ಗಂಡು ಮಗುವಿಗೆ ಜನ್ಮಕೊಟ್ಟ ಕೆಲವೇ ಗಂಟೆಗಳಲ್ಲಿ ಈ ಹೆಣ್ಣು ಮಗಳ ಬಾಯಲ್ಲಿ ಬಂದದ್ದೇನು ಗೊತ್ತಾ?? ಪಾಪ ಕಣ್ಣೀರು ಬರುತ್ತೆ.
ನಮಸ್ಕಾರ ಸ್ನೇಹಿತರೇ, ಮನುಷ್ಯನನ ಜೀವನದಲ್ಲಿ ಅದರಲ್ಲೂ ಮಹಿಳೆಯರಿಗೆ ಜಗತ್ತಿನ ಅತ್ಯಂತ ನೋವು ಎಂದರೆ ಅದು ಹೆರಿಗೆ ನೋವು ಎನ್ನುತ್ತಾರೆ. ಬೇರೆಲ್ಲಾ ನೋವಿನ ನೂರು ಪಟ್ಟು ಹೆಚ್ಚು ಈ ಹೆರಿಗೆ ನೋವು. ಆದರೆ ಅಷ್ಟು ನೋವನ್ನು ಅನುಭವಿಸಿ ಮಗುವನ್ನು ಹೆತ್ತು ಅ ಮಗುವಿನ ಮುಖ ನೋಡುತ್ತಿದ್ದಂತೆ ತನ್ನೆಲ್ಲಾ ನೋವುಗಳನ್ನೂ ಮರೆತುಬಿಡುತ್ತಾಳೆ ತಾಯಿ. ಆದರೆ ಮಗುವನ್ನು ಹೆತ್ತ ಖುಷಿಯನ್ನು ಅನುಭವಿಸುವುದಕ್ಕಿಂತ ಮೊದಲೇ ತಾಯಿ ಪ್ರಾಣವನ್ನೇ ಬಿಟ್ಟರೆ?!
ಸ್ನೇಹಿತರೆ, ತಾಯಿಯೊಬ್ಬಳು ಹೆರಿಗೆ ನೋವನ್ನು ತಿಂದು ಗಂಡು ಮಗುವಿಗೆ ಜನ್ಮವನ್ನು ನೀಡುತ್ತಾಳೆ. ಇನ್ನೇನು ಗಂಡ ಹೆಂಡತಿ ಮಗು ಸಂತೋಷದ ಕ್ಷಣಗಳನ್ನು ಅನುಭವಿಸಬೇಕು, ಒಟ್ಟಾಗಿ ಆ ಮಗುವಿನ ಲಾಲನೆ ಪಾಲನೆ ಮಾಡಬೇಕು, ಮಗುವಿನ ಜೊತೆಗೆ ಆಟವಾಡಬೇಕು ಎಂದೆಲ್ಲಾ ಕನಸುಕಟ್ಟಿಕೊಂಡು ಅದೆಲ್ಲವನ್ನೂ ಹಾಗೆಯೇ ಬಿಟ್ಟು ಜೀವವನ್ನೇ ಬಿಡುತ್ತಾಳೆ ತಾಯಿ. ಇದು ಚೆತನ್ ಹಾಗೂ ಮಮತಾ ಎಂಬ ದಂಪತಿಯ ನೋವಿನ ಕಥೆ. ಹೌದು ಆಸ್ಪತ್ರೆಯೊಂದರ ನಿರ್ಲಕ್ಷದ ಕಾರಣದಿಂದಾಗಿ ಈ ಘಟನೆ ಸಂಭವಿಸಿದೆ.

ಸಹಜವಾಗಿ ಹೆರಿಗೆ ನೋವು ಶುರುವಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ ಪತಿ. ಹೆರಿಗೆ ಮಾಡಿಸುವಾಗ ಅನಸ್ತೇಶಿಯಾ ಕೊಟ್ಟಿದ್ದು, ಹೆರಿಗೆ ಆದ ಮೇಲೆ ತಾಯಿ ಕಲ್ಲು ಕಚ್ಚುಕೊಂಡೆ ಅಸುನೀಗಿದ್ದಾರೆ. ಬಾಯಲ್ಲಿ ರಕ್ತವೂ ಬಂದಿತ್ತು, ಜೊತೆಗೆ ಆಸ್ಪತ್ರೆಯಲ್ಲಿ ಒಂದು ಗೌನ್ ಕೂಡ ಕೊಟ್ಟಿಲ್ಲ ತಾಯಿಗೆ, ಆಸ್ಪತ್ರೆಯವರ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಾದ್ದರಿಂದ ಪೋಲೀಸರನ್ನು ಕರೆಸಿ ರಾತ್ರೋ ರಾತ್ರಿ ತನ್ನ ಹೆಂಡತಿಯ ಮೃತ ದೇಹವನ್ನು ಕಳುಹಿಸಿ ಕೊಟ್ಟಿದ್ದಾರೆ ಎಂದು ಕೂಡ ಹೇಳಿದ್ದಾರೆ. ಆದರೆ ಅದೇನೆ ಇರಲಿ ಆ ಹಸುಗೂಸಿನ ಹಸಿವನ್ನು ನೀಗಿಸಲು ಇಂದು ತಾಯಿಯೇ ಇಲ್ಲ. ಇದಕ್ಕಿಂತ ಮನಕಲಕ್ವ ಘಟನೆ ಇನ್ಯಾವುದಿದೆ?!