ಕರುನಾಡ ಚಕ್ರವರ್ತಿ ಶಿವಣ್ಣ ರವರನ್ನು ಕಿಚ್ಚ ಸುದೀಪ್ ರವರು ಇಂದಿಗೂ ಕೂಡ ಆ ಒಂದು ವಿಷಯಕ್ಕೆ ರೇಗಿಸ್ತಾರೆ ಏನು ಗೊತ್ತೇ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಅಂದರೆ 3 ಜನರೇಷನ್ ಗಳಿಂದ ಸೆಂಚುರಿ ಸ್ಟಾರ್ ಆಗಿ ಹ್ಯಾಟ್ರಿಕ್ ಹೀರೋ ಆಗಿ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಮುತ್ತುರಾಜನ ಹಿರಿಮಗನಾಗಿ ಮೆರೆದುಕೊಂಡು ಬರುತ್ತಿರುವವರು ನಮ್ಮ ಕನ್ನಡ ಚಿತ್ರರಂಗದ ಲೀಡರ್ ಶಿವಣ್ಣ. ಶಿವಣ್ಣ ಆನಂದ್ ಚಿತ್ರದಿಂದ ಪ್ರಾರಂಭಿಸಿ ಇಂದಿನವರೆಗೂ ಕೂಡ ಅದೇ ಮಟ್ಟದ ಎನರ್ಜಿ ಹಾಗೂ ನಟನಾ ಶೈಲಿಯನ್ನು ಪ್ರೇಕ್ಷಕರಿಗೆ ಪ್ರಚುರ ಪಡಿಸಿಕೊಂಡು ಬರುತ್ತಿದ್ದಾರೆ.

ಇನ್ನೂ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಬಹು ನಟರ ಚಿತ್ರಗಳಲ್ಲಿ ಕೂಡ ಶಿವಣ್ಣನವರು ಕಾಣಿಸಿಕೊಂಡಿದ್ದಾರೆ. ಶಿವಣ್ಣನವರು ರಮೇಶ್ ಅರವಿಂದ್ ಕಿಚ್ಚ ಸುದೀಪ್ ಕ್ರೇಜಿಸ್ಟಾರ್ ರವಿಚಂದ್ರನ್ ರಿಯಲ್ ಸ್ಟಾರ್ ಉಪೇಂದ್ರ ಹಲವಾರು ಸೂಪರ್ಸ್ಟಾರ್ ನಟರೊಂದಿಗೆ ತೆರೆಯನ್ನು ಹಂಚಿಕೊಂಡಿರುವ ಮೇರುನಟ. ಇನ್ನು ಕಿಚ್ಚ ಸುದೀಪ್ ಹಾಗೂ ಶಿವಣ್ಣನವರ ಒಡನಾಟ ನಿಮಗೆ ಗೊತ್ತೇ ಇದೆ. ಇವರಿಬ್ಬರೂ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರದಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡು ಪ್ರೇಕ್ಷಕರ ಮನಗೆದ್ದಿದ್ದರು. ಸಿನಿಮಾದಾಚೆಗೆ ಇವರು ಸೋದರತ್ವದ ಸಂಬಂಧವನ್ನು ಹಂಚಿಕೊಂಡಿದ್ದು ಇಬ್ಬರೂ ಕೂಡ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿ ಗೌರವವನ್ನು ನೀಡುತ್ತಾರೆ. ಇತ್ತೀಚೆಗಷ್ಟೇ ಶಿವಣ್ಣ ನಟನೆಯ ನೀ ಸಿಗೋವರೆಗೂ ಎಂಬ ಚಿತ್ರದ ಉದ್ಘಾಟನಾ ಸಮಾರಂಭಕ್ಕೆ ಅತಿಥಿಯಾಗಿ ಕಿಚ್ಚ ಸುದೀಪ್ ರವರು ಆಗಮಿಸಿದ್ದರು.

ಈ ಸಂದರ್ಭದಲ್ಲಿ ಶಿವಣ್ಣನವರು ಕಿಚ್ಚ ಸುದೀಪ್ ಸಿಕ್ಕಿದಾಗಲೆಲ್ಲಾ ವಿಷಯದ ಕುರಿತಂತೆ ರೇಗಿಸುತ್ತಾರೆ ಎಂಬುದಾಗಿ ಹೇಳಿದ್ದಾರೆ. ಹಾಗಿದ್ದರೆ ಆ ವಿಷಯ ಏನೆಂಬುದನ್ನು ನಾವು ತಿಳಿಯೋಣ ಬನ್ನಿ ಸ್ನೇಹಿತರೆ. ಹೌದು ಸ್ನೇಹಿತರೆ ಶಿವಣ್ಣ ಹಲವಾರು ವರ್ಷಗಳ ನಂತರ ನೀ ಸಿಗೋವರೆಗೂ ಚಿತ್ರದ ಮೂಲಕ ಕಂಪ್ಲೀಟ್ ಲವ್ ಸ್ಟೋರಿ ಚಿತ್ರದಲ್ಲಿ ನಟಿಸುತ್ತಿದ್ದಾರೆ ಈ ಕುರಿತಂತೆ ಸುದೀಪ್ ರವರು ನಮಗೆ ಯಾರು ಲವ್ ಸ್ಟೋರಿ ಕಥೆಗಳನ್ನು ತರುವುದಿಲ್ಲ ಶಿವಣ್ಣನವರಿಗೆ ಈಗಲೂ ಕೂಡ ಲವ್ ಸ್ಟೋರಿ ಕಥೆಗಳನ್ನು ತರುತ್ತಾರೆ ಎಂಬುದಾಗಿ ರೇಗಿಸಿದರು. ಇದನ್ನು ಕೇಳಿ ಎಲ್ಲರೂ ಕೂಡ ತಮಾಷೆಯಿಂದ ನಕ್ಕಿದ್ದರು. ಶಿವಣ್ಣನವರು ಕೂಡ ಸುದೀಪ್ ಕೂಡ ಲವರ್ ಬಾಯ್ ಲುಕ್ ನಲ್ಲಿ ಚೆನ್ನಾಗಿ ಕಾಣಿಸುತ್ತಾರೆ ಆದರೆ ಅವರು ತಮ್ಮ ಪರ್ಸನಾಲಿಟಿ ತಕ್ಕಂತ ಪಾತ್ರಗಳನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

Get real time updates directly on you device, subscribe now.