ಟಾಪ್ ನಟರನ್ನು ಕೂಡ ಬಿಡದೆ ನಡುಗಿಸಿರುವ ಇಂದ್ರಜಿತ್ ರವರ ಕುಟುಂಬ ಹೇಗಿದೆ ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ಜನ ನಿರ್ದೇಶಕರು ಬಂದಿದ್ದಾರೆ. ತಮ್ಮ ವಿಭಿನ್ನ ದೃಷ್ಟಿಕೋನ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಬಗೆಯ ಚಿತ್ರವನ್ನು ನಿರ್ದೇಶಿಸುವ ಕನಸು ಕಂಡು ಚಿತ್ರಗಳನ್ನು ಕೂಡ ಕನ್ನಡ ಚಿತ್ರರಂಗಕ್ಕೆ ನೀಡಿ ಪ್ರೇಕ್ಷಕರು ಆನಂದಿಸುವಂತೆ ಮಾಡಿ ಹೋಗಿದ್ದಾರೆ. ಅಂಥವರಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಕೂಡ ಒಬ್ಬರು. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗಕ್ಕೆ ಗ್ಲಾಮರಸ್ ಹಾಗೂ ಕ್ಲಾಸಿಕ್ ಚಿತ್ರಗಳನ್ನು ನಿರ್ದೇಶಿಸುವ ಲ್ಲಿ ಇಂದ್ರಜಿತ್ ಲಂಕೇಶ್ ಅವರು ಸಾಕಷ್ಟು ಯಶಸ್ವಿಯಾಗಿದ್ದರು.

ಇವರು ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಸೌಂದರ್ಯ ಚಿತ್ರದ ಮೂಲಕ ದೀಪಿಕಾ ಪಡುಕೋಣೆ ಅವರನ್ನು ಕೂಡ ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ಸಲ್ಲುತ್ತದೆ. ಇನ್ನು ಇತ್ತೀಚಿಗಷ್ಟೇ ಇಂದ್ರಜಿತ್ ಲಂಕೇಶ್ ರವರು ಮಲಯಾಳಂ ನಟಿ ಶಕೀಲಾ ರವರ ಜೀವನ ಚರಿತ್ರೆಯನ್ನು ಪ್ಯಾನ್ ಇಂಡಿಯಾ ಚಿತ್ರವಾಗಿ ನಿರ್ದೇಶಿಸಿದ್ದರು. ಇನ್ನು ಮಜಾ ಟಾಕೀಸ್ ನಲ್ಲಿ ಸೃಜನ್ ಲೋಕೇಶ್ ರವರ ಜೊತೆ ಕೂಡ ಕಾಣಿಸಿಕೊಂಡಿದ್ದರು.

ಇವರು ಖ್ಯಾತ ಪತ್ರಕರ್ತ ಪಿ ಲಂಕೇಶರವರ ಹಾಗೂ ಇಂದ್ರ ಲಂಕೇಶರವರ ಪುತ್ರರಾಗಿದ್ದಾರೆ. ಇನ್ನಿವರ ಅಕ್ಕಂದಿರ ಹೆಸರು ಕವಿತಾ ಲಂಕೇಶ್ ಹಾಗೂ ಗೌರಿ ಲಂಕೇಶ್ ಎಂದು. ಇನ್ನು ಇಂದ್ರಜಿತ್ ಲಂಕೇಶ್ ಅವರಿಗೆ ವಿವಾಹವಾಗಿದ್ದು ಇಬ್ಬರು ಗಂಡು ಮಕ್ಕಳಿದ್ದು ಇವರನ್ನು ಕನ್ನಡ ಚಿತ್ರರಂಗಕ್ಕೆ ಬರುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬೇಡದ ವಿಷಯಗಳನ್ನು ಹೋಗಲಾಡಿಸುವಲ್ಲಿ ಸಾಕಷ್ಟು ಪರಿಶ್ರಮ ಪಡುತ್ತಿದ್ದಾರೆ ಇಂದ್ರಜಿತ್ ಲಂಕೇಶ್ ರವರು. ಇಂದ್ರಜಿತ್ ಲಂಕೇಶ್ ರವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನು ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಮೆಂಟ್ ಮಾಡುವ ಮೂಲಕ ಅರಮನೆಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.