ಕಿರುತೆರೆಯ ಎವರ್ ಗ್ರೀನ್ ನಟಿ, ಪೋಷಕ ಪಾತ್ರದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಅರುಣಾ ರವರ ಪತಿ ಯಾರು ಗೊತ್ತೇ?? ಇವರು ಕೂಡ ಕಲಾವಿದರೇ.

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕೇವಲ ಸಿನಿಮಾ ನಟ-ನಟಿಯರು ಮಾತ್ರವಲ್ಲದೆ ಧಾರವಾಹಿಯ ನಟ-ನಟಿಯರು ಕೂಡ ನಮ್ಮ ಕನ್ನಡ ಚಿತ್ರರಂಗದ ಮನರಂಜನೆ ಕ್ಷೇತ್ರ ಬೆಳೆಯಲು ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಅಂಥವರಲ್ಲಿ ಒಬ್ಬರ ಕುರಿತಂತೆ ಇಂದು ಮಾತನಾಡಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಸಿನಿಮಾ ಹಾಗೂ ಧಾರವಾಹಿಗಳು ಎರಡರಲ್ಲಿಯೂ ಕೂಡ ತಮ್ಮ ಹೆಸರನ್ನು ಅಚ್ಚೊತ್ತಿರುವ ನಟಿ ಅರುಣಾ ಬಾಲರಾಜ್ ಅವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಹೌದು ಗೆಳೆಯರೇ ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಹಾಗೂ ಕಿರುತೆರೆಯಲ್ಲಿ ನಟಿಸುತ್ತಿರುವ ಅರುಣಾ ಬಾಲರಾಜ್ ಅವರು ಇಂದಿಗೂ ಕೂಡ ಬಹುಬೇಡಿಕೆಯ ಪೋಷಕ ನಟಿಯಾಗಿದ್ದಾರೆ. ಕೆಲವು ವರ್ಷಗಳ ಹಿಂದಷ್ಟೇ ಬಿಡುಗಡೆಯಾದ ಅಂತಹ ರಿಷಿ ನಟನೆಯ ಆಪರೇಷನ್ ಅಲಮೇಲಮ್ಮ ಚಿತ್ರದಲ್ಲಿ ಕೂಡ ಜನಪ್ರಿಯವಾಗಿರುವ ಅಂತಹ ಪಾತ್ರವನ್ನು ನಿರ್ವಹಿಸಿ ಕನ್ನಡ ಪ್ರೇಕ್ಷಕರ ಮನಗೆದ್ದ ನಟಿಯಾಗಿದ್ದರು. ಕಾಲಕ್ಕೆ ತಕ್ಕಂತೆ ತಮ್ಮ ನಟನೆಯ ವಿಧವನ್ನು ಕೂಡ ಬದಲಿಸಿಕೊಳ್ಳುವ ಅರುಣ್ ಅವರು ಎಲ್ಲಾ ಕಾಲಕ್ಕೂ ಕೂಡ ಹೊಂದಿಕೊಳ್ಳುವಂತಹ ನಟಿಯಾಗಿದ್ದಾರೆ.

ಇನ್ನು ಇವರು ದಾರವಾಹಿ ಲೋಕಕ್ಕೆ ಕಾಲಿಟ್ಟಿದ್ದು ತಮ್ಮ ಮಾವ ಶ್ರೀನಿವಾಸಮೂರ್ತಿ ಅವರ ಶಿಫಾರಸಿನ ಮೂಲಕ ಸೀತರಾಮ್ ರವರ ನಿರ್ದೇಶನದ ಮನ್ವಂತರ ಧಾರಾವಾಹಿ ಮೂಲಕ. ಮೊದಲಿನಿಂದಲೂ ಕೂಡ ನಟಿಸುವ ಆಸಕ್ತಿ ಹೊಂದಿದ್ದ ಇವರು ಸುಲಭವಾಗಿ ನಟನೆಗೆ ಒಗ್ಗಿಕೊಳ್ಳುತ್ತಾರೆ. ಇನ್ನು ಹಲವಾರು ದಶಕಗಳಿಂದ ಅರುಣಾ ಬಾಲರಾಜ್ ಅವರು ಈ ಮನರಂಜನಾ ಕ್ಷೇತ್ರದಲ್ಲಿ ಇರುವುದರಿಂದ ಪ್ರೇಕ್ಷಕರು ಅವರನ್ನು ಸಾಕಷ್ಟು ಮೆಚ್ಚುತ್ತಾರೆ. ಇನ್ನು ಇವರ ಪತಿಯ ಹೆಸರು ಬಾಲರಾಜ್ ಎಂದು. ಅರುಣ ಬಾಲರಾಜು ಅವರು ತಮ್ಮ ಪತಿ ಮಾವ ಹಾಗೂ ತಂದೆ-ತಾಯಿಯ ರೊಡನೆ ಕೂಡು ಕುಟುಂಬದಲ್ಲಿ ಒಂದೇ ಮನೆಯಲ್ಲಿ ವಾಸಿಸುತ್ತಾರೆ. ಅರುಣಾ ಬಾಲರಾಜ್ ರವರ ಪತಿಯ ಫೋಟೋವನ್ನು ನೀವು ಈ ಲೇಖನಿಯ ಕೆಳಗಡೆ ನೋಡಬಹುದಾಗಿದೆ.

Get real time updates directly on you device, subscribe now.