ಇತ್ತೀಚೆಗಷ್ಟೇ ವಿಚ್ಚೇದದ ಪಡೆದಿರುವ ಸಮಂತಾ ಹಾಗೂ ನಾಗಚೈತನ್ಯ ರವರ ಮದುವೆಯಾಗಲು ಖರ್ಚು ಮಾಡಿದ್ದ ಹಣವೆಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಈಗಾಗಲೇ ಸಮಂತಾ ಹಾಗೂ ನಾಗಚೈತನ್ಯ ರವರ ವಿವಾಹ ವಿಚ್ಛೇದನ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಪೂರ್ತಿಯಾಗಿ ಹರಡಿಕೊಂಡು ಬಿಟ್ಟಿದೆ. ಹೌದು ಸ್ನೇಹಿತರೆ ಸಾಕಷ್ಟು ದಿನಗಳಿಂದ ಇವರಿಬ್ಬರು ಏನನ್ನು ಹೇಳಿಕೊಂಡಿರಲಿಲ್ಲ ಹಾಗಾಗಿ ಇವರ ವೈವಾಹಿಕ ವಿಚ್ಛೇದನದ ಸುದ್ದಿ ಗಾಳಿ ಸುದ್ದಿಯಂತೆ ಹರಿದಾಡುತ್ತಿತ್ತು.
ಇನ್ನು ಸಮಂತಾ ರವರು ಹೈದರಾಬಾದ್ ಮನೆ ಬಿಟ್ಟು ಮುಂಬೈಗೆ ಹೋಗಿ ಸೆಟಲ್ ಆಗುತ್ತಾರೆ ಎಂಬ ಮಾತುಗಳು ಕೂಡ ಕೇಳಿಬಂದಿತ್ತು ಆದರೆ ಸಮಂತ ಇದಕ್ಕೆ ನಾನು ಹೈದರಾಬಾದ್ನಲ್ಲಿ ನೆಲೆಸುತ್ತೇನೆ ಎಂಬುದಾಗಿ ಹೇಳಿಕೊಂಡಿದ್ದರು ಆದರೆ ಇವರಿಬ್ಬರು ತಮ್ಮ ಮದುವೆ ಕುಡಿದಂತೆ ಎಲ್ಲೂ ಕೂಡ ಮಾತನಾಡಿರಲಿಲ್ಲ. ಆದರೆ ಈಗ ಸ್ವತಹ ಇಬ್ಬರೂ ಕೂಡ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ತಾವಿಬ್ಬರೂ ಬೇರೆ ಆಗುತ್ತಿರುವುದರ ಕುರಿತಂತೆ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಅಲ್ಲಿಗೆ ಸಮಂತ ಹಾಗೂ ನಾಗಚೈತನ್ಯ ಇಬ್ಬರೂ ಕೂಡ ವಿವಾಹ ವಿಚ್ಛೇದನ ಪಡೆದುಕೊಳ್ಳುತ್ತಿರುವುದು ದೃಢೀಕರಣಗೊಂಡಿದೆ.

ಇಲ್ಲಿಗೆ ನಾವು ಮಾತನಾಡಲು ಹೊರಟಿರುವುದು ಅವರ ವೈವಾಹಿಕ ವಿಚ್ಛೇದನದ ಕುರಿತಂತಲ್ಲ ಬದಲಾಗಿ ಅವರ ಮದುವೆಗೆ ಎಷ್ಟು ಖರ್ಚಾಗಿದೆ ಎಂಬ ಕುರಿತಂತೆ. ಹೌದು ಸ್ನೇಹಿತರೆ ಸಮಂತ ಹಾಗೂ ನಾಗಚೈತನ್ಯ ರವರು ಇಬ್ಬರೂ ಕೂಡ ಕ್ರೈಸ್ತ ಹಾಗೂ ಹಿಂದೂ ಧರ್ಮದ ಪ್ರಕಾರ ಕೇವಲ 150 ಜನರ ಮುಂದೆ ಅದ್ದೂರಿಯಾಗಿ ವಿವಾಹವಾಗಿದ್ದರು. ಇನ್ನು ಇವರಿಬ್ಬರ ಮದುವೆಗೆ ಬರೋಬ್ಬರಿ 10 ಕೋಟಿ ರೂಪಾಯಿ ಖರ್ಚಾಗಿದೆ ಎಂದು ತಿಳಿದುಬಂದಿದೆ. ಇಷ್ಟೊಂದೆಲ್ಲಾ ಖರ್ಚುಮಾಡಿ ಮದುವೆಯಾದ ಇವರಿಬ್ಬರು ಈಗ ದೂರವಾಗುತ್ತಿದ್ದಾರೆ ಎನ್ನುವುದೇ ವಿಪರ್ಯಾಸ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.