ಕೊನೆಗೂ ಫಿಕ್ಸ್ ಆಯಿತು ದ್ರಾವಿಡ್ ರವರ ಆತ್ಮ ಚರಿತ್ರೆ, ನಟನಾಗಿ ಅಬ್ಬರಿಸಲಿರುವ ಕನ್ನಡದ ನಟ ಯಾರು ಗೊತ್ತೇ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಸಿನಿಮಾ ಬಿಟ್ಟರೆ ಅತ್ಯಂತ ಹೆಚ್ಚು ಜನಪ್ರಿಯತೆ ಹೊಂದಿರುವ ಕ್ಷೇತ್ರವೆಂದರೆ ಅದು ಕ್ರಿಕೆಟ್ ಎಂದರೆ ತಪ್ಪಾಗಲಾರದು. ಒಂದು ಕಾಲದಲ್ಲಿ ಸಚಿನ್ ಔಟ್ ಎಂದರೆ ಟಿವಿಯನ್ನು ಆಫ್ ಮಾಡುತ್ತಿದ್ದರು. ಆದರೆ ಅದಾದ ನಂತರ ಸಚಿನ್ ಹೋದಮೇಲೆ ಕೂಡ ಭಾರತ ಕ್ರಿಕೆಟ್ ತಂಡವನ್ನು ಗೋಡೆಯಂತೆ ನಿಂತು ಕಾಪಾಡಬಲ್ಲ ಕ್ರಿಕೆಟಿಗ ಬಂದಿದ್ದಾನೆಂದು ಕ್ರಿಕೆಟ್ ಪ್ರೇಮಿಗಳು ಕ್ರಿಕೆಟನ್ನು ವೀಕ್ಷಿಸುತ್ತಿದ್ದರು ಅವರೇ ರಾಹುಲ್ ದ್ರಾವಿಡ್.

ಹೌದು ಸ್ನೇಹಿತರೆ ರಾಹುಲ್ ದ್ರಾವಿಡ್ ರವರ ಬಗ್ಗೆ ತಿಳಿಯದವರು ಯಾರಿಲ್ಲ ಹೇಳಿ ಸ್ನೇಹಿತರೆ. ಎಲ್ಲದಕ್ಕಿಂತ ಹೆಚ್ಚಾಗಿ ಟೆಸ್ಟ್ ಕ್ರಿಕೆಟ್ ಎಂದು ಬಂದಾಗ ಭಾರತೀಯ ಕ್ರಿಕೆಟ್ ತಂಡದ ನಂಬರ್1 ಆಟಗಾರನಾಗಿ ರಾಹುಲ್ ದ್ರಾವಿಡ್ ಅವರು ತಮ್ಮನ್ನು ತಾವು ಸಾಬೀತು ಪಡಿಸಿ ಕೊಂಡಿದ್ದಾರೆ. ಸೋಲಿನ ದವಡೆಯಿಂದ ಭಾರತೀಯ ಕ್ರಿಕೆಟ್ ತಂಡವನ್ನು ಹಲವಾರು ಬಾರಿ ಗೆಲುವಿನ ಹೊಸ್ತಿಲಿಗೆ ತಂದು ಬಿಟ್ಟಂತಹ ಖ್ಯಾತಿ ರಾಹುಲ್ ದ್ರಾವಿಡ್ ಅವರಿಗೆ ಸಲ್ಲುತ್ತದೆ. ಕೇವಲ ಕ್ರಿಕೆಟ್ನಲ್ಲಿ ಮಾತ್ರವಲ್ಲದೆ ರಾಹುಲ್ ದ್ರಾವಿಡ್ ಅವರ ವ್ಯಕ್ತಿತ್ವವೂ ಕೂಡ ಅಜಾತಶತ್ರು ವ್ಯಕ್ತಿತ್ವ. ಇನ್ನು ಈಗಾಗಲೇ ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಕ್ರಿಕೆಟಿಗರಾದ ಅಂತಹ ಧೋನಿ ಮೊಹಮ್ಮದ್ ಅಜರುದ್ದಿನ್ ಸಚಿನ್ ತೆಂಡೂಲ್ಕರ್ ಅವರಂತಹ ದಿಗ್ಗಜರ ಬಯೋಪಿಕ್ ಗಳು ಈಗಾಗಲೇ ಬಂದಿದೆ.

ಕಪಿಲ್ ದೇವ್ ರವರ ಬಯೋಪಿಕ್ ಈಗಾಗಲೇ ಬಿಡುಗಡೆಗೆ ಸಜ್ಜಾಗಿದೆ ಹಾಗೂ ಸೌರವ್ ಗಂಗೂಲಿ ಅವರ ಬಯೋಪಿಕ್ ಈಗಾಗಲೇ ಘೋಷಣೆಯಾಗಿದೆ. ಈಗಾಗಲೇ ಅಭಿಮಾನಿಗಳು ರಾಹುಲ್ ದ್ರಾವಿಡ್ ರವರ ಬಯೋಪಿಕ್ ಬರಬೇಕೆಂದು ಕಾತರರಾಗಿ ಕಾಯುತ್ತಿದ್ದಾರೆ. ಇನ್ನು ಬಂದಿರುವ ಹಲವಾರು ಸುದ್ದಿಗಳ ಪ್ರಕಾರ ರಾಹುಲ್ ದ್ರಾವಿಡ್ ರವರ ಬಯೋಪಿಕ್ ಅನ್ನು ಕನ್ನಡದ ಖ್ಯಾತ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೌದು ಸ್ನೇಹಿತರೆ ರಾಹುಲ್ ದ್ರಾವಿಡ್ ರವರೊಂದಿಗೆ ಒಳ್ಳೆಯ ಒಡನಾಟವನ್ನು ಹೊಂದಿರುವ ಕಿಚ್ಚ ಸುದೀಪ್ ರವರು ಕ್ರಿಕೆಟ್ ಕುರಿತಂತೆ ಕೂಡ ಸಾಕಷ್ಟು ಜ್ಞಾನವನ್ನು ಹೊಂದಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಅವರು ರಾಹುಲ್ ದ್ರಾವಿಡ್ ಅವರ ಬಯೋಪಿಕ್ ನಲ್ಲಿ ನಟಿಸುತ್ತಾರ ಎಂಬುದನ್ನು ಕಾದುನೋಡಬೇಕಾಗಿದೆ.

Get real time updates directly on you device, subscribe now.