ಪ್ರೇಮಪಕ್ಷಿಗಳಾಗಿ ನಂತರದ ದಿನಗಳಲ್ಲಿ ಬ್ರೇಕ್ ಮಾಡಿಕೊಂಡ ದಕ್ಷಿಣ ಭಾರತೀಯ ನಟಿಯರ ಪ್ರೇಮ ಕಥೆಗಳು. ಯಾರ್ಯಾರಿದ್ದಾರೆ ಗೊತ್ತಾ ಲಿಸ್ಟಿನಲ್ಲಿ.

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇಂದಿನ ವಿಚಾರದಲ್ಲಿ ನಾವು ನಿಮಗೆ ನಮ್ಮ ದಕ್ಷಿಣ ಭಾರತದ ಖ್ಯಾತ ನಟಿಯರು ಕೆಲವರು ಪ್ರೀತಿಸಿ ಮದುವೆಯಾಗಿದ್ದರೆ ಇನ್ನು ಕೆಲವರು ಎಂಗೇಜ್ಮೆಂಟ್ ಮಾಡಿಕೊಂಡವರಿದ್ದಾರೆ ಇನ್ನು ಕೆಲವರು ಅವರ ಜೊತೆಗೆ ಸುತ್ತಾಡಿ ಸುದ್ದಿಯಾಗಿದ್ದಾರೆ. ಹೌದು ಸ್ನೇಹಿತರೆ ಇಂದಿನ ವಿಚಾರದಲ್ಲಿ ನಾವು ಸಂಬಂಧವನ್ನು ಮುರಿದುಕೊಂಡು ಜನಪ್ರಿಯ ನಟಿಯರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಇಂದು 5 ದಕ್ಷಿಣ ಭಾರತದ ಖ್ಯಾತ ನಟಿಯರ ಪ್ರೇಮಕಥೆಗಳು ಮುರಿದುಬಿದ್ದುದರ ಕುರಿತಂತೆ ಮಾತನಾಡಲು ಹೊರಟಿದ್ದೇವೆ ತಪ್ಪದೆ ಕೊನೆಯವರೆಗೂ ಓದಿ.

ರಶ್ಮಿಕಾ ಮಂದಣ್ಣ ಹೌದು ಸ್ನೇಹಿತರೆ ರಶ್ಮಿಕ ಮಂದಣ್ಣ ನವರ ಕುರಿತಂತೆ ನಿಮಗೆಲ್ಲಾ ಗೊತ್ತಿರುವಂತೆ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರ ಜಗತ್ತಿಗೆ ಪಾದಾರ್ಪಣೆ ಮಾಡಿ ಇಂದು ತೆಲುಗು ಚಿತ್ರರಂಗದ ಮೂಲಕ ಜನಪ್ರಿಯರಾಗಿ ಭಾರತದಾದ್ಯಂತ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಹೆಚ್ಚು ಬೇಡಿಕೆ ಹಾಗೂ ಜನಪ್ರಿಯತೆಯನ್ನು ಪಡೆದಿರುವ ನಟಿಯಾಗಿದ್ದಾರೆ. ಇನ್ನು ಕಿರಿಕ್ ಪಾರ್ಟಿ ಸಂದರ್ಭದಲ್ಲಿ ರಶ್ಮಿಕ ಮಂದಣ್ಣ ನವರು ರಕ್ಷಿತ್ ಶೆಟ್ಟಿ ಅವರನ್ನು ಪ್ರೀತಿಸಿ ಮನೆಯವರ ಸಮ್ಮುಖದಲ್ಲಿ ಅದ್ದೂರಿಯಾಗಿ ಎಂಗೇಜ್ಮೆಂಟ್ ಕೂಡ ಆಗಿದ್ದರು. ಆದರೆ ಯಾರ ಕಣ್ಣು ತಗಲಿತೋ ಏನೋ ಇವರಿಬ್ಬರು ಸದ್ದಿಲ್ಲದಂತೆ ದೂರಾದರು. ಇನ್ನು ಎಲ್ಲಿಯೂ ಇವರಿಬ್ಬರು ತಾವು ಏಕೆ ದೂರವಾಗಿದ್ದೇವೆ ಎಂಬುದರ ಕುರಿತಂತೆ ಇಂದಿಗೂ ಕೂಡ ಬಾಯಿಬಿಟ್ಟಿಲ್ಲ. ಆದರೂ ಕೂಡ ಇತ್ತೀಚಿನ ದಿನಗಳಲ್ಲಿ ಇವರಿಬ್ಬರು ಟ್ರೆಂಡಿಂಗ್ ಟಾಪಿಕ್ ಆಗಿದ್ದಾರೆ.

ಸಮಂತ ನಿಮಗೆಲ್ಲ ತಿಳಿದಿರುವಂತೆ ಸಮಂತ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯವಾಗಿರುವ ನಟಿಯಾಗಿದ್ದಾರೆ. ಇವರು ನಟ ನಾಗಚೈತನ್ಯ ರವರನ್ನು ಹತ್ತು ವರ್ಷಗಳ ಕಾಲ ಪ್ರೀತಿಸಿ 2017 ರಲ್ಲಿ ಹಿಂದೂ ಹಾಗೂ ಕ್ರೈಸ್ತ ಧರ್ಮಗಳ ಪ್ರಕಾರ ಅದ್ದೂರಿಯಾಗಿ ಮದುವೆಯಾಗಿ ನಾಲ್ಕು ವರ್ಷಗಳ ಕಾಲ ಸಂಸಾರ ನಡೆಸಿದ ನಂತರ ಮೊನ್ನೆಯಷ್ಟೇ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದಾರೆ ಎಂಬುದು. ಕೆಲವರು ಪ್ರಕಾರ ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ನಲ್ಲಿ ಸಮಂತಾ ರವರು ನಟಿಸಿದ ಕೆಲವು ದೃಶ್ಯಗಳೇ ಇವರಿಬ್ಬರ ವಿವಾಹ ವಿಚ್ಛೇದನಕ್ಕೆ ಕಾರಣ ಎಂದು ಹೇಳಿದರೆ ಇನ್ನೂ ಕೆಲವರು ನಾಗಚೈತನ್ಯ ರವರು ಸಮಂತ ಅವರ ಕುರಿತಂತೆ ಸಾಕಷ್ಟು ಪೊಸೆಸಿವ್ ಆಗಿದ್ದರು. ಈ ಕಾರಣದಿಂದಾಗಿ ಇಬ್ಬರು ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ಕೂಡ ಹೇಳುತ್ತಾರೆ.

ನಯನತಾರ ನಟಿ ನಯನತಾರಾ ರವರು ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂದು ಖ್ಯಾತರಾಗಿದ್ದಾರೆ. ನಟ ನಿರ್ದೇಶಕ ಹಾಗೂ ನೃತ್ಯಗಾರರ ರಾಗಿರುವ ಪ್ರಭುದೇವರ ಅವರು ತಮ್ಮ ಪತ್ನಿಯನ್ನು ದೂರಮಾಡಿ ಸಂಪೂರ್ಣವಾಗಿ ನಯನತಾರ ರವರ ಪ್ರೀತಿಯಲ್ಲಿ ಬಿದ್ದಿದ್ದರು. ಇಷ್ಟು ಮಾತ್ರವಲ್ಲದೆ ನಯನತಾರಾ ರವರೊಂದಿಗೆ ಒಂದು ವರ್ಷ ಲಿವಿಂಗ್ ಟುಗೆದರ್ ರಿಲೇಶನ್ಶಿಪ್ ನಲ್ಲಿ ಕೂಡ ಇದ್ದರು. ಆದರೆ ಈ ಜೋಡಿ ಕೊನೆಗಳಿಗೆಯಲ್ಲಿ ಏನೋ ಮಿಸ್ಸಾಗಿ ದೂರವಾಗುತ್ತಾರೆ.

ಅಮಲಾ ಪೌಲ್ ನಟಿ ಅಮಲಾ ಪೌಲ್ ಅವರು ಕನ್ನಡ ತಮಿಳು ತೆಲುಗು ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸು ಕಂಡಿರುವ ನಟಿಯಾಗಿದ್ದಾರೆ ಇದು ನಿಮಗೆ ಗೊತ್ತಿದೆ. ಇನ್ನು ಇವರು ನಿರ್ದೇಶಕ ಎ ಎಲ್ ವಿಜಯ ರವರನ್ನು ಮದುವೆಯಾಗಿ ಮೂರು ವರ್ಷದ ಒಳಗಡೆನೆ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ. ಇನ್ನು ಈಗ ವಿಜಯ ರವರು ಬೇರೆ ಮದುವೆಯಾಗಿದ್ದಾರೆ.

ರೇಣು ದೇಸಾಯಿ ನಟಿ ರೇಣು ದೇಸಾಯಿ ಹಾಗೂ ತೆಲುಗು ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು 2009 ರಲ್ಲಿ ಮದುವೆಯಾಗುತ್ತಾರೆ. ಇವರಿಗೆ ಇಬ್ಬರು ಮಕ್ಕಳು ಕೂಡ ಜನಿಸುತ್ತಾರೆ ಆದರೆ 2012 ರಲ್ಲಿ ಯಾರಿಗೂ ಕೂಡ ಹೇಳದೆ ಕೇಳದೆ ಸುದ್ದಿ ಇಲ್ಲದೆ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ. ಇನ್ನು ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.

Get real time updates directly on you device, subscribe now.