ಚಂದನವನದ ಚೆಲುವೆ ಕವಿತಾ ಗೌಡ ರವರು ಮದುವೆಯಾದ ಮೇಲೆ ಅತ್ತೆಯ ಜೊತೆ ಹೇಗಿದ್ದಾರೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಈ ಲಾಕ್ಡೌನ್ ನಲ್ಲಿ ಹಲವಾರು ಸೆಲೆಬ್ರಿಟಿಗಳು ಮದುವೆಯಾಗಿದ್ದಾರೆ ಆದರೆ ಕನ್ನಡ ಚಿತ್ರರಂಗದ ಮಟ್ಟಿಗೆ ಈ ಟ್ರೆಂಡ್ ನ್ನು ಪ್ರಾರಂಭಿಸಿದ್ದು ಕವಿತಾ ಗೌಡ ಹಾಗೂ ಚಂದನಗೌಡ ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೆ ಲಕ್ಷ್ಮೀ ಬಾರಮ್ಮ ಧಾರವಾಹಿ ಮೂಲಕ ಇಬ್ಬ್ರು ಜೊತೆಗೆ ಚರಿತ್ರೆಯ ವಾಹಿನಿಗೆ ಕಾಲಿಡುತ್ತಾರೆ. ನಂತರದ ದಿನಗಳಲ್ಲಿ ಇವರಿಬ್ಬರ ನಡುವೆ ಸ್ನೇಹವಾಗಿ ಸ್ನೇಹ ಪ್ರೀತಿಗೂ ಕೂಡ ತಿರುಗುತ್ತದೆ. ಅಂದಿನಿಂದ ಇಂದಿನವರೆಗೂ ಕೂಡ ಇವರಿಬ್ಬರು ಎಲ್ಲಿಯೂ ಕೂಡ ತಮ್ಮ ಕುರಿತಂತೆ ಬಾಯ್ಬಿಟ್ಟಿರಲಿಲ್ಲ.
ಇನ್ನು ಇದೇ ವರ್ಷ ಏಪ್ರಿಲ್ 1ರಂದು ಎಂಗೇಜ್ಮೆಂಟ್ ಆಗುವ ಮುಖಾಂತರ ತಮ್ಮ ಅಭಿಮಾನಿಗಳು ಹಾಗೂ ಕನ್ನಡ ಪ್ರೇಕ್ಷಕರಿಗೆ ತಾವು ಮದುವೆಯಾಗುತ್ತಿದ್ದೇವೆ ಎಂಬ ಸೂಚನೆ ನೀಡಿದ್ದಾರೆ. ಚಂದನ್ ಗೌಡ ಹಾಗೂ ಕವಿತಾ ಗೌಡ ಇದೇ ಮೇ ಒಂದರಂದು ಗುರುಹಿರಿಯರ ಸಮ್ಮುಖದಲ್ಲಿ ಮಾಸ್ಕನ್ನು ಹಾಕಿಕೊಳ್ಳುವುದರ ಮೂಲಕ ಮದುವೆಯಾಗುತ್ತಾರೆ. ಇನ್ನೂ ಸರಳವಾಗಿ ವಿವಾಹವಾದ ಚಂದನ್ ಗೌಡ ಹಾಗೂ ಕವಿತಾ ಗೌಡ ಜೋಡಿ ಎಲ್ಲರ ಮನ ಗೆಲ್ಲಲು ಯಶಸ್ವಿಯಾದರು. ಇನ್ನು ಇದಾದನಂತರ ಇತ್ತೀಚಿಗಷ್ಟೇ ಚಂದನ್ ಗೌಡ ರವರು ತಮ್ಮ ಪತ್ನಿ ಕವಿತಾ ಗೌಡ ರವರ 29ನೇ ಜನ್ಮದಿನವನ್ನು ಮನೆಯಲ್ಲೇ ಸ್ನೇಹಿತರ ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಆಚರಿಸಿದ್ದಾರೆ.

ಇನ್ನು ಕವಿತಾ ಗೌಡರವರು ಆತ್ತೆಯವರೊಂದಿಗೆ ಮನೆಯಲ್ಲಿ ಹೇಗಿರುತ್ತಾರೆ ಎಂಬುದರ ಕುರಿತಂತೆ ನಾವು ಹೇಳುತ್ತೇವೆ. ಹೌದು ಸ್ನೇಹಿತರೇ ಮದುವೆ ಆಗುವುದಕ್ಕಿಂತ ಮುಂಚೆಯಿಂದಲೂ ಕೂಡ ಕವಿತಾ ಗೌಡರವರಿಗೆ ತಮ್ಮ ಅತ್ತೆಯವರ ಪರಿಚಯ ಇರುವುದರಿಂದ ಇವರಿಬ್ಬರೂ ತುಂಬಾನೇ ಕ್ಲೋಸ್ ಆಗಿದ್ದಾರೆ. ಕವಿತಾ ಗೌಡರವರು ತಮ್ಮ ಅತ್ತೆಯೊಂದಿಗೆ ಮನೆ ಕೆಲಸ ಹಾಗೂ ಅಡುಗೆ ಕಾರ್ಯದಲ್ಲಿ ಸಹಾಯ ಮಾಡುತ್ತಾರೆ. ಒಬ್ಬರು ಕೂಡ ಜೊತೆಗೆ ಕುಳಿತು ಚಂದನ್ ಗೌಡರವರ ಧಾರವಾಹಿಯನ್ನು ಟಿವಿಯಲ್ಲಿ ನೋಡುತ್ತಿರುತ್ತಾರೆ. ಈ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.