ಅಕ್ಕ ಅಕ್ಕ ಎಂದು ಸಹಾಯ ಮಾಡಿದ್ದ ಯೋಗೇಶ್ ವಿರುದ್ಧ ವಿಜಯಲಕ್ಷ್ಮಿ ರವರ ಗರಂ ಆಗಲು ಕಾರಣವೇನು ಗೊತ್ತೇ?? ಅಲ್ಲಿ ನಡೆದ್ದದೇನು ಗೊತ್ತೇ?

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹೆಚ್ಚು ಸುದ್ದಿಯಲ್ಲಿರುವ ವಿಷಯವೆಂದರೆ ನಟಿ ವಿಜಯಲಕ್ಷ್ಮಿ ಅವರ ಕುರಿತಂತೆ. ಹೌದು ಸ್ನೇಹಿತರೆ ನಿಮಗೆಲ್ಲ ಹಲವಾರು ಸಮಯಗಳಿಂದ ವಿಜಯಲಕ್ಷ್ಮಿ ಅವರ ಕುರಿತಂತೆ ವಿಚಾರಗಳು ಅವರ ವಿಡಿಯೋ ಮೂಲಕ ತಿಳಿದಿದೆ ಎಂದು ಭಾವಿಸುತ್ತೇನೆ. ಹೌದು ಸ್ನೇಹಿತರೆ ಈ ಹಿಂದೆ ಮೊದಲು ವಿಜಯಲಕ್ಷ್ಮಿಯವರು ತಮ್ಮ ತಾಯಿ ಹಾಗೂ ಅಕ್ಕನಿಗಾಗಿ ತೆಗೆಸಿ ನೀಡಬೇಕೆಂಬ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಾಕಷ್ಟು ಸುದ್ದಿಯಾಗಿದ್ದರು.

ಇದಾದ ನಂತರ ತಮಗೆ ಇರಲು ಮನೆ ಇಲ್ಲ ಎಂಬ ಕಾರಣಕ್ಕಾಗಿ ಕಾರವಾರಕ್ಕೆ ಹೋಗಿ ಸುದ್ದಿಯಾಗಿದ್ದರು. ಇದಾದ ನಂತರ ತಮ್ಮ ಅಕ್ಕ ಹಾಗೂ ತಾಯಿಯನ್ನು ಕರೆದುಕೊಂಡು ವಿಜಯಲಕ್ಷ್ಮಿ ಅವರು ಬೆಂಗಳೂರಿನ ಹೋಟೆಲ್ಗೆ ವಾಪಸಾಗಿದ್ದರು. ಅಲ್ಲಿಗೆ ಬಂದ ಎರಡೇ ದಿನಕ್ಕೆ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು ವಿಜಯಲಕ್ಷ್ಮಿಯವರು. ವಿಜಯಲಕ್ಷ್ಮಿ ಅವರು ತಾಯಿಯನ್ನು ಕಳೆದುಕೊಂಡ ನಂತರ ನಟಿ ಪ್ರೇಮ ರವರಿಗೆ ಕರೆ ಮಾಡಿದ್ದರು ಅವರು ಭಾಮ ಹರೀಶ್ ರವರಿಗೆ ವಿಚಾರವನ್ನು ತಿಳಿಸಿದರು.

ಅವರು ಬಂದು ಹೋಟೆಲಿನ ಬಿಲ್ಲನ್ನು ಕಟ್ಟುತ್ತಾರೆ ಹಾಗೂ ಜನಸ್ನೇಹಿ ಯೋಗೇಶ್ ರವರಿಗೆ ಈ ಕುರಿತಂತೆ ಸಹಾಯ ಮಾಡಲು ತಿಳಿಸುತ್ತಾರೆ. ಯೋಗೇಶ್ ರವರು ಒಂದು ಅದಾಗಲೇ ಸಂಜೆಯಾಗಿತ್ತು ಹಾಗಾಗಿ ಅಂ’ತ್ಯಸಂಸ್ಕಾರವನ್ನು ನಾಳೆ ಮಾಡುವ ಯೋಚನೆಯಿಂದ ದೇಹವನ್ನು ಹಾಗೂ ವಿಜಯಲಕ್ಷ್ಮಿ ಹಾಗೂ ಅವರ ಅಕ್ಕನನ್ನು ಕರೆದುಕೊಂಡು ಆಶ್ರಮಕ್ಕೆ ಹೋಗುತ್ತಾರೆ. ಕರೆದುಕೊಂಡು ಹೋಗಿ ಅವರ ಲಿಂಗಾಯಿತ ಸಂಪ್ರದಾಯದಂತೆ ಏನೆಲ್ಲ ಮಾಡಬೇಕು ಆ ವಿಧಿವಿಧಾನಗಳನ್ನು ಪೂರೈಸಿದರು.

ತಾವೇ ಸ್ವಂತ ಮಗನ ಹಾಗೆ ಮುಂದೆ ನಿಂತು ಎಲ್ಲಾ ಸಂಸ್ಕಾರಗಳನ್ನು ಕಾರ್ಯಗಳನ್ನು ಮುಗಿಸುತ್ತಾರೆ ಯೋಗೇಶ್ ರವರು. ಇದಾದ ನಂತರ ಯೋಗೇಶ್ ರವರು ಯಾರಿಗಾದರೂ ಸಹಾಯ ಮಾಡುವ ಇಚ್ಚೆಯಿದ್ದರೆ ಸಹಾಯ ಮಾಡಬಹುದು ಎಂಬ ನಿಟ್ಟಿನಲ್ಲಿ ವಿಜಯಲಕ್ಷ್ಮಿಯವರ ಸಂಬಂಧಿಕರ ಬ್ಯಾಂಕ್ ಖಾತೆಯ ವಿವರವನ್ನು ನೀಡಿ ಸಹಾಯ ಮಾಡಲು ವಿನಂತಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಹಲವಾರು ದೇಣಿಗೆ ಒಟ್ಟಾಗುತ್ತದೆ.

ಈ ಸಂದರ್ಭದಲ್ಲಿ ವಿಜಯಲಕ್ಷ್ಮಿಯವರ ಸಂಬಂಧಿ ಅವರು ಸರಿಯಾಗಿ ಫೋನಿಗೆ ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ತಮ್ಮ ಟ್ರಸ್ಟಿನ ಬ್ಯಾಂಕ್ ಡೀಟೇಲ್ಸ್ ಗೆ ಹಣವನ್ನು ಹಾಕಬಹುದು ಎಂಬುದಾಗಿ ವಿಜಯಲಕ್ಷ್ಮಿಯವರ ಒಪ್ಪಿಗೆ ಮೇಲೆ ವಿವರಗಳನ್ನು ನೀಡುತ್ತಾರೆ. ಆದರೆ ವಿಜಯಲಕ್ಷ್ಮಿಯವರು ಕೆಲವೇ ದಿನಗಳಲ್ಲಿ ಯೋಗೇಶ್ ಅವರ ಅಕೌಂಟ್ಗೆ ದುಡ್ಡು ಹಾಕಬೇಡಿ ಅದು ನನಗೆ ಸಿಗುವುದಿಲ್ಲ ಎಂಬುದಾಗಿ ಅನಿರೀಕ್ಷಿತ ಹೇಳಿಕೆ ನೀಡುತ್ತಾರೆ.

ಇದು ಯೋಗೇಶ್ ಅವರಿಗೆ ಸಾಕಷ್ಟು ಬೇಸರವನ್ನುಂಟು ಮಾಡುತ್ತದೆ ಅದಕ್ಕಾಗಿಯೇ ಈಗ ವಾಣಿಜ್ಯ ಮಂಡಳಿಗೆ ಆಗಮಿಸಿ ತಮ್ಮ ಖಾತೆಗೆ ಬಂದಿದ್ದ ವಿಜಯಲಕ್ಷ್ಮಿಯವರ 330000 ಹಣವನ್ನು ಅವರಿಗೆ ನೀಡಿ ಹೋಗಿದ್ದಾರೆ. ದುಡ್ಡು ಬಂದ ನಂತರ ಮನುಷ್ಯನ ಮನಸ್ಸು ಅನ್ನೋದು ಹೇಗೆ ಬೇಕಾದರೂ ಬದಲಾವಣೆ ಆಗಬಹುದು ಎಂಬುದಕ್ಕೆ ಇದೇ ಒಂದು ಉದಾಹರಣೆ ಎಂದು ಹೇಳುತ್ತಾರೆ. ವಿಜಯಲಕ್ಷ್ಮಿ ಅವರು ಈ ರೀತಿ ಹೇಳುವುದಕ್ಕೆ ಕಾರಣವೇನು ಹಾಗೂ ಈರೀತಿ ಹೇಳಿದ್ದು ಸರಿಯೇ ಯೋಗೇಶ್ ರವರು ನ್ಯಾಯಯುತವಾಗಿ ಇದ್ದಾರೆಯೇ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.

Get real time updates directly on you device, subscribe now.