ವಯಸ್ಸಿನಲ್ಲಿ ತಮಗಿಂತ ದೊಡ್ಡವರನ್ನು ಮದುವೆಯಾದಂತಹ ಟಾಪ್ ಕ್ರಿಕೆಟಿಗರು ಯಾರ್ಯಾರು ಗೊತ್ತೇ?? ಅಚ್ಚರಿಯ ಹೆಸರಿಗಳು ಲಿಸ್ಟಿನಲ್ಲಿ.

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಅತ್ಯಂತ ಹೆಚ್ಚು ಜನಪ್ರಿಯವಾಗಿರುವ ಕ್ರೀಡೆ ಎಂದರೆ ಅದು ಕ್ರಿಕೆಟ್ ಎಂದು ನಿಮಗೆಲ್ಲಾ ಗೊತ್ತೇ ಇದೆ. ಹೌದು ಸ್ನೇಹಿತರೆ ಕ್ರಿಕೆಟ್ ಎನ್ನುವುದು ಅತ್ಯಂತ ಹೆಚ್ಚು ಜನಪ್ರಿಯ ಕ್ರೀಡೆಯಾಗಿದ್ದು ಕ್ರಿಕೆಟಿಗರು ಕೂಡ ನಮ್ಮ ಭಾರತದ ಜನತೆಯಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿದ್ದಾರೆ. ಇಂದು ನಾವು ಮಾತನಾಡಲು ಹೊರಟಿರುವುದು ಯಾವೆಲ್ಲ ಭಾರತೀಯ ಕ್ರಿಕೆಟಿಗರು ತಮಗಿಂತ ಹೆಚ್ಚು ವಯಸ್ಸಿನವರೊಂದಿಗೆ ಮದುವೆಯಾಗಿದ್ದಾರೆ ಎಂಬುದರ ಕುರಿತಂತೆ. ಹೌದು ಸ್ನೇಹಿತರೆ ಈ ಲಿಸ್ಟಿನಲ್ಲಿ ಯಾರೆಲ್ಲ ಇದ್ದಾರೆ ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ ತಪ್ಪದೇ ಕೊನೆಯವರೆಗೂ ಓದಿ.

ಹೌದು ಸ್ನೇಹಿತರೆ ಇಂದಿನ ಲೇಖನಿಯಲ್ಲಿ ನಾವು ತಮಗಿಂತ ದೊಡ್ಡ ವಯಸ್ಸಿನ ಮಹಿಳೆಯರನ್ನು ಮದುವೆಯಾಗಿರುವ ಕ್ರಿಕೆಟಿಗರ ಕುರಿತಂತೆ ನಿಮಗೆ ಸವಿವರವಾಗಿ ಹೇಳಲಿದ್ದೇವೆ. ವಿರಾಟ್ ಕೊಹ್ಲಿ ಹೌದು ಸ್ನೇಹಿತರೆ ವಿರಾಟ್ ಕೊಹ್ಲಿ ಅವರು ಉತ್ಕೃಷ್ಟ ಬ್ಯಾಟ್ಸ್ಮನ್ ಮಾತ್ರವಲ್ಲದೆ ಭಾರತೀಯ ಕ್ರಿಕೆಟ್ ತಂಡದ ಕಪ್ತಾನ ಕೂಡ ಹೌದು. ಹೌದು ಸ್ನೇಹಿತರೆ ಭಾರತೀಯ ಶ್ರೀಮಂತ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಇವರು ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯಾಗಿರುವ ಅನುಷ್ಕಾ ಶರ್ಮಾ ಅವರನ್ನು ಪ್ರೀತಿಸಿ 2017 ರ ಡಿಸೆಂಬರ್ನಲ್ಲಿ ಮದುವೆಯಾಗಿದ್ದಾರೆ. ಇನ್ನು ಇವರಿಗೆ ವಮಿಕಾ ಎನ್ನುವ ಮಗಳು ಕೂಡ ಇದ್ದಾಳೆ. ಇನ್ನು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ರವರ ವಯಸ್ಸಿನ ಅಂತರ ಹೇಳುವುದಾದರೆ ಅನುಷ್ಕಾ ಶರ್ಮಾ ರವರು ವಿರಾಟ್ ಕೊಹ್ಲಿ ಅವರಿಗಿಂತ ವಯಸ್ಸಿನಲ್ಲಿ ಆರು ತಿಂಗಳು ದೊಡ್ಡವರು.

ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರನಾಗಿರುವ ಡೇವಿಡ್ ವಾರ್ನರ್ ಕೂಡ ಈ ಲಿಸ್ಟಿನಲ್ಲಿ ಶಾಮಿಲ್ ಆಗುತ್ತಾರೆ. ಹೌದು ಸ್ನೇಹಿತರೆ ಡೇವಿಡ್ ವಾರ್ನರ್ ರವರು ಐಪಿಎಲ್ ನಲ್ಲಿ ಹೈದರಾಬಾದ್ ತಂಡದ ಪರವಾಗಿ ಆಡುತ್ತಾರೆ. ಇನ್ನು ಇವರು ಕೂಡ ತಮ್ಮ ಪತ್ನಿಯಿಂದ ವಯಸ್ಸಿನಲ್ಲಿ ಒಂದು ವರ್ಷ ಚಿಕ್ಕವರು. ಹೌದು ಸ್ನೇಹಿತರೆ ಡೇವಿಡ್ ವಾರ್ನರ್ ರವರು 1986 ರಲ್ಲಿ ಜನಿಸಿದ್ದಾರೆ. ಇನ್ನು ಅವರ ಪತ್ನಿ 1985 ರಲ್ಲಿ ಜನಿಸಿದ್ದಾರೆ. ಇನ್ನು ಡೇವಿಡ್ ವಾರ್ನರ್ ರವರ ಪತ್ನಿ ಯಾವ ಹೀರೋಯಿನ್ ಗೂ ಕೂಡ ಕಮ್ಮಿ ಇಲ್ಲದಂತೆ ಸೌಂದರ್ಯವತಿ ಆಗಿದ್ದಾರೆ.

ಸಚಿನ್ ತೆಂಡುಲ್ಕರ್ ಕ್ರಿಕೆಟ್ ಜಗತ್ತಿನ ದೇವರೆಂದ ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ ಅವರು ಭಾರತೀಯ ಕ್ರಿಕೆಟ್ ನಲ್ಲಿ ಎಂದು ಅಳಿಸಲಾಗದಂತಹ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಹೌದು ಸ್ನೇಹಿತರೆ ಶತಕಗಳ ಶತಕವನ್ನು ಬಾರಿಸಿರುವ ಸಚಿನ್ ತೆಂಡೂಲ್ಕರ್ ಅವರು ಅದೆಷ್ಟೋ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿರುವ ವ್ಯಕ್ತಿತ್ವ. ಇನ್ನು ಸಚಿನ್ ತೆಂಡೂಲ್ಕರ್ ರವರ ಪತ್ನಿ ಅಂಜಲಿ. ಅಂಜಲಿಯವರು ಸಚಿನ್ ತೆಂಡೂಲ್ಕರ್ ಅವರನ್ನು ಮೊದಲು ಭೇಟಿಯಾಗಿದ್ದು ಏರ್ಪೋರ್ಟ್ನಲ್ಲಿ. ಇನ್ನು ಸಚಿನ್ ತೆಂಡೂಲ್ಕರ್ ಅವರಿಗಿಂತ ಅವರ ಪತ್ನಿ ಅಂಜಲಿ ಅವರು ವಯಸ್ಸಿನಲ್ಲಿ ಆರು ವರ್ಷ ದೊಡ್ಡವರು. ಇನ್ನು ಇವರಿಗೆ ಸಾರಾ ತಂಡುಲ್ಕರ್ ಎನ್ನುವ ಹೆಣ್ಣುಮಗಳು ಹಾಗೂ ಅರ್ಜುನ್ ತೆಂಡೂಲ್ಕರ್ ಎನ್ನುವ ಗಂಡು ಮಗ ಕೂಡ ಇದ್ದಾರೆ.

ಶಿಖರ್ ಧವನ್ ಶಿಖರ್ ಧವನ್ ರವರ ವೈವಾಹಿಕ ಜೀವನ ಸ್ವಲ್ಪ ವಿಶೇಷವಾಗಿದೆ. ರವರ ಪತ್ನಿ ಆಯೇಷಾ ಮುಖರ್ಜಿ ಈಗಾಗಲೇ ಮದುವೆಯಾಗಿ ಎರಡು ಮಕ್ಕಳನ್ನು ಕೂಡ ಪಡೆದಿದ್ದರು. ಇದಾದ ನಂತರ ಮೊದಲ ಮದುವೆಯಾಗಿದ್ದ ಅಂತಹ ವ್ಯಕ್ತಿಗೆ ವಿಚ್ಛೇದನವನ್ನು ನೀಡಿ ಶಿಖರ್ ಧವನ್ ರವರನ್ನು ವಿವಾಹವಾಗುತ್ತಾರೆ. ನಂತರ ಇವರಿಗೆ ಒಂದು ಮಗು ಕೂಡ ಜನಿಸುತ್ತದೆ. ಇನ್ನು ಶಿಖರ್ ಧವನ್ ಅವರಿಗಿಂತ ಅವರ ಪತ್ನಿ ಆಯೇಷಾ ಮುಖರ್ಜಿ ವಯಸ್ಸಿನಲ್ಲಿ ಹತ್ತು ವರ್ಷ ದೊಡ್ಡವರು. ಇನ್ನು ಇತ್ತೀಚಿಗಷ್ಟೇ ಇವರಿಬ್ಬರು ವಿವಾಹ ವಿಚ್ಛೇದನವನ್ನು ಪಡೆದುಕೊಂಡಿರುವುದನ್ನು ಪತ್ನಿ ಆಯೇಷಾ ಮುಖರ್ಜಿ ತಮ್ಮ ಸಾಮಾಜಿಕ ಜಾಲತಾಣಗಳ ಕತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಬಹಿರಂಗ ಪಡಿಸಿದ್ದಾರೆ. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.