ಮೇಘನಾ ಹಾಗೂ ಚಿರು ಸರ್ಜಾ ರವರ ಮಗನಿಗೆ ನಾಮಕರಣ ಶಾಸ್ತ್ರ, ಜೂನಿಯರ್ ಚಿರುವಿನ ಹೆಸರೇನು ಗೊತ್ತೇ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ದಿವಗಂತ ನಟ, ನಟ ಸಾಮ್ರಾಟ ಚಿರಂಜೀವಿ ಸರ್ಜಾ ನಮ್ಮನ್ನಗಲಿದರೂ ಅವರ ನೆನಪನ್ನು ಶಾಶ್ವತವಾಗಿ ಉಳಿಸಿದ್ದು, ಉಳಿಸುತ್ತಿರುವುದು ಅವರ ಪತ್ನಿ ಮೇಘನಾ ರಾಜ್ ಹಾಗೂ ಅವರ ಅಗ ಜ್ಯೂನಿಯರ್ ಚಿರಂಜೀವಿ. ಹೌದು ಸ್ನೇಹಿತರೆ, ಚಿರಂಜೀವಿ ಸರ್ಜಾ ನಮ್ಮನ್ನಗಲುವಾಗ ಮೇಘನಾ ರಾಜ್ 5 ತಿಂಗಳ ಗರ್ಭಿಣಿ. ತನ್ನ ಪತಿಯನ್ನು ಈ ಪರಿಸ್ಥಿತಿಯಲ್ಲಿ ಕಳೆದುಕೊಂಡರೂ ಎದೆಗುಂದದೆ, ಚ್ಯೂನಿಯರ್ ಚಿರುವಿಗೆ ಜನ್ಮ ನೀಡಿದರು ಮೇಘನಾ ರಾಜ್!

ಮೇಘನಾ ರಾಜ್ ತಮ್ಮ ಮಗನ ಫೋಟೊ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರ ಮೂಲಕ ಸದಾ ಚಿರು ಅಭಿಮಾನಿಗಳಿಗೆ ಖುಷಿ ನೀಡುತ್ತಿರುತ್ತಾರೆ. ಇನ್ನು ಮೇಘನಾ ಹಾಗೂ ಚಿರಂಜೀವಿಯವರ ಮಗನಿಗೆ 11 ತಿಂಗಳಾಯ್ತು. ಈ ಮಗುವಿಗೆ ಏನು ಹೆಸರಿಡಬಹುದು ಎಂಬುದೇ ಎಲ್ಲರ ಕುತೂಹಲವಾಗಿತ್ತು. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹೆಸರುಗಳನ್ನು ಸೂಚಿಸುತ್ತಿದ್ದರು ನೆಟ್ಟಿಗರು. ಆದರೆ ಇನ್ನು ಜ್ಯೂನಿಯರ್ ಚಿರುಗೆ ಒಂದು ತಿಂಗಳಲ್ಲಿ ಒಂದು ವರ್ಷವಾಗುತ್ತೆ. ಹಾಗಾಗಿ ಆ ದಿನವೇ ಅಂದರೆ ಸಪ್ಟೆಂಬರ್ 3ರಂದು ಜ್ಯೂನಿಯರ್ ಚಿರುವಿಗೆ ಕುಟುಂಬಸ್ಥರು ನಾಮಕರಣ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಚಿರು ನೆನಪುಗಳನ್ನು ಮರುಕಳಿಸುವಂಥ ಹಾಗೂ ಜ್ಯೂನಿಯರ್ ಚಿರುವಿನ ಆಟ ಪಾಠಗಳ ವಿಡಿಯೋ ಒಂದನ್ನು ಮೇಘನಾ ರಾಜ್ ಅವರ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಂಡಿದು, ಈ ಮೂಲಕ ಮಗನ ನಾಮಕರಣದ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ’ಜ್ಯೂನಿಯರ್ ಚಿರುವಿನ ನಿಕ್ ನೇಮ್ ಗಳನ್ನೇಲ್ಲಾ ಸೇರಿಸಿ ಒಂದು ಸುಂದರವಾದ ಹೆಸರನ್ನು ಇಡಲಿದ್ದಾರಂತೆ. ಇನ್ನು ಜ್ಯೂನಿಯರ್ ಚಿರುವಿಗೆ ಏನು ಹೆಸರಿಡೋದು ಅನ್ನೊ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಸಪ್ಟೆಂಬರ್ 3ರಂದು ಹೆಸರನ್ನು ರಿವೀಲ್ ಮಾಡುವುದಾಗಿ ಹೇಳಿದ್ದಾರೆ. ಮೇಘನಾ ರಾಜ್ ಹಾಗೂ ನಟ ಚಿರಂಜೀವಿ ಸರ್ಜಾ ಅವರ ಮಗನಿಗೆ ಹಲವಾರು ಪೆಟ್ ನೇಮ್ ಗಳಿದ್ದವು. ವ್ಯೂನಿಯರ್ ಚಿರು, ಮರಿ ಸಿಂಗಾ, ಜ್ಯೂನಿಯರ್ ಸಿ, ಬರ್ಫಿ, ಚಿಂಟು, ಸಿಂಬಾ, ಚಿರು ಬಚ್ಚಾ ಹೀಗೆ ಹಲವಾರು ಮುದ್ದು ಮುದ್ದು ಹೆಸರಿನಿಂದ ಪ್ರೀತಿಯಿಂದ ಕರೆಯಲಾಗುತ್ತಿತ್ತು!

Get real time updates directly on you device, subscribe now.