ಜೂನಿಯರ್ ಚಿರುಸರ್ಜ ನಾಮಕರಣದ ಮೂರೇ ದಿನಕ್ಕೆ ಗುಡ್ ನ್ಯೂಸ್ ನೀಡಿದ ಧ್ರುವ ಸರ್ಜಾ ಹಾಗೂ ಪ್ರೇರಣಾ, ಏನು ಗೊತ್ತೇ??

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಜೂನಿಯರ್ ಚಿರು ಸರ್ಜಾ ರವರಿಗೆ ಈಗಾಗಲೇ ರಾಯನ್ ರಾಜ್ ಸರ್ಜಾ ಎಂದು ಅಧಿಕೃತವಾಗಿ ನಾಮಕರಣ ಮಾಡಿರುವುದು ಎಲ್ಲರಿಗೂ ಸಂತೋಷವನ್ನು ತಂದಿದೆ. ಹೌದು ಸ್ನೇಹಿತರೆ ನಗರದ ಖಾಸಗಿ ಹೋಟೆಲೊಂದರಲ್ಲಿ ಹಿಂದೂ ಹಾಗೂ ಕ್ರೈಸ್ತ ಎರಡು ಧರ್ಮದ ಪ್ರಕಾರವು ಕೂಡ ಜೂನಿಯರ್ ಚಿರು ಸರ್ಜಾ ರವರಿಗೆ ನಾಮಕರಣದ ಪಕ್ರಿಯೆ ಎರಡು ಕುಟುಂಬದ ಸಮ್ಮುಖದಲ್ಲಿ ನಡೆದಿದೆ.

ಈ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ ಪ್ರೇರಣಾ ಶಂಕರ್ ಮೇಘನಾರಾಜ್ ಸುಂದರ್ ರಾಜ್ ಪ್ರಮೀಳಾ ಜೋಷಾಯ್ ಸೂರಜ್ ಸರ್ಜಾ ಸುಮಲತಾ ಅಂಬರೀಶ್ ಅಭಿಷೇಕ್ ಅಂಬರೀಶ್ ಸುಧಾರಾಣಿ ಪನ್ನಗ ನಾಗಭರಣ ಹೀಗೆ ಹಲವಾರು ಗಣ್ಯಾತಿಗಣ್ಯರು ಭಾಗವಹಿಸಿದ್ದರು. ಎಲ್ಲರೂ ಕೂಡ ಸಂತೋಷದಿಂದ ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜೂನಿಯರ್ ಚಿರುಸರ್ಜ ರವರಿಗೆ ಉತ್ತಮ ಭವಿಷ್ಯ ಸಿಗಲಿ ಎಂಬುದಾಗಿ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ದ್ರುವ ಸರ್ಜಾ ದಂಪತಿಗಳು ಮೇಘನರಾಜ ರವರಿಗೆ ಡೈಮಂಡ್ ನೆಕ್ಲೇಸ್ ಹಾಗೂ ಜೂನಿಯರ್ ಚಿರು ಸರ್ಜಾ ಅವರಿಗೆ ಹತ್ತು ಲಕ್ಷದ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದರು.

ಇದಾದ ಕೆಲವೇ ದಿನಗಳಲ್ಲಿ ದ್ರುವಸರ್ಜ ಹಾಗೂ ಪ್ರೇರಣ ಶಂಕರ್ ದಂಪತಿಗಳು ಕೂಡ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಹೌದು ಸ್ನೇಹಿತರೆ ಗುಡ್ ನ್ಯೂಸ್ ಬೇರಿನ್ನೇನೂ ಅಲ್ಲ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮುಂದಿನ ಚಿತ್ರ ಕನ್ನಡ ಚಿತ್ರರಂಗದ ಹಾಟ್ರಿಕ್ ನಿರ್ದೇಶಕ ಜೋಗಿ ಪ್ರೇಮ್ ರವರೊಂದಿಗೆ ನಡೆಯಲಿದೆ ಹಾಗೂ ಈ ಚಿತ್ರಕ್ಕೆ ಪ್ರೇರಣಾ ರವರು ಕೂಡಾ ಹೂಡಿಕೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ, ಒಂದು ವೇಳೆ ಅದೇ ನಿಜವಾದಲ್ಲಿ ಮೊನ್ನೆಯಷ್ಟೇ ಮೇಕ್ ಅಪ್ ಸ್ಟುಡಿಯೋ ಆರಂಭಿಸಿರುವ ಪ್ರೇರಣಾ ರವರು ಮೊದಲ ಬಾರಿಗೆ ಪ್ರೊಡ್ಯೂಸರ್ ಆಗಲಿದ್ದಾರೆ. ಈ ಕುರಿತಂತೆ ಚಿತ್ರತಂಡ ಅಧಿಕೃತವಾಗಿ ಘೋಷಣೆಯನ್ನು ಕೂಡ ಸಹ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಮಾಡಿದೆ. ಇನ್ನು ಇದು ಬಿಗ್ ಬಜೆಟ್ ನ ಸಿನಿಮಾ ವಾಗಲಿದ್ದು ಪ್ರೇಕ್ಷಕರು ಈಗಾಗಲೇ ಕಾತರರಾಗಿ ಕಾಯುತ್ತಿದ್ದಾರೆ.

Get real time updates directly on you device, subscribe now.