ಕನ್ನಡ ಚಿತ್ರರಂಗ ಎಂದು ಮರೆಯದ ಅಂಬರೀಷ್ ಅಣ್ಣನವರ ಫೇವರೆಟ್ ನಟಿ ಯಾರು ಗೊತ್ತಾ?? ಸುಮಲತಾ ಅಲ್ಲ, ಮತ್ಯಾರು ಗೊತ್ತೇ??

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಮೊದಲಿಗೆ ಖಳನಾಯಕನಾಗಿ ನಂತರ ನಾಯಕನಟನಾಗಿ ನಟಿಸಿದವರು ನಿಮಗೆ ಹಲವಾರು ಮಂದಿ ಗೊತ್ತಿರಬಹುದು ಆದರೆ ಅವರಲ್ಲಿ ಸದಾ ಅಗ್ರಗಣ್ಯನಾಗಿ ಕಾಣಿಸಿಕೊಳ್ಳುವುದು ನಮ್ಮ ರೆಬೆಲ್ ಸ್ಟಾರ್ ಅಂಬರೀಶ್. ಚಿತ್ರರಂಗದಲ್ಲಿ ನಟಿಸುವ ಆಸಕ್ತಿ ಇಲ್ಲದಿದ್ದರೂ ಕೂಡ ಅಂಬರೀಶ್ ಅವರು ತಮ್ಮ ಗೆಳೆಯರಿಗಾಗಿ ಪುಟ್ಟಣ್ಣ ಕಣಗಾಲ್ ರವರ ಬಳಿ ಬರುತ್ತಾರೆ. ಹೌದು ಸ್ನೇಹಿತರೆ ನಾಗರಹಾವು ಚಿತ್ರದ ಜಲೀಲ ಪಾತ್ರಕ್ಕಾಗಿ ಸೆವೆನ್ ಸ್ಟಾರ್ ಅಂಬರೀಶ್ ರವರು ಆಯ್ಕೆಯಾಗುತ್ತಾರೆ.

ನಂತರ ನಿಮಗೆಲ್ಲ ಗೊತ್ತೇ ಇರುವಂತೆ ರೆಬೆಲ್ ಸ್ಟಾರ್ ಅಂಬರೀಶ್ ರವರು ಕನ್ನಡ ಚಿತ್ರರಂಗದಲ್ಲಿ ನಾಯಕನಟನಾಗಿ ಹೇಗೆ ಹವಾ ಕ್ರಿಯೇಟ್ ಮಾಡುತ್ತಾರೆ ಎಂದು. ಆದರೂ ಕೂಡ ರೆಬೆಲ್ ಸ್ಟಾರ್ ಅಂಬರೀಶ್ ರವರಿಗೆ ಅತ್ಯಂತ ಹೆಚ್ಚು ಯಶಸ್ಸನ್ನು ತಂದುಕೊಟ್ಟ ಚಿತ್ರವೆಂದರೆ ಅದು ಅಂತ. ಹೌದು ಸ್ನೇಹಿತರೆ ಅಂತ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ರವರು ಕುತ್ತೆ ಕನ್ವರ್ ನಹಿ ಕನ್ವರ್ ಲಾಲ್ ಬೋಲೋ ಎಂಬ ಡೈಲಾಗ್ ಹೊಡೆದು ಇಂದಿಗೂ ಕೂಡ ಡೈಲಾಗ್ ಹಚ್ಚಹಸಿರಾಗಿ ಉಳಿಯುವಂತೆ ಮಾಡಿದ್ದಾರೆ.

ಅಂಬರೀಶ್ ರವರು ವಿಷ್ಣುವರ್ಧನ್ ರವರ ಕುಚಿಕು ಆಗಿದ್ದರು ಎಂಬುದು ನಿಮಗೆಲ್ಲಾ ಗೊತ್ತಿರುವ ವಿಷಯ. ಅಂಬರೀಶ್ ಅವರ ಕುರಿತಂತೆ ನಿಮಗೆ ಗೊತ್ತಿರದಂತಹ ಇನ್ನೊಂದು ವಿಚಾರವನ್ನು ನಾವು ಎಂದು ಹೇಳಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಅಂಬರೀಶ್ ರವರ ನೆಚ್ಚಿನ ನಟಿಯ ಕುರಿತಂತೆ. ಹೌದು ಸ್ನೇಹಿತರೆ ಅಂಬರೀಶ್ರವರ ನೆಚ್ಚಿನ ನಟಿ ಕನ್ನಡಮೂಲದ ಪಂಚಭಾಷಾ ನಟಿ ಎಂದೇ ಖ್ಯಾತರಾಗಿರುವ ಜೂಲಿ ಲಕ್ಷ್ಮಿ ಅವರು. ಹೌದು ಸ್ನೇಹಿತರೆ ಲಕ್ಷ್ಮಿಯವರು ಎಂದರೆ ಅಂಬರೀಶ್ ರವರಿಗೆ ಸಾಕಷ್ಟು ಗೌರವ ಹಾಗೂ ಅಪಾರವಾದ ಪ್ರೀತಿ. ಇನ್ನು ಲಕ್ಷ್ಮಿ ಅವರನ್ನು ತನ್ನ ಜೊತೆಗಿಂತ ಹೆಚ್ಚಾಗಿ ಬೇರೆಯವರ ಜೊತೆ ನಾಯಕಿಯಾಗಿ ನೋಡುವುದು ನನಗೆ ಖುಷಿ ಎಂಬುದಾಗಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಹೇಳಿಕೊಂಡಿದ್ದರು. ಅಷ್ಟರಮಟ್ಟಿಗೆ ಲಕ್ಷ್ಮಿ ಅವರಿಗೆ ಅಂಬರೀಶ್ ಅವರು ಮರ್ಯಾದೆ ಹಾಗೂ ಪ್ರೀತಿಯನ್ನು ನೀಡುತ್ತಿದ್ದರು‌.

Get real time updates directly on you device, subscribe now.