ಇಲ್ಲೊಂದು ಜೋಡಿಯು ಮದುವೆಯಾದ ಕೇವಲ 3 ನಿಮಿಷಕ್ಕೆ ವಿಚ್ಚೇದನ ಪಡೆದದ್ದು ಯಾಕೆ ಗೊತ್ತೇ?? ಇಂಗು ಇರ್ತಾರ ಜನ.

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಮದುವೆಯನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಎಷ್ಟು ಮಹತ್ವದ ಪಾತ್ರವನ್ನು ಹಾಗೂ ಸಂತೋಷವನ್ನು ತರುತ್ತದೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ ಸ್ನೇಹಿತರೆ. ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯ ಪ್ರಕಾರ ಏಳು ಜನ್ಮದ ವರೆಗೂ ಕೂಡ ನೀನು ನನ್ನ ಜೋಡಿ ಎಂಬುದಾಗಿ ಪರಸ್ಪರ ಶಪಥವನ್ನು ತೆಗೆದುಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆಗಳು ದೀರ್ಘಕಾಲದವರೆಗೆ ಎಲ್ಲೂ ಕೂಡ ಉಳಿದುಕೊಂಡಿಲ್ಲ. ಹೌದು ಸ್ನೇಹಿತರೆ ಮದುವೆಯಾದ ನಂತರ ಕೆಲವೇ ವರ್ಷಗಳಲ್ಲಿ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುವುದು ನೀವು ಕೇಳಿರುತ್ತೀರಿ.

ಆದರೆ ಇಂದು ನಾವು ಹೇಳಹೊರಟಿರುವ ವಿಷಯ ಕೇಳಿದರೆ ಖಂಡಿತವಾಗಿಯೂ ನೀವು ಕೂಡ ಆಶ್ಚರ್ಯ ಪಡುತ್ತೀರಿ. ಹೌದು ಸ್ನೇಹಿತರೆ ಇಂದು ನಾವು ಹೇಳಹೊರಟಿರುವ ನೈಜ ಘಟನೆ ನಡೆದಿರುವುದು ಕುವೈತಿನಲ್ಲಿ. ಇದನ್ನು ಜಗತ್ತಿನ ಅತ್ಯಂತ ಚಿಕ್ಕ ಮದುವೆ ಎಂದು ಕರೆದರು ಕೂಡ ತಪ್ಪಾಗಲಾರದು. ಹೌದು ಸ್ನೇಹಿತರೆ ಮದುವೆಯಾದ ಮೂರೆ ನಿಮಿಷಕ್ಕೆ ಮದುಮಗಳು ಮದುಮಗ ನಿಂದ ವಿವಾಹ ವಿಚ್ಛೇದನವನ್ನು ಇಲ್ಲಿ ಪಡೆದುಕೊಂಡಿದ್ದಾಳೆ. ಹೌದು ಸ್ನೇಹಿತರೆ ಈ ಮೂರು ನಿಮಿಷದ ಮದುವೆಗೆ ಕಾರಣ ಏನು ಎಂಬುದನ್ನು ಕೂಡ ನಾವು ನಿಮಗೆ ವಿವರವಾಗಿ ಹೇಳುತ್ತೇನೆ ತಪ್ಪದೆ ಕೊನೆಯವರೆಗೂ ಓದಿ.

ಹೌದು ಸ್ನೇಹಿತರೆ ಹುಡುಗ-ಹುಡುಗಿ ಇಬ್ಬರೂ ಕೂಡ ಅಲ್ಲಿನ ಕೋರ್ಟ್ಗೆ ತಮ್ಮ ಮದುವೆಯ ರಿಜಿಸ್ಟ್ರೇಷನ್ ಗಾಗಿ ಹೋಗುತ್ತಾರೆ. ರಿಜಿಸ್ಟ್ರೇಷನ್ ನಲ್ಲಿ ಮದುವೆಯಾದ ನಂತರ ಮೆಟ್ಟಿಲಿನಿಂದ ಕೆಳಗಿಳಿದು ಬರುತ್ತಿರಬೇಕಾದರೆ ಹುಡುಗಿ ಕಾಲು ಜಾರಿ ಬೀಳುತ್ತಾರೆ. ಆ ಸಂದರ್ಭದಲ್ಲಿ ಹುಡುಗ ಆಕೆಯನ್ನು ಎತ್ತಿ ಸಮಾಧಾನ ಮಾಡುವ ಬದಲಾಗಿ ಅವಳು ಬಿದ್ದಿದ್ದಕ್ಕೆ ನಕ್ಕು ಸ್ಟುಪಿಡ್ ಎಂಬುದಾಗಿ ಹೇಳುತ್ತಾನೆ. ಇದರಿಂದ ಕೋಪಗೊಂಡ ಹುಡುಗಿ ಮತ್ತೊಮ್ಮೆ ಕೋರ್ಟ್ ಒಳಗೆ ಹೋಗಿ ವಿವಾಹ ವಿಚ್ಛೇದನವನ್ನು ಕೇಳುತ್ತಾಳೆ. ಕೋರ್ಟಿನವರು ಎಷ್ಟೇ ಹೇಳಿದರೂ ಕೂಡ ಒಪ್ಪದೆ ಮದುವೆಯಾದ ಮೂರೆ ನಿಮಿಷಕ್ಕೆ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುತ್ತಾಳೆ. ಇದನ್ನು ಜಗತ್ತಿನಲ್ಲಿ ಅತ್ಯಂತ ವೇಗವಾಗಿ ವಿಚ್ಛೇದನ ಪಡೆದುಕೊಂಡ ಮದುವೆ ಎಂದು ಹೇಳಬಹುದಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.