ಸ್ಟಾರ್ ನಟರ ಮುಖಾಮುಖಿ ವಿಚಾರಕ್ಕೆ ಶಿವಣ್ಣ ಎಂಟ್ರಿ, ಹೇಳಿದ್ದೇನು ಗೊತ್ತೇ?? ಸ್ಯಾಂಡೆಲ್ವುಡ್ ನಲ್ಲಿ ಮತ್ತೊಮ್ಮೆ ಅಭಿಮಾನಿಗಳ ನಡುವೆ ವಾರ್.
ನಮಸ್ಕಾರ ಸ್ನೇಹಿತರೇ, ಇದೀಗ ಕೋವಿಡ್ ನಿಯಮಗಳನ್ನು ಸಡಿಲಿಸಿದ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಗೆ ಅವಕಾಶ ನೀಡಲಾಗಿದೆ. ಇದರಿಂದ ಚಿತ್ರರಂಗ ತುಂಬಾನೇ ರಿಲೀಫ್ ಕಂಡಿದೆ. ಯಾಕೆಂದ್ರೆ ಚಿತ್ರೀಕರಣ ಮುಗಿಸು ಬಿಡುಗಡೆಗೆ ಸಿದ್ದವಾಗಿರುವ ಚಿತ್ರ ಕೂಡ ತೆರೆಕಾಣದೆ ನೆನೆಗುದಿಗೆ ಬಿದ್ದಿತ್ತು. ಅರ್ಧ ಸೀತ್ ಭರ್ತಿಯಲ್ಲಿ ಚಿತ್ರ ರಿಲೀಸ್ ಮಾಡಿದ್ರೆ ನಷ್ಟ ಆಗೋದು ಪಕ್ಕಾ! ಇನ್ನು ಹೌಸ್ ಫುಲ್ ಗೆ ಕಾಯದೇ ಬೇರೆ ವಿಧಿ ಇರ್ಲಿಲ್ಲ. ಆದರೆ ಈ ಎಲ್ಲಾ ಸಂಕಷ್ಟಗಳು ಸರ್ಕಾರದ ಸಡಿಲಿಕೆಯಿಂದಾಗಿ ತುಸು ದೂರವಾಗಿದೆ ಎನ್ನಬಹುದು!
ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ಅಭಿನಯದ ಚಿತ್ರ ಬಜರಂಗಿ ಅಕ್ಟೋಬರ್ 29 ರಂದು ತೆರೆ ಕಾಣ್ತಾ ಇದೆ. ಇದರಿಂದ ಶಿವಣ್ಣ ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದಾರೆ. ಇನ್ನು ದುನಿಯಾ ವಿಜಯ್ ಅಭಿನಯದ ’ಸಲಗ’ ಹಾಗೂ ಕಿಚ್ಚ ಸುದೀಪ್ ಅಭಿನಯದ ’ ಕೋಟಿಗೊಬ್ಬ 3’ ಈ ಎರಡೂ ಚಿತ್ರಗಳೂ ಬಹು ನಿರೀಕ್ಷೆಯನ್ನು ಹುಟ್ಟು ಹಾಕಿದ ಚಿತ್ರಗಳೆ. ಇದೀಗ ಒಂದೇ ದಿನ ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರಗಳಲ್ಲಿ ಜನ ಯಾವುದನ್ನು ಸ್ವೀಕರಿಸುತ್ತಾರೆ ಎನ್ನುವುದು ದೊಡ್ಡ ಪ್ರಶ್ನೆ.

ಇನ್ನು ಈ ಬಗ್ಗೆ ಮಾತನಾಡಿದ ಶಿವಣ್ಣ, ಸರ್ಕಾರದ ಸಡಿಲಿಕೆ ಬಗ್ಗೆ ಸಂತಸವನ್ನು ವ್ಯಕ್ತಪಡಿಸುತ್ತಾ, ತಮ್ಮ ಸಿನಿಮಾ 2 ಬಾರಿ ರಿಲಿಸಿಂಗ್ ಡೆಟ್ ಮುಂದೆ ಹಾಕಿ ಇದೀಗ ಫೈನಲ್ ಆಗಿ ಮುಂದಿನ ತಿಂಗಳು ಬಿಡುಗಡೆ ಸಿದ್ಧವಾಗಿದ್ದನು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಜೊತೆಗೆ ಒಂದೇ ದಿನ ಬಿಡುಗಡೆಯಾಗಲಿರುವ ದಿಗ್ಗಜರ ಚಿತ್ರಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಣ್ಣ ’ಇದನ್ನು ಸ್ಟಾರ್ ವಾರ್ ಅನ್ನೊ ತರ ಬಿಂಬಿಸಬಾರದು. ಈ ಎರಡೂ ಚಿತ್ರ ಒಂದೇ ದಿನ ತೆರೆಗೆ ಬಂದರೆ ಸಂಕಷ್ಟ ಅನುಭವಿಸುವವರು ನಿರ್ಮಾಪಕರು. ಹಾಗಾಗಿ ನಿರ್ಮಾಪಕರು ಹಾಗೂ ಚಿತ್ರತಂಡದವರು ಕುಳಿತು ಮಾತನಾಡಿ ಒಂದು ನಿರ್ಧಾರಕ್ಕೆ ಬರಬೇಕು’ ಎಂದಿದ್ದಾರೆ.