ಪರೀಕ್ಷೆ ಬರೆಯಲು ಹೋಗುತ್ತಿದ್ದ ಮಾರ್ಗಮಧ್ಯದಲ್ಲೇ ಮಗುವಿಗೆ ಜನ್ಮವಿತ್ತಳು ನಂತರ ಆಕೆ ಮಾಡಿದ್ದೇನು ಗೊತ್ತಾ??
ನಮಸ್ಕಾರ ಸ್ನೇಹಿತರೇ ನಾವು ಹೆಣ್ಣುಮಕ್ಕಳಲ್ಲಿ ಅದೆಷ್ಟೋ ಜನ ದಿಟ್ಟ ಮಹಿಳೆಯರನ್ನು ನಾವು ನೋಡಿದ್ದೇವೆ. ಇನ್ನು ಕೆಲವರು ತಮ್ಮ ಜೀವನದಲ್ಲಿ ಸ್ವಾವಲಂಬಿ ಆಗಿರಬೇಕೆಂದು ವಿದ್ಯಾಭ್ಯಾಸವನ್ನು ಕಲಿತು ಕೆಲಸಕ್ಕೋಸ್ಕರ ಕಷ್ಟಪಡುವುದನ್ನು ನಾವು ನೋಡಿದ್ದೇವೆ. ಇನ್ನು ಈ ಹಿಂದೆ ಕೆಲವು ಬಾರಿ ಮದುವೆಯ ದಿವಸವೇ ಸ್ಪರ್ಧಾತ್ಮಕ ಪರೀಕ್ಷೆ ಬರೆದವರನ್ನು ಕೂಡ ನಾವು ಕೆಲವು ಬಾರಿ ನೋಡಿದ್ದೇವೆ ಹಾಗೂ ಅವರ ಬಗ್ಗೆ ಕೇಳಿ ತಿಳಿದಿದ್ದೇವೆ. ಇಂದು ಕೂಡ ನಾವು ಅದೇ ಮಾದರಿಯ ಆದರೆ ವಿಚಿತ್ರ ಬಗೆಯ ವಿಷಯವನ್ನು ಹೇಳಲು ಹೊರಟಿದ್ದೇವೆ ತಪ್ಪದೆ ಕೊನೆಯವರೆಗೂ ಓದಿ.

ಹೌದು ಸ್ನೇಹಿತರೆ ನಾವು ಹೇಳಲು ಹೊರಟಿರುವ ಘಟನೆ ನಡೆದಿರುವುದು ಬಿಹಾರ ರಾಜ್ಯದ ಮೋತಿ ಹಾರ ಜಿಲ್ಲೆಯಲ್ಲಿ. ಹೌದು ಸ್ನೇಹಿತರೆ ಇಲ್ಲಿ ನಾವು ಹೇಳುತ್ತಿರುವ ಕಥೆಯ ಅಂದರೆ ನೈಜ ಘಟನೆಯ ಕೇಂದ್ರಬಿಂದು ಕಾಜಲ್ ಎಂಬ ಹುಡುಗಿ. ಹೌದು ಸ್ನೇಹಿತರೆ ಬಿಹಾರದಲ್ಲಿ ಹೇಗೆಂದರೆ ಮಗಳು ಚಿಕ್ಕ ವಯಸ್ಸಿನವರಾಗಿದ್ದರು ಕೂಡ ಒಳ್ಳೆಯ ಸಂಬಂಧ ಬಂದರೆ ಸಾಕು ಮದುವೆ ಮಾಡಿಕೊಟ್ಟು ಬಿಡುತ್ತಾರೆ ಹಾಗೆಯೇ ಕಾಜಲ್ ರವರ ಜೊತೆಗೆ ಕೂಡ ನಡೆದಿರುವುದು. ಹೌದು ಸ್ನೇಹಿತರೆ ಹೀಗೆ ಕಾಜಲ್ ಜೊತೆಗೆ ಕೂಡ ಆಗಿರುವುದರಿಂದ ಆಗಿ ಆಕೆಯ ವಿದ್ಯಾಭ್ಯಾಸದ ವೇಗಕ್ಕೆ ನಿಧಾನಗತಿ ಬೀಳುತ್ತದೆ. ಇನ್ನು ಅವಳ ಮದುವೆ ನಡೆದಿರುವುದು ಎರಡು ವರ್ಷದ ಹಿಂದೆ ಯಾದವ್ ರವರ ಜೊತೆಗೆ. ಇನ್ನು ಇತ್ತೀಚಿಗಷ್ಟೇ ಕಾಜಲ್ ರವರ ದ್ವಿತೀಯ ಪಿಯುಸಿ ಯಾ ವಿಜ್ಞಾನ ಪರೀಕ್ಷೆ ಬರೆಯಬೇಕಿತ್ತು. ಮನೆಯವರು ಬೇಡವೆಂದರೂ ನೀನು ತುಂಬುಗರ್ಭಿಣಿ ಆಗಿದ್ದೀಯ ಯಾಕೆ ಹೋಗುತ್ತೀಯಾ ಎಂದು ಹೇಳಿದರೂ ಕೂಡ ಈ ಪರೀಕ್ಷೆ ಬರೆದರೆ ಮುಂದೊಂದು ದಿನ ನನಗೆ ಚಿಕ್ಕಪುಟ್ಟ ಕೆಲಸವಾದರೂ ಸಿಗಬಹುದು ಎಂದು ಹೇಳಿ ಪರೀಕ್ಷೆಗೆ ಹೊರಡುತ್ತಾಳೆ.
ಆನಂತರ ಮಾರ್ಗಮಧ್ಯದಲ್ಲಿ ಹೋಗಬೇಕಾದರೆ ಆಕೆಗೆ ಪ್ರಸನ್ ವೇದನೆ ಪ್ರಾರಂಭವಾಗಿ ಹತ್ತಿರದಲ್ಲೇ ಇದ್ದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಅವಳು ಒಂದು ಮಗುವಿಗೆ ಜನ್ಮ ನೀಡುತ್ತಾಳೆ. ಆದರೆ ಕಾಜಲ್ ಇಷ್ಟಕ್ಕೆ ನಿಲ್ಲದೆ ಪ್ರಸವದ ನಂತರ ಕೆಲವೇ ಸಮಯದಲ್ಲಿ ಸುಧಾರಿಸಿಕೊಂಡು ಮತ್ತೆ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆಯನ್ನು ಬರೆಯಲು ಪ್ರಾರಂಭಿಸುತ್ತಾಳೆ. ಅಲ್ಲಿನ ಪರೀಕ್ಷಾ ನಿರ್ವಹಕರು ಈಕೆಗೆ ಬೇರೆಯದೇ ಕೊಠಡಿಯನ್ನು ವ್ಯವಸ್ಥೆ ಮಾಡಿ ಪರೀಕ್ಷೆ ಬರೆಯುವಂತೆ ಅನುಕೂಲ ಮಾಡುತ್ತಾರೆ. ಈ ಸುದ್ದಿ ಹಾಗೂ ಕಾಜಲ್ ಳ ದೈರ್ಯದ ಕುರಿತಂತೆ ಎಲ್ಲರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.