ಯಾವುದೇ ಹೀರೊಯಿನ್ ಗಿಂತ ಕಡಿಮೆ ಇಲ್ಲದ ಈ ಚೇತನ ಕೊಹ್ಲಿ ಯಾರು ಗೊತ್ತೇ?? ಕೊಹ್ಲಿ ಗು ಇವರಿಗೂ ಏನು ಸಂಬಂಧ ಗೊತ್ತೇ??
ನಮಸ್ಕಾರ ಸ್ನೇಹಿತರೇ ವಿರಾಟ್ ಕೊಹ್ಲಿ ಅವರು ಭಾರತ ಕ್ರಿಕೆಟ್ ತಂಡದ ಕಪ್ತಾನನಾಗಿ ಸಾಕಷ್ಟು ಯಶಸ್ಸನ್ನು ಸಾಧಿಸಿದ್ದಾರೆ. ವಿರಾಟ್ ಕೊಹ್ಲಿ ಅವರು ತಾವು ಪ್ರೀತಿಸಿದ ಅನುಷ್ಕ ಶರ್ಮ ರವರನ್ನು ಮದುವೆಯಾಗುವ ಮೂಲಕ ಅದೆಷ್ಟೋ ಪ್ರೇಮಿಗಳಿಗೆ ಉದಾಹರಣೆಗೆ ಕೂಡ ಆಗಿದ್ದಾರೆ. ವಿರಾಟ್ ಕೊಹ್ಲಿ ಅವರು ಮಧ್ಯಮ ವರ್ಗದ ಕುಟುಂಬದಿಂದ ಬಂದು ಇಂದು ತಮ್ಮ ಕ್ರಿಕೆಟ್ ಪ್ರತಿಭೆಯ ಮೂಲಕ ಹಿಂದೆಂದೂ ಕಂಡಿರದಂತಹ ಯಶಸ್ಸನ್ನು ಸಾಧಿಸಿದ್ದಾರೆ. ವಿರಾಟ್ ಕೊಹ್ಲಿ ಅವರ ಬಗ್ಗೆ ಹೇಳುವುದಾದರೆ ಅವರು ಬ್ರಾಂಡಿಂಗ್ ನಲ್ಲಿ ಭಾರತದಲ್ಲಿ ಅತ್ಯಂತ ಹೆಚ್ಚು ಹಣ ಪಡೆಯುವ ಸೆಲೆಬ್ರಿಟಿ ಯಾಗಿದ್ದಾರೆ.
ವಾರ್ಷಿಕ ವಾಗಿ ನೂರಾರು ಕೋಟಿ ಹಣವನ್ನು ಕೇವಲ ಜಾಹೀರಾತಿನಿಂದ ಪಡೆಯುತ್ತಾರೆ. ಇನ್ನು ವಿರಾಟ್ ಕೊಹ್ಲಿ ಅವರು ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಕೂಡ ಆಗಿದ್ದಾರೆ. ಇತ್ತೀಚಿಗಷ್ಟೇ ವಿರಾಟ್ ಕೊಹ್ಲಿ ಅವರು ಹೆಣ್ಣು ಮಗುವಿಗೆ ತಂದೆ ಆಗಿದ್ದು ಮಗುವಿಗೆ ವಮಿಕಾ ಎಂಬ ಹೆಸರನ್ನು ಇಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಅವರ ಸಂಬಂಧಿಕರೊಬ್ಬರ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಹೌದು ಸ್ನೇಹಿತರೆ ಅವರ ಹೆಸರು ಚೇತನಾ ಕೊಹ್ಲಿ ಎಂದು. ಬನ್ನಿ ಇವರು ಯಾರು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇನೆ.

ಚೇತನಾ ಕೊಹ್ಲಿ ಇನ್ಯಾರು ಅಲ್ಲ ಸ್ನೇಹಿತರೆ ಅವರು ವಿರಾಟ್ ಕೊಹ್ಲಿ ಅವರ ಅತ್ತಿಗೆ ಅಂದರೆ ಅವರ ಸಹೋದರ ವಿಕಾಸ್ ಕೊಹ್ಲಾ ಅವರ ಪತ್ನಿ. ಹೌದು ಸ್ನೇಹಿತರೆ ಚೇತನ ಕೊಹ್ಲಿ ನೋಡೋದಕ್ಕೆ ಅನುಷ್ಕಾ ಶರ್ಮಾ ಅವರಷ್ಟೇ ಸುಂದರವಾಗಿದ್ದು ಪತಿಯೊಂದಿಗೆ ಆಗಾಗ ಫ್ಯಾಮಿಲಿ ಫಂಕ್ಷನಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಚೇತನಾ ರವರು ಹೌಸ್ವೈಫ್ ಆಗಿದ್ದು ಆಡಂಬರದ ಜೀವನವನ್ನು ನಡೆಸುತ್ತಿದ್ದಾರೆ. ಚೇತನ ರವರು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಕ್ರಿಯರಾಗಿದ್ದು ತಮ್ಮ ಪತಿಯ ಫೋಟೋವನ್ನು ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ.