ಪಾರ್ಟಿಯಲ್ಲಿ ಥೇಟ್ 20 ವರ್ಷದ ಹುಡುಗಿಯ ಕಂಡ ರಾಧಿಕಾ ಪಂಡಿತ್ ರವರು ಸುಮಲತಾ ರವರಿಗೆ ಕೊಟ್ಟ ವಿಶೇಷ ಉಡುಗೊರೆ ಏನು ಗೊತ್ತೇ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಒಂದಾಗಿ ಕಾಣಿಸುವುದು ತುಂಬಾನೇ ಅಪರೂಪ. ಕಾರಣವೆಂದರೆ ಅವರಿಗೆ ಇರುವ ಬ್ಯುಸಿ ಶೆಡ್ಯೂಲ್ ನಲ್ಲಿ ಒಂದಾಗುವುದಕ್ಕೆ ಯಾವ ಕಾರಣಗಳು ಇರುವುದಿಲ್ಲ ಹಾಗಾಗಿ ಅವರವರ ಕೆಲಸಗಳಲ್ಲಿ ಅವರು ಮಗ್ನರಾಗಿರುತ್ತಾರೆ. ಆದರೆ ಇತ್ತೀಚಿಗೆ ಸ್ಯಾಂಡಲ್ವುಡ್ನ ಹಲವಾರು ಸೆಲೆಬ್ರಿಟಿಗಳು ಒಂದು ಕಾರ್ಯಕ್ರಮದಲ್ಲಿ ಒಂದಾಗಿ ಕಾಣಿಸಿಕೊಂಡಿದ್ದಾರೆ.

ಹೌದು ಸ್ನೇಹಿತರೆ ಇತ್ತೀಚಿಗಷ್ಟೇ ನಡೆದಂತಹ ಸಂಸದೆ ಹಾಗೂ ಖ್ಯಾತ ಹಿರಿಯ ನಟಿ ಆಗಿರುವ ಸುಮಲತಾ ಅಂಬರೀಶ್ ಅವರ ಜನ್ಮದಿನಾಚರಣೆ ಸಂದರ್ಭದಲ್ಲಿ ಅರ್ಧಕ್ಕರ್ಧ ಕನ್ನಡ ಚಿತ್ರರಂಗ ಬಂದಿತ್ತು. ಈ ಸಮಯದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಅವರ ಪತ್ನಿ ಆಗಿರುವ ರಾಧಿಕಾ ಪಂಡಿತ್ ಅವರು ಕೂಡ ಹಾಜರು ಇದ್ದರು. ಇನ್ನೂ ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಿಂದ ದೂರವಿರುವ ರಾಧಿಕಾ ಪಂಡಿತ್ ಅವರು ಇತ್ತೀಚಿಗೆ ಮೊದಲ ಬಾರಿಗೆ ಸುಮಲತಾ ಅಂಬರೀಶ್ ಅವರ ಜನ್ಮದಿನಾಚರಣೆ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಅವರು ಇಪ್ಪತ್ತರ ಹರೆಯದ ಯುವತಿಯಂತೆ ಸೌಂದರ್ಯ ಕಾಣಿಸಿಕೊಂಡಿದ್ದರು.

ಇನ್ನು ತಮ್ಮ ನೆಚ್ಚಿನ ಸುಮಲತಾ ಅಂಬರೀಶ್ ಅವರಿಗೆ ರಾಕಿಂಗ್ ದಂಪತಿಗಳು ಜೊತೆಯಾಗಿ ಸೇರಿ ಜನ್ಮದಿನದ ಶುಭ ಕೋರಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಸುಮಲತಾ ಅಂಬರೀಶ್ ಅವರು ಇಷ್ಟಪಟ್ಟಂತಹ ದುಬಾರಿ ಬೆಲೆಯ ಗಿಫ್ಟ್ ಒಂದೊಂದು ನೀಡಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬಂದಿದೆ. ಇನ್ನು ಈ ಜನ್ಮ ದಿನಾಚರಣೆ ಸಂದರ್ಭದಲ್ಲಿ ಕೇವಲ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮಾತ್ರವಲ್ಲದೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಯಲ್ ಸ್ಟಾರ್ ಉಪೇಂದ್ರ ಗುರುಕಿರಣ್ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹಾಗೂ ಸುಮಲತಾ ಅಂಬರೀಶ್ ಅವರ ಸುಪುತ್ರನಾದಂತಹ ಅಭಿಷೇಕ್ ಅಂಬರೀಶ್ ಹಾಗೂ ಇತರರು ಕೂಡ ಹಾಜರಿದ್ದರು. ಈ ಫೋಟೋಗಳನ್ನು ನೀವು ಕೂಡ ಈ ಕೆಳಗಡೆ ನೋಡಬಹುದಾಗಿದೆ.

Get real time updates directly on you device, subscribe now.