ಬಹು ನಿರೀಕ್ಷಿತ ಟಿಆರ್ ಪಿ ಬಿಡುಗಡೆ, ಹಿ.ಕಲ್ಯಾಣ ಗೆ ಸಿಹಿ ಸುದ್ದಿ, ಕಳೆದ ವಾರದ ಟಾಪ್ ಧಾರಾವಾಹಿಗಳು ಯಾವ್ಯಾವು ಗೊತ್ತೇ?

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಸಿರಿಯಲ್ ಗಳು ಇಂದು ಅತ್ಯಂತ ಅದ್ದೂರಿಯಾಗಿ ಚಿತ್ರೀಕರಣ ಕಾಣುತ್ತಿವೆ. ಯಾವ ಹಿಂದಿ ಧಾರಾವಾಹಿಗಳಿಗೂ ಕಡಿಮೆಯಿಲ್ಲದ ರೀತಿಯಲ್ಲಿ ಅತ್ಯಂತ ಅದ್ಭುತವಾಗಿ ನಿರ್ಮಾಣ ಮಾಡಲಾಗುತ್ತಿದೆ. ಇನ್ನು ಸೀರಿಯಲ್ ನ ಕಥೆಯಲ್ಲಿ ಟ್ವಿಸ್ಟ್ ಗಳನ್ನೂ ಕೊಡಲಾಗುತ್ತಿದ್ದು ಧಾರಾವಾಹಿಗಳ ಅಭಿಮಾನಿಗಳೂ ಕೂಡ ಹೆಚ್ಚುತ್ತಲೇ ಇದ್ದಾರೆ ಎನ್ನಬಹುದು. ಹಾಗಾಗಿ ಟಿ ಆರ್ ಪಿ ದರವೂ ಕೂಡ ವಾರದಿಂದ ವಾರಕ್ಕೆ ವ್ಯತ್ಯಾಸವಾಗುತ್ತಲೇ ಇದೆ. ಪ್ರತಿವಾರವೂ ಒಂದೊಂದು ಧಾರಾವಾಹಿ ಟಿ ಆರ್ ಪಿಯಲ್ಲಿ ಮೊದಲ ಸ್ಥಾನ ಪಡೆಯಲು ಪೈಪೋಟಿ ನಡೆಸುತ್ತಿವೆ. ಈ ಬಾರಿ ಯಾವ ಧಾರಾವಾಹಿ ಯಾವ ಸ್ಥಾನದಲ್ಲಿದೆ ಹೇಳ್ತಿವಿ ಮುಂದೆ ಓದಿ..

ಮೊದಲನೆಯ ಸ್ಥಾನದಲ್ಲಿದೆ, ಜೊತೆ ಜೊತೆಯಲಿ ಧಾರಾವಾಹಿ. ಮೊದಲಿನಿಂದಲೂ ಅನು ಹಾಗೂ ಆರ್ಯ ವರ್ಧನ್ ಜೋಡಿಯನ್ನು ಜನ ಮೆಚ್ಚಿಕೊಂಡಿದ್ದಾರೆ. ಇನ್ನು ಇತ್ತೀಚಿಗಿನ ಮದುವೆಯ ಎಪಿಸೋಡ್ ಗಳನ್ನು ಅತ್ಯಂತ ಅದ್ದೂರಿಯಾಗಿ ಚಿತ್ರೀಕರಣ ಮುಗಿಸಲಾಗಿದ್ದು ಈ ಎಪಿಸೋಡ್ ಗಳನ್ನು ಸಾಕಷ್ಟು ಮೆಚ್ಚಿಕೊಂಡಿದ್ದಾರೆ ಅಭಿಮಾನಿಗಳು.

ಇನ್ನು ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು, ಪಾರು ಧಾರಾವಾಹಿ. ಪಾರುವಿನ ಮದುವೆಯ ವಿಷಯ ಇದೀಗ ಸಾಕಷ್ಟು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಮೊದಲಿನಿಂದಲೂ ಪಾರು ಮುಗ್ಧತೆ ಹಾಗೂ ವಿನಯಾ ಪ್ರಸಾದ್ ಅವರ ಗತ್ತು ಜನರಿಗೆ ತುಂಬಾನೇ ಅಚ್ಚುಮೆಚ್ಚು. ಇನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಮೂರನೇ ಸ್ಥಾನಕ್ಕೆ ಬಂದು ನಿಂತಿರುವುದು ಹಿಟ್ಲರ್ ಕಲ್ಯಾಣ. ಇತ್ತೀಚಿಗೆ ಆರಂಭವಾದ ಧಾರಾವಾಹಿ, ಮೆಹಂದಿ ಶಾಸ್ತ್ರ, ಏಜೆ ಎಂಗೆಜ್ ಮೆಂಟ್ ಮೊದಲಾದವುಗಳು ವೈಭವೋಪೇತವಾಗಿ ಚಿತ್ರೀಕರಣಗೊಂಡಿದೆ. ಹಾಗಾಗಿ ಈ ಧಾರಾವಾಹಿ ಕೂಡ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

ಇನ್ನು ಸತ್ಯ ಧಾರಾವಾಹಿ 4 ಸ್ಥಾನವನ್ನು ಪಡೆದುಕೊಂಡಿದೆ. ಸತ್ಯ ಧಾರಾವಾಹಿಯ ಟ್ರಯಾಂಗಲ್ ಲವ್ ಸ್ಟೋರಿ ಇದೀಗ ಹೆಚ್ಚು ಕುತೂಹಲವನ್ನು ಉಂಟುಮಾಡುತ್ತಿದೆ. ಇನ್ನು ಸತ್ಯ ಹಾಗೂ ದಿವ್ಯಾ ಅವರ ಲವ್ ಸ್ಟೋರಿ, ಮದುವೆ ಮುಂದೆ ಹೇಗೆ ಮುಂದುವರೆಯಬಹುದು ಎಂಬುದು ಈ ಧಾರಾವಾಹಿಯ ಅಭಿಮಾನಿಗಳ ಕುತೂಹಲ. ಹೇಗೆ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಧಾರಾವಾಹಿಗಳು ಒಂದಕ್ಕಿಂತ ಒಂದು ಸೂಪರ್ ಹಿಟ್ ಎನಿಸಿಕೊಳ್ಳುತ್ತಿವೆ.

Get real time updates directly on you device, subscribe now.