ನೋವಿನಿಂದ ಬಳಲುತ್ತಿದ್ದರೇ ಇದನ್ನ ಬಳಸಿ ನೋವಿನಿಂದ ಮುಕ್ತರಾಗಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.