ಒಂದು ಸಲವಲ್ಲ, ಎರೆಡೆರಡು ಬಾರಿ ವಿಚ್ಚೇದನ ನೀಡಿರುವ ಟಾಪ್ ನಟಿಯರು ಯಾರ್ಯಾರು ಗೊತ್ತೇ??

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಚಿತ್ರರಂಗದ ಸೆಲೆಬ್ರಿಟಿಗಳು ಮದುವೆ ವಿಚಾರದಲ್ಲಿ ಮುಲಾಜಿಲ್ಲದೆ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಹೌದು ಸ್ನೇಹಿತರೆ ಯಾವುದೇ ಸಂಬಂಧ ಕೂಡ ಅವರಿಗೆ ತಲೆನೋ’ವಾಗಿ ಪರಿಣಮಿಸುತ್ತಿದೆ ಎಂದರೆ ಖಂಡಿತವಾಗಿ ಅದನ್ನು ಮುರಿದುಕೊಂಡು ಮತ್ತೊಂದು ಮದುವೆಯಾಗಿ ತಮ್ಮ ಜೀವನವನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವತ್ತ ಕಾರ್ಯನಿರ್ವಹಿಸುತ್ತಾರೆ. ಹೌದು ಸ್ನೇಹಿತರೆ ಇಂದಿನ ವಿಷಯದಲ್ಲಿ ನಾವು ಎರಡು ಬಾರಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿರುವ ನಟ ಹಾಗೂ ನಟಿಯರ ಕುರಿತಂತೆ ಹೇಳಲು ಹೊರಟಿದ್ದೇವೆ.

ಸರಿತಾ ಅಂದಿನ ಕಾಲದ ಬಹುಭಾಷಾ ನಟಿಯಾಗಿಯೇ ಮಿಂಚಿರುವ ಸರಿತಾ ರವರು ಮೊದಲಿಗೆ ವೆಂಕಟಸುಬ್ಬಯ್ಯ ಎಂಬುವರನ್ನು ಮದುವೆಯಾಗುತ್ತಾರೆ. ನಂತರ 1976 ರಲ್ಲಿ ವೆಂಕಟಸುಬ್ಬಯ್ಯನವರಿಗೆ ವಿವಾಹ ವಿಚ್ಛೇದನ ನೀಡುವ ಸರಿತಾ ರವರು ನಂತರ 1988 ರಲ್ಲಿ ಮುಕೇಶ್ ಎಂಬುವರನ್ನು ಮದುವೆಯಾಗುತ್ತಾರೆ. ನಂತರ 2011 ರಲ್ಲಿ ಸರಿತಾ ರವರು ಮುಖೇಶ್ ಅವರಿಗೂ ಕೂಡ ವಿವಾಹ ವಿಚ್ಛೇದನವನ್ನು ನೀಡುತ್ತಾರೆ. ನಂತರ ಈಗ ತಮ್ಮ ಮಕ್ಕಳೊಂದಿಗೆ ವಿದೇಶದಲ್ಲಿ ನೆಲೆಸಿದ್ದಾರೆ. ಅಂಬಿಕ ಬಹುಭಾಷಾ ತಾರೆ ಅಂಬಿಕಾ ರವರು 1988 ರಲ್ಲಿ ಪ್ರೇಮ್ ಕುಮಾರ್ ಎಂಬುವವರನ್ನು ಮದುವೆಯಾಗುತ್ತಾರೆ.

ನಂತರ ಅಂಬಿಕಾ ರವರು 1997 ರಲ್ಲಿ ಪ್ರೇಮ್ ಕುಮಾರ್ ಅವರಿಗೆ ವಿವಾಹ ವಿಚ್ಛೇದನವನ್ನು ನೀಡುತ್ತಾರೆ. 2000 ದಲ್ಲಿ ರವಿಕಾಂತ್ ಎಂಬುವರೊಂದಿಗೆ ಎರಡನೇ ವಿವಾಹವಾಗುತ್ತಾರೆ. ನಂತರ ಎರಡು ವರ್ಷದಲ್ಲಿ ಇವರಿಗೂ ಕೂಡ ವಿವಾಹ ವಿಚ್ಛೇದನವನ್ನು ನೀಡುತ್ತಾರೆ. ಲಕ್ಷ್ಮಿ ಪಂಚಭಾಷೆ ತಾರೆ ಯಾಗಿದ್ದ ಲಕ್ಷ್ಮಿ ರವರು 1969 ರಲ್ಲಿ ಭಾಸ್ಕರ್ ಎನ್ನುವವರನ್ನು ವಿವಾಹವಾಗುತ್ತಾರೆ. ಲಕ್ಷ್ಮಿ ರವರು ಮತ್ತೆ ಭಾಸ್ಕರ್ ರವರಿಗೆ 1974 ರಲ್ಲಿ ವಿವಾಹ ವಿಚ್ಛೇದನ ನೀಡಿ 1975 ರಲ್ಲಿ ಮೋಹನ್ ಶರ್ಮ ರವರೊಂದಿಗೆ ಎರಡನೇ ಮದುವೆ ಆಗುತ್ತಾರೆ. ನಂತರ ಇವರಿಗೂ ಕೂಡ 1985 ರಲ್ಲಿ ವಿವಾಹ ವಿಚ್ಛೇದನವನ್ನು ನೀಡಿದ ಲಕ್ಷ್ಮಿ ಅವರು 1987 ರಲ್ಲಿ ಶಿವಚಂದ್ರ ನನ್ನವರೊಂದಿಗೆ ಮದುವೆಯಾಗಿ ಈಗ ಅವರೊಂದಿಗೆ ಸಂಸಾರ ನಡೆಸುತ್ತಿದ್ದಾರೆ.

ಶೃತಿ ಕನ್ನಡ ಚಿತ್ರರಂಗದ ಖ್ಯಾತ ನಟಿಯಾಗಿರುವ ಶೃತಿಯವರು ಹೆಸರಾಂತ ನಿರ್ದೇಶಕ ಎಸ್ ಮಹೇಂದರ್ ಅವರನ್ನು 1998 ರಲ್ಲಿ ಪ್ರೀತಿಸಿ ಮದುವೆ ಆಗುತ್ತಾರೆ. ಸುದೀರ್ಘ 11 ವರ್ಷಗಳ ಸಂಸಾರವನ್ನು ನಡೆಸಿದ ಈ ದಂಪತಿಗಳು ಪರಸ್ಪರ ಭಿನ್ನಾಭಿಪ್ರಾಯಗಳಿಂದಾಗಿ 2009 ರಲ್ಲಿ ವಿಚ್ಛೇದನದ ಮೂಲಕ ದೂರವಾಗುತ್ತಾರೆ. ಇದಾದ ನಂತರ ನಟಿ ಶೃತಿಯವರು 2013 ರಲ್ಲಿ ಪತ್ರಕರ್ತರಾದ ಅಂತಹ ಚಕ್ರವರ್ತಿ ಚಂದ್ರಚೂಡ್ ರವರನ್ನು ಮದುವೆಯಾಗುತ್ತಾರೆ. ಕೆಲವು ಕಾನೂನಾತ್ಮಕ ಸಮಸ್ಯೆಗಳಿಂದಾಗಿ ಇವರಿಗೂ ಕೂಡ 2014 ರಲ್ಲಿ ವಿವಾಹ ವಿಚ್ಛೇದನವನ್ನು ನೀಡುತ್ತಾರೆ. ಹೇಗೆ ಹಲವಾರು ನಟ ಹಾಗೂ ನಟಿಯರು ಎರಡೆರಡುಬಾರಿ ಮದುವೆಯಾಗಿ ವಿಚ್ಛೇದನವನ್ನು ನೀಡಿ ಸುದ್ದಿಯಾಗಿರುವುದು ನೀವು ಈಗಾಗಲೇ ಹಲವಾರು ಬಾರಿ ನೋಡಿರುತ್ತೀರಿ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.