ಆರ್ಸಿಬಿ ತಂಡ ಸೇರಿಕೊಂಡ ಮೇಲೆ ತಮ್ಮ ಯಶಸ್ಸಿನ ಹಿಂದಿನ ರಹಸ್ಯ ಬಿಚ್ಚಿಟ್ಟ ಮ್ಯಾಕ್ಸವೆಲ್ – ಏನು ಗೊತ್ತಾ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಸದ್ಯ ಆರ್ಸಿಬಿ ತಂಡ ಯಶಸ್ಸಿನ ಉತ್ತುಂಗದಲ್ಲಿದೆ. ಅದಕ್ಕೆ ಪ್ರಮುಖ ಕಾರಣವೆಂದರೇ ಗ್ಲೆನ್ ಮ್ಯಾಕ್ಸವೆಲ್. ಇಷ್ಟು ವರ್ಷ ಆರ್ಸಿಬಿ ನೆಚ್ಚಿಕೊಳ್ಳುತ್ತಿದ್ದದ್ದು ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ರವರನ್ನು. ಇಬ್ಬರಲ್ಲಿ ಯಾರಾದರೊಬ್ಬರು ಅದ್ಭುತವಾಗಿ ಆಡಿ ತಂಡವನ್ನ ಅಪಾಯದಿಂದ ಪಾರು ಮಾಡಿದ ನಿದರ್ಶನಗಳು ಸಾಕಷ್ಟು ಇವೆ. ಆದರೇ ಈ ಸೀಸನ್ ನಲ್ಲಿ ಎಬಿ ಡಿ ಬ್ಯಾಟ್ ನಿಂದ ರನ್ನುಗಳು ಬಂದೇ ಇಲ್ಲ. ಆದರೂ ಆರ್ಸಿಬಿ ತಂಡ ಲೀಗ್ ಹಂತದಲ್ಲಿ ಇನ್ನು ಎರಡು ಪಂದ್ಯಗಳು ಬಾಕಿ ಇರುವಂತೆ ಕ್ವಾಲಿಫೈ ಆಗಿದೆ.

ಈ ಸೀಸನ್ ನಲ್ಲಿ ತಂಡವನ್ನು ಕೂಡಿಕೊಂಡಿರುವ ಆಸ್ಟ್ರೇಲಿಯಾದ ಪಿಂಚ್ ಹಿಟ್ಟರ್ ಬ್ಯಾಟ್ಸಮನ್ ಗ್ಲೆನ್ ಮ್ಯಾಕ್ಸವೆಲ್ ಸತತ ಮೂರು ಅರ್ಧ ಶತಕಗಳನ್ನ ಭಾರಿಸುವ ಮೂಲಕ ತಮ್ಮ ಇರುವಿಕೆಯನ್ನ ಸಾಬೀತು ಪಡಿಸಿದ್ದಾರೆ. ಅದಲ್ಲದೇ ಮ್ಯಾಕ್ಸವೆಲ್ ವಿಕೇಟ್ ಎಷ್ಟು ಮಹತ್ವದ್ದು ಎಂದು ಸಹ ನಿರೂಪಿಸಿದ್ದಾರೆ. ಕಳೆದ ವರ್ಷ ಯು.ಎ.ಇ ಯಲ್ಲಿ ನಡೆದ ಸರಣಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡಿದ್ದ ಮ್ಯಾಕ್ಸವೆಲ್ ಒಂದೇ ಒಂದು ಸಿಕ್ಸರ್ ಸಹ ಭಾರಿಸಿರಲಿಲ್ಲ. ಮೇಲಾಗಿ ಆ ಸೀಸನ್ ನಲ್ಲಿ ನೂರು ರನ್ ಸಹ ಹೊಡೆದಿರಲಿಲ್ಲ. ಆ ಕಾರಣಕ್ಕಾಗಿ ಪಂಜಾಬ್ ಫ್ರಾಂಚೈಸಿ ಅವರನ್ನ ಕೈ ಬಿಟ್ಟಿತ್ತು. ಹರಾಜಿನಲ್ಲಿ ಬರೋಬ್ಬರಿ ಹದಿನಾಲ್ಕು ಕೋಟಿಗೆ ಖರೀದಿಸಿದ ಆರ್ಸಿಬಿ ಮ್ಯಾಕ್ಸವೆಲ್ ಗೆ ಅವಕಾಶ ನೀಡಿತು.

ಆರ್ಸಿಬಿ ತಂಡ ಸೇರಿಕೊಂಡ ಮ್ಯಾಕ್ಸ್ ವೆಲ್ ಬ್ಯಾಟಿಂಗ್,ಬೌಲಿಂಗ್ ಮತ್ತು ಫೀಲ್ಡಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಈ ಭಾರಿ ಉತ್ತಮ ಪ್ರದರ್ಶನದ ಹಿಂದಿನ ರಹಸ್ಯದ ಬಗ್ಗೆ ಮುಕ್ತವಾಗಿ ಮಾತನಾಡಿರುವ ಮ್ಯಾಕ್ಸಿ, ಆರ್ಸಿಬಿ ತಂಡ ನನ್ನ ರೋಲ್ ಬಗ್ಗೆ ನನಗೆ ಸಂಪೂರ್ಣವಾದ ಸ್ವಾತಂತ್ರ ನೀಡಿದೆ. ನನಗೆ ಬ್ಯಾಟಿಂಗ್ ನಲ್ಲಿ ಇಷ್ಟವಾದ ಕ್ರಮಾಂಕವೆಂದರೇ ನಾಲ್ಕನೇ ಕ್ರಮಾಂಕ. ನಾನು ಆಸ್ಟ್ರೇಲಿಯಾ ತಂಡಕ್ಕೂ ಅದೇ ಕ್ರಮಾಂಕದಲ್ಲಿ ಆಡುತ್ತೇನೆ. ಆ ಕ್ರಮಾಂಕ ನೀಡಿದ್ದಕ್ಕೆ ನನಗೆ ಮಾನಸಿಕವಾಗಿ ಖುಷಿಯಾಗಿದೆ. ಅದು ನನ್ನ ಪ್ರದರ್ಶನದ ಮೇಲೂ ಉತ್ತಮ ಪರಿಣಾಮ ಬೀರುತ್ತಿದೆ ಎಂದು ಹೇಳಿದರು. ಈ ಭಾರಿ ಆರ್ಸಿಬಿ ಖಂಡಿತವಾಗಿ ಕಪ್ ಗೆಲ್ಲುತ್ತದೆ ಎಂದು ಭರವಸೆ ಸಹ ನೀಡಿದರು.

ಆರಂಭಿಕರಾಗಿ ದೇವದತ್ ಪಡಿಕಲ್, ವಿರಾಟ್ ಕೊಹ್ಲಿ ಸ್ಥಾನ ಭದ್ರವಾಗಿದೆ. ಮೂರನೇ ಕ್ರಮಾಂಕದಲ್ಲಿ ವಿಕೇಟ್ ಕೀಪರ್ ಬ್ಯಾಟ್ಸಮನ್ ಇದ್ದರೇ, ನಾಲ್ಕನೇ ಕ್ರಮಾಂಕದಲ್ಲಿ ಮ್ಯಾಕ್ಸವೆಲ್ ಇದ್ದರೇ, ಐದನೇ ಕ್ರಮಾಂಕದಲ್ಲಿ ಎಬಿ ಡಿ ವಿಲಿಯರ್ಸ್ ಸ್ಥಾನ ಭದ್ರವಾಗಿದೆ. ಆರ್ಸಿಬಿ ಮುಂದಿನ ಪಂದ್ಯವನ್ನ ಎಸ್.ಆರ್.ಎಚ್ ವಿರುದ್ದ ಆಡಲಿದ್ದು, ನಂತರದ ಕೊನೆಯ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಆಡಲಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.