ಒಂದು ಕಾಲದ ಟಾಪ್ ನಟಿ ಗೌತಮಿ ರವರು ಸ್ತನ ಕ್ಯಾನ್ಸರ್ ನಿಂದ ಚೇತರಿಸಿಕೊಂಡು ಈಗ ಹೇಗಿದ್ದಾರೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮಗೆ ಸೆಲೆಬ್ರಿಟಿಗಳೇ ಎಂದರೆ ಅವರ ಹೊರಗೆ ಕಾಣುವ ಜೀವನ ಮಾತ್ರ ನಮಗೆ ಚೆನ್ನ ಹಾಗೂ ಅವರು ಸುಖವಾಗಿದ್ದಾರೆ ಎಂಬುದಾಗಿ ಹೇಳುತ್ತದೆ. ಆದರೆ ಅವರು ನಿಜಜೀವನದಲ್ಲಿ ಪಡುವ ಕಷ್ಟ ಯಾರಿಗೂ ಕೂಡ ತಿಳಿದಿರುವುದಿಲ್ಲ ಹಾಗೂ ಅದರ ಕುರಿತಂತೆ ಯಾರೂ ಕೂಡ ತಿಳಿಯಲು ಕೂಡ ಪ್ರಯತ್ನ ಪಡುವುದಿಲ್ಲ. ಇಂದಿನ ವಿಚಾರವೂ ಕೂಡ ಅದೇ ವಿಷಯಕ್ಕೆ ಸಂಬಂಧಪಟ್ಟಿದ್ದಾಗಿದೆ. ಹೌದು ಗೆಳೆಯರೇ ಕನ್ನಡ ಚಿತ್ರರಂಗದಲ್ಲಿ ನಟಿಸಿರುವಂತಹ ಸ್ಟಾರ್ ನಟಿಯೊಬ್ಬರು ನೀವು ಊಹಿಸಲಾಗದಷ್ಟು ಕೂಡ ಕಷ್ಟವನ್ನು ಪಟ್ಟು ಅದರಿಂದ ಪಾರಾಗಿ ವಿಷಯಗಳ ಕುರಿತಂತೆ ಇಂದು ಹೇಳಲಾಗುತ್ತದೆ.
ಹೌದು ಸ್ನೇಹಿತರೆ ನಾವು ಬಹುಭಾಷಾ ನಟಿ ಗೌತಮಿ ಅವರ ಕುರಿತಂತೆ ಹೇಳಲು ಹೊರಟಿದ್ದೇವೆ. ಇವರು ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಜನಿಸಿದಂತಹ ನಟಿ. ಇವರ ಮೊದಲು ತೆಲುಗು ತಮಿಳು ಹಾಗೂ ಮಲೆಯಾಳಂ ನಂತರ ಕನ್ನಡ ಚಿತ್ರರಂಗದಲ್ಲಿ ಕೂಡ ನಟಿಸಲು ಪ್ರಾರಂಭಿಸುತ್ತಾರೆ. ಇನ್ನು ಕನ್ನಡ ಚಿತ್ರರಂಗದ ಕುರಿತಂತ ಬರುವುದಾದರೆ ಇವರ ನಟನೆಯ ಪ್ರಮುಖ ಚಿತ್ರಗಳು ಎಂದರೆ ಸಾಹಸಸಿಂಹ ಚಿಕ್ಕೆಜಮಾನ್ರು ಹಾಗೂ ಚೆಲುವ.

ಗೌತಮಿ ಅವರು 1998 ರಲ್ಲಿ ಸಂದೀಪ್ ಪಾಟೀಲ್ ಎಂಬ ಉದ್ಯಮವನ್ನು ವಿವಾಹವಾಗುತ್ತಾರೆ. ಆದರೆ ಪರಸ್ಪರ ಭಿನ್ನಾಭಿಪ್ರಾಯಗಳಿಂದಾಗಿ ಇವರಿಬ್ಬರ ನಡುವೆ ವಿವಾಹ ವಿಚ್ಛೇದನ ನಡೆದು ಒಂದೇ ವರ್ಷದಲ್ಲಿ ಬೇರಾಗುತ್ತಾರೆ. ನಂತರ ಇವರಿಗೆ ಸ್ತನಕ್ಯಾನ್ಸರ್ ಪ್ರಾರಂಭವಾಗಿತ್ತು. ಆದರೂ ಕೂಡ ಗೌತಮಿ ಅವರು ಈ ಕಾಯಿಲೆಯನ್ನು ಸಮರ್ಥವಾಗಿ ಎದುರಿಸಿ ಗೆದ್ದು ನಿಲ್ಲುತ್ತಾರೆ. ಇನ್ನು ಇದಾದನಂತರ ಗೌತಮಿ ಅವರು ನಟ ಕಮಲ್ ಹಾಸನ್ ರವರೊಂದಿಗೆ 13 ವರ್ಷಗಳ ಕಾಲ ಲಿವಿಂಗ್ ಟುಗೆದರ್ ರಿಲೇಷನ್ಶಿಪ್ ನಲ್ಲಿದ್ದರು. ನಂತರ ಇತ್ತೀಚಿನ ಕೆಲವು ವರ್ಷಗಳ ಹಿಂದೆಯಷ್ಟೇ ಅವರು ಕೂಡ ಹೊರಬರುತ್ತಾರೆ. ಇನ್ನು ಈಗ ಸದ್ಯಕ್ಕೆ ಗೌತಮಿ ಅವರು ಹಲವಾರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.