ನಿಖಿಲ್ ಮಗುವನ್ನು ನೋಡಲು ಬಂದ ಸುಮಲತಾ ಹಾಗೂ ಅಭಿಷೇಕ್ ಅಂಬರೀಶ್ ಕುಮಾರಣ್ಣ ಮಾಡಿದ್ದೇನು ಗೊತ್ತಾ??
ನಮಸ್ಕಾರ ಸ್ನೇಹಿತರೇ ಇತ್ತೀಚಿಗಷ್ಟೇ ನಮ್ಮ ರಾಜ್ಯದಲ್ಲಿ ಗಣ್ಯರ ಮನೆಯಲ್ಲಿ ಸಾಕಷ್ಟು ಸಂತಸದ ಸುದ್ದಿಗಳು ಬಂದಿರುವುದನ್ನು ನೀವು ಕೇಳಿರುತ್ತೀರಿ. ಈಗ ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ಯುವರಾಜ ಎಂದು ಖ್ಯಾತರಾಗಿರುವ ನಿಖಿಲ್ ಕುಮಾರ್ ರವರಿಗೆ ಗಂಡುಮಗು ಜನಿಸಿರುವುದು.
ಹೌದು ಸ್ನೇಹಿತರೆ ನಿಖಿಲ್ ಕುಮಾರ್ ಹಾಗೂ ರೇವತಿ ದಂಪತಿಗಳು ಮದುವೆಯಾಗಿ ತೋಟದ ಮನೆಯಲ್ಲಿ ಕಾಲಕಳೆಯುತ್ತಿದ್ದರು ಇಲ್ಲೇ ಕೂಡ ತಾನು ತಂದೆಯಾಗಲು ಸುದ್ದಿಯನ್ನು ಕೂಡ ನಿಖಿಲ್ ಕುಮಾರ್ ಅವರು ಹಂಚಿಕೊಳ್ಳುತ್ತಾರೆ. ಇದಾದನಂತರ ಇತ್ತೀಚಿಗಷ್ಟೇ ಬೆಂಗಳೂರು ನಗರದ ಪ್ರತಿಷ್ಠಿತ ಕನ್ವೆನ್ಷನ್ ಹಾಲ್ನಲ್ಲಿ ನಿಖಿಲ್ ಕುಮಾರ್ ರವರು ಹಲವಾರು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ತಮ್ಮ ಹೆಂಡತಿ ರೇವತಿ ಅವರ ಸೀಮಂತ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿಕೊಡುತ್ತಾರೆ. ಹೆಂಡತಿ ರೇವತಿ ಅವರ ಇಚ್ಛೆಯಂತೆ ಎಲ್ಲವೂ ನಡೆಯುತ್ತದೆ. ನಿಖಿಲ್ ಕುಮಾರ್ ರವರ ಪತ್ನಿ ರೇವತಿ ಅವರು ಮೊನ್ನೆಯಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದು ಈಗಾಗಲೇ ಸ್ಯಾಂಡಲ್ವುಡ್ ನಿಂದ ಹಾಗೂ ರಾಜಕೀಯ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತದೆ.
ಹೌದು ಸ್ನೇಹಿತರೆ ಇದರಲ್ಲಿಯೂ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅಂಬರೀಶ್ ಅವರು ಹಳೆಯ ವೈಮನಸ್ಸನ್ನು ಮರೆತು ದಿಲ್ಲಿಯಿಂದ ಬೆಂಗಳೂರಿಗೆ ಬಂದ ಕೂಡಲೇ ಹತ್ತಿರದಲ್ಲೇ ಇದ್ದ ಆಸ್ಪತ್ರೆಗೆ ಹೋಗಿ ಮಗುವನ್ನು ನೋಡಿ ಆಶೀರ್ವಾದ ನೀಡಿದ್ದಾರೆ ಹಾಗೂ ಅಭಿಷೇಕ್ ಅವರು ಕೂಡ ನಿಖಿಲ್ ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ. ಈ ಸಂದರ್ಭದಲ್ಲಿ ದೊಡ್ಡೇಗೌಡರು ಹಾಗೂ ಕುಮಾರಸ್ವಾಮಿ ಇಬ್ಬರೂ ಕೂಡ ಚೆನ್ನಾಗಿ ಮಾತನಾಡಿ ಕಳುಹಿಸಿ ಕೊಟ್ಟಿದ್ದಾರೆ. ಒಟ್ಟಾರೆಯಾಗಿ ನಿಖಿಲ್ ಕುಮಾರ್ ರವರ ಗಂಡು ಮಗುವಿನ ಜನನ ಬಹುತೇಕ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಎಲ್ಲರೂ ಕೂಡ ಸಂತೋಷಪಟ್ಟಿದ್ದಾರೆ.