ಚಿಕ್ಕ ವಯಸ್ಸಿನಿಂದ ಪ್ರೀತಿ ಮಾಡಿ ಮದುವೆಯಾಗಿ, ಈಕೆ ನಂತರ ತನ್ನ ಸುಖಕ್ಕಾಗಿ ಗಂಡನಿಗೆ ಏನು ಮಾಡಿದ್ದಾಳೆ ಗೊತ್ತೇ?? ಹೀಗೂ ಇರ್ತಾರ.

127

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ವಿಚಾರಗಳು ನಡೆಯುತ್ತಲೇ ಇರುತ್ತವೆ ಆದರೆ ನಾವು ಬ್ಯುಸಿ ಇರುವುದರಿಂದ ಹಾಗೂ ನಮಗೆ ಅದರ ಕುರಿತಂತೆ ತಿಳಿದುಕೊಳ್ಳುವ ಉತ್ಸಾಹವಿರುವುದಿಲ್ಲ ಹಾಗೂ ಸಮಯವು ಕೂಡ ಇರುವುದಿಲ್ಲ ಹೀಗಾಗಿ ನಾವು ಅದರ ಕುರಿತಂತೆ ಹೆಚ್ಚಿನ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಸ್ನೇಹಿತರಿಗೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೆಲವು ವಿಷಯಗಳನ್ನು ಕೇಳಿದರೆ ಖಂಡಿತವಾಗಿ ನೀವು ಬೆಚ್ಚಿ ಬೀಳುತ್ತೀರಿ.

ಹೌದು ಸ್ನೇಹಿತರೆ ಇಂದು ನಾವು ಒಂದು ನೈಜ ಘಟನೆ ಕುರಿತಂತೆ ಹೇಳಲು ಹೊರಟಿದ್ದೇವೆ. ಆಸ್ಟ್ರೇಲಿಯದಲ್ಲಿ ವಾಸವಾಗಿದ್ದ ಸೋಫಿಯಾ ಎಂಬಾಕೆ ತನ್ನ ಗಂಡನಾದ ಸ್ಯಾಮ್ ನ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗನ ಹೃದಯ ಸಂಬಂಧಿ ತೊಂದರೆಯಿಂದಾಗಿ ಇಹಲೋಕ ತ್ಯಜಿಸಿದ್ದಾರೆ ಎಂಬುದಾಗಿ ಹೇಳುತ್ತಾಳೆ. ಆರೋಗ್ಯವಾಗಿ ಗಟ್ಟಿಮುಟ್ಟಾಗಿದ್ದ 33ವರ್ಷದ ಮಗ ಹೀಗಾಗಿದ್ದು ಹೇಗೆ ಎಂಬ ಆಶ್ಚರ್ಯ ದುಗುಡ ದುಮ್ಮಾನಗಳು ಒಮ್ಮೆಲೆ ಬರುತ್ತವೆ. ಅಷ್ಟಕ್ಕೂ ಆಗಿದ್ದೇನು ಅಲ್ಲಿ ನಡೆದಿದ್ದೇನು ಎಂಬುದನ್ನು ನಾವು ನಿಮಗೆ ಸಂಪೂರ್ಣ ವಿವರವಾಗಿ ಹೇಳುತ್ತೇನೆ ತಪ್ಪದೆ ಕೊನೆಯವರೆಗೂ ಓದಿ.

ಹೌದಾದರೆ ಇದಾದ ನಂತರ ಮೆಲ್ಬೋರ್ನ್ ಪೋಲಿಸರಿಗೂ ಕೂಡ ಆಕೆ ಕರೆ ಮಾಡಿ ಈ ಕುರಿತಂತೆ ತಿಳಿಸುತ್ತಾಳೆ. ಇನ್ನು ಮುಂದಿನ ತನಿಖೆಗಾಗಿ ಪೊಲೀಸರು ದೇಹದ ತಪಾಸಣೆಯನ್ನು ಕೂಡ ಮಾಡುತ್ತಾರೆ ನಂತರ ಸೋಫಿಯಾ ದೇಹದೊಂದಿಗೆ ಕೇರಳಕ್ಕೆ ಹೊರಡುತ್ತಾಳೆ. ಆದರೆ ಇತ್ತ ವೈದ್ಯಕೀಯ ವರದಿ ಬಂದ ನಂತರ ಪೊಲೀಸರಿಗೆ ಆಶ್ಚರ್ಯ ಕಾದಿತ್ತು. ಹೌದು ಸ್ನೇಹಿತರೆ ಸೋಫಿಯಾ ಹೇಳಿದಂತೆ ಅಲ್ಲಿ ಹೃದಯ ಸಂಬಂಧಿ ಯಾವುದೇ ತೊಂದರೆಗಳು ಕೂಡ ಇರಲಿಲ್ಲ. ಇಲ್ಲಿ ಸೋಫಿಯಾ ಹಾಗೂ ಸ್ಯಾಮ್ ಇಬ್ಬರ ಕುರಿತಂತೆ ಮೊದಲಿನಿಂದ ಹೇಳುತ್ತೇವೆ ಬನ್ನಿ ಸ್ನೇಹಿತರೆ.

ಇಬ್ಬರು ಕೂಡ ಒಂದೇ ಊರಿನವರು ಹಾಗೂ ಎದುರು-ಬದುರು ಮನೆಯವರು ಆಗಿದ್ದರಿಂದ ಚಿಕ್ಕನಿಂದಲೂ ಕೂಡ ಇವರಿಬ್ಬರ ನಡುವೆ ಸ್ನೇಹ ಸಂಬಂಧವಿತ್ತು. ಇಬ್ಬರೂ ಕೂಡ ಚಿಕ್ಕನಿಂದಲೂ ಕೂಡ ಚರ್ಚ್ಗಳಿಗೆ ಜೊತೆಯಾಗಿ ಹೋಗುತ್ತಿದ್ದರು ಸ್ನೇಹ-ಪ್ರೀತಿ ಆಗಿರುವುದಕ್ಕೆ ಹೆಚ್ಚುಕಾಲ ಬೇಕಿರಲಿಲ್ಲ. ಇನ್ನೂ ಸ್ಯಾಮ್ ಒಬ್ಬ ಒಳ್ಳೆಯ ಗಾಯಕನಾಗಿದ್ದ. ಇವರಿಬ್ಬರ ಪ್ರೀತಿ ಹುಟ್ಟಿದಂತೆ ಇವರಿಬ್ಬರ ಮನೆಯವರಿಗೆ ತಿಳಿಯಲು ಹೆಚ್ಚಿನ ಸಮಯ ಬೇಕಾಗಿರಲಿಲ್ಲ. ಸೋಶಿಯ ಆ ಮನೆಯಲ್ಲಿ ಸ್ವಲ್ಪ ವಿರೋಧ ಇದ್ದರೂ ಕೂಡ ಮಗಳ ಆಸೆಯೇ ನಮ್ಮ ಆಸೆ ಎಂಬುದಾಗಿ ಮದುವೆಗೆ ಒಪ್ಪಿಕೊಳ್ಳುತ್ತಾರೆ ಇತ್ತ ಸ್ಯಾಮ್ ಮನೆಯಲ್ಲಿ ಕೂಡ ಎಂಗೇಜ್ಮೆಂಟ್ ತಯಾರಿ ನಡೆದು ಇಬ್ಬರ ನಡುವೆ ಎಂಗೇಜ್ಮೆಂಟ್ ಕೂಡ ನಡೆಯುತ್ತದೆ

ಇನ್ನು ಸ್ಯಾಮ್ ಗೆ ದುಬೈನಲ್ಲಿ ಕೆಲಸ ಸಿಕ್ಕು ಆತ ದುಬೈಗೆ ಹೋಗುತ್ತಾನೆ ಇತ್ತ ಸೋಫಿಯಾ ಉನ್ನತ ಶಿಕ್ಷಣವನ್ನು ಪಡೆಯುತ್ತಿರುತ್ತಾರೆ ಅಲ್ಲಿ ಆಕೆಗೆ ಅರುಣ್ ಎಂಬಾತನ ಪರಿಚಯವಾಗಿ ಪರಿಚಯ ಸ್ನೇಹ ಪ್ರೀತಿಯ ನಡುವಿನ ಸಂಬಂಧವನ್ನು ಹೊಂದಿರುತ್ತಾರೆ. ಇದಾದ ಕೆಲವೇ ಸಮಯಗಳಲ್ಲಿ ಸ್ಯಾಮ್ ದುಬೈಯಿಂದ ವಾಪಸ್ ಬಂದು ಸೊಫಿಯಾಳನ್ನು ಮದುವೆಯಾಗುತ್ತಾನೆ. ಸೋಫಿಯಾ ಗಳಿಗೂ ಕೂಡ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿ ತಾನು ಇಲ್ಲಿಯೇ ಇರುತ್ತೇನೆಂದು ಹೇಳುತ್ತಾಳೆ. ಇನ್ನು ಇತ್ತ ಅರುಣ್ ಕೂಡ ಮದುವೆಯಾಗಿ ತನ್ನ ಹೆಂಡತಿಯೊಂದಿಗೆ ಮೇಲೆ ಹೋಗಿ ಅಲ್ಲಿ ಒಬ್ಬ ಗಂಡು ಮಗುವನ್ನು ಕೊಡ ಪಡೆಯುತ್ತಾನೆ. ಇತ್ತ ಸ್ಯಾಮ್ ಹಾಗೂ ಸೋಫಿಯಾ ಳಿಗೂ ಕೂಡ ಒಬ್ಬ ಗಂಡು ಮಗ ಜನಿಸುತ್ತದೆ.

ಇನ್ನು ಇದಾದನಂತರ ಸ್ಯಾಮ್ ದುಬೈನಲ್ಲಿ ಬಿಜಿಯಾಗಿರುತ್ತಾರೆ. ಇತ್ತ ಸೋಫಿಯಾ ಅರುಣ್ ಜೊತೆಗೆ ವಿಡಿಯೋ ಕಾಲ್ ನಲ್ಲಿ ಸಾಕಷ್ಟು ಬಿಜಿಯಾಗಿರುತ್ತಾರೆ ಮಾತ್ರವಲ್ಲದೆ ತನ್ನ ಕಜಿನ್ ಸಹಾಯದಿಂದಾಗಿ ಮೆಲ್ಬೋರ್ನ್ನಲ್ಲಿ ಕೆಲಸವನ್ನು ಕೂಡ ಗಿಟ್ಟಿಸಿಕೊಂಡು ತನ್ನ ಮಗುವಿನೊಂದಿಗೆ ಹೋಗುತ್ತಾಳೆ ಇದನ್ನು ಆಕೆ ತನ್ನ ಪತಿಗೆ ಕೂಡ ತಿಳಿಸುತ್ತಾಳೆ. ಆದರೆ ಸ್ಯಾಮ್ ನನಗೆ ದುಬೈನಲ್ಲಿ ಕೆಲವೊಂದು ಕೆಲಸ ಇದೆ ಅದನ್ನು ಮುಗಿಸಿಕೊಂಡು ಬರುತ್ತೇನೆ ನೀನು ಅಲ್ಲಿ ಇರುವ ಜಾಗವನ್ನು ನೋಡಿಕೋ ಎಂಬುದಾಗಿ ಹೇಳುತ್ತಾನೆ. ತನ್ನ ಕಸಿನ್ ಸಹಾಯದಿಂದಾಗಿ ಸೋಫಿಯಾ ಮೆಲ್ಬೋರ್ನ್ನಲ್ಲಿ ಮನೆಯೊಂದನ್ನು ಖರೀದಿಸುತ್ತಾಳೆ. ಇದಾದ ನಂತರ ಸ್ಯಾಮ್ ಕೂಡ ಅಲ್ಲಿಗೆ ಬರುತ್ತಾನೆ. ನಂತರ ಇದು ಸೋಫಿಯಾ ಹಾಗೂ ಅರುಣ್ ಮಿಲನಕ್ಕೆ ಅಡ್ಡಿಯಾಗುತ್ತದೆ ಹೀಗಾಗಿ ಅರುಣ್ ಸ್ಯಾಮ್ ನನ್ನು ಮುಗಿಸಲು ಹೊಂಚು ಹಾಕಿ ಮೊದಲ ಬಾರಿ ವಿಫಲನಾಗುತ್ತಾನೆ. ನಂತರ ಮತ್ತೊಮ್ಮೆ ಇಬ್ಬರೂ ಸೇರಿ ಸ್ಯಾಮ್ ನನ್ನು ಮುಗಿಸುತ್ತಾರೆ. ಆದರೆ ಪೋಲಿಸರ ತನಿಖೆಯಲ್ಲಿ ಇದರ ಕುರಿತಂತೆ ಸತ್ಯ ಹೊರಬಂದು ಇಬ್ಬರಿಗೂ 25 ವರ್ಷಗಳ ಅವಧಿಯಲ್ಲಿ ಜೀವಾವಧಿ ಘೋಷಣೆಯಾಗುತ್ತದೆ.

Get real time updates directly on you device, subscribe now.