ಮುದ್ದುಲಕ್ಷ್ಮಿ ಸೀರಿಯಲ್ ನಾಯಕ ನಟ ದ್ರುವಾಂತ್ ಹೆಂಡತಿ ಯಾರು ಗೊತ್ತೆ?? ಇವರು ಕೂಡ ತುಂಬಾ ಫೇಮಸ್. ಯಾರು ಗೊತ್ತೇ??
ನಮಸ್ಕಾರ ಗೆಳೆಯರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಗುಣಮಟ್ಟದ ಹಾಗೂ ಉತ್ತಮ ಕಥೆ ಹೊಂದಿರುವ ಧಾರವಾಹಿಗಳು ಕಿರುತೆರೆಯಲ್ಲಿ ಬರುತ್ತಿವೆ. ಪ್ರೇಕ್ಷಕರು ಕೂಡ ಕನ್ನಡ ಕಿರುತೆರೆಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಒಳ್ಳೆಯ ಧಾರವಾಹಿಗಳನ್ನು ಸಿನಿಮಾಗಿಂತಲೂ ಹೆಚ್ಚು ಆಸಕ್ತಿಯಿಂದ ವೀಕ್ಷಿಸುತ್ತಿದ್ದಾರೆ. ಇಂತಹ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಸುವರ್ಣವಾಹಿನಿಯ ಮುದ್ದು ಲಕ್ಷ್ಮಿ ಧಾರವಾಹಿ.
ಹೌದು ಸ್ನೇಹಿತರೆ ಮುದ್ದುಲಕ್ಷ್ಮಿ ಧಾರಾವಾಹಿ ತನ್ನ ವಿಭಿನ್ನ ಕಥಾಹಂದರ ದಿಂದಾಗಿ ಪ್ರೇಕ್ಷಕರ ಗಮನ ಸೆಳೆಯಲು ಯಶಸ್ವಿಯಾಗಿದೆ ಎನ್ನುವುದು ನಿಮಗೆ ಗೊತ್ತು, ಹಲವಾರು ಸಂಚಿಕೆಗಳನ್ನು ಕೂಡ ಈಗಾಗಲೇ ಪೂರೈಸಿದೆ. ಧಾರಾವಾಹಿಯಲ್ಲಿ ನಾಯಕನಟ ದ್ರುವಂತ್ ಪಾತ್ರ ಸಾಕಷ್ಟು ಪ್ರೇಕ್ಷಕರ ಗಮನ ಸೆಳೆದಿದ್ದು ಇವರ ಪ್ರತಿಭೆ ಹಾಗೂ ನಟನೆ ಎಲ್ಲರ ಮನಗೆದ್ದಿದೆ. ಇನ್ನು ದ್ರುವಂತ ರವರ ಪಾತ್ರವನ್ನು ನಿರ್ವಹಿಸುತ್ತಿರುವುದು ಚರಿತ್ ಎಂಬುವವರು. ಚರಿತ್ರೆ ಅವರು ಈಗಾಗಲೇ ಸಾಕಷ್ಟು ಕಷ್ಟಪಟ್ಟು ಮೇಲೆ ಬಂದಿದ್ದು ಮುದ್ದು ಲಕ್ಷ್ಮಿ ಧಾರಾವಾಹಿಯ ಮೂಲಕ,

ಎಲ್ಲರ ಗಮನ ಸೆಳೆಯಲು ಯಶಸ್ವಿಯಾಗಿದ್ದು ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ ಇವರಿಗೆ ಚಿತ್ರರಂಗದಿಂದ ಅವಕಾಶಗಳು ಅರಸಿಕೊಂಡು ಬರುತ್ತಿವೆ. ಇನ್ನು ಚರಿತ್ ಅವರಿಗೆ ಮದುವೆಯಾಗಿದ್ದು ಇವರ ಹೆಂಡತಿಯ ಹೆಸರು ಮಂಜುಶ್ರೀ ಎಂದು. ಮಂಜುಶ್ರೀ ಅವರು ಕೂಡ ತಮ್ಮ ಪತಿಯಂತೆ ಪ್ರತಿಭಾನ್ವಿತೆ. ಹೌದು ಸ್ನೇಹಿತರೆ ಮಂಜುಶ್ರೀ ಅವರು ಚಿತ್ರಕಲಾವಿದೆ. ಸಾಕಷ್ಟು ನಿಜವೆನಿಸುವ ಚಿತ್ರಗಳನ್ನು ಬಿಡಿಸುವ ಹವ್ಯಾಸವನ್ನು ಮಂಜುಶ್ರೀ ಯವರು ಮೈಗೂಡಿಸಿಕೊಂಡಿದ್ದಾರೆ. ಇವರ ಚಿತ್ರ ನೋಡುವುದೇ ಕಣ್ಣಿಗೆ ಹಬ್ಬ ಎಂದು ಹೇಳಬಹುದಾಗಿದೆ. ಈ ಜೋಡಿಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.