ಮೊದಲ ಬಾರಿಗೆ ಕನ್ನಡದ ಒಂದು ಕಾಲದ ಟಾಪ್ ನಟಿ ಮಾಧವಿ ರವರ ಮಗಳನ್ನು ತೋರಿಸ್ತೇವೆ ನೋಡಿ, ನೀವು ನೋಡಿದ್ದೀರಾ??
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರನಟಿಯರಲ್ಲಿ ಕೆಲವರು ಕನ್ನಡದಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ ನಂತರ ಇತರ ಭಾಷೆಗಳಲ್ಲಿ ನಟನೆ ಮುಂದುವರೆಸಿ ಅಲ್ಲಿಯೇ ಉಳಿದುಬಿಟ್ಟಿದ್ದಾರೆ. ಇನ್ನು ಕೆಲವರು ಇತರ ಭಾಷಾ ಚಿತ್ರಗಳ ಜೊತೆಗೆ ಕನ್ನಡದಲ್ಲಿಯೂ ನಟಿಸುತ್ತಾರೆ. ಹೀಗೆ ಬಹು ಭಾಷೆಗಳಲ್ಲಿ ಅಂದಿನಿಂದ ನಾಯಕ ನಟಿಯಾಗಿ ನಟಿಸುತ್ತಾ ಇಂದು ಪೋಷಕ ನಟಿಯಾಗಿ ಮುಂದುವರಿದವರಿದ್ದಾರೆ.
ಸ್ನೇಹಿತರೆ ನಾವಿಲ್ಲಿಮಾತನಾಡುತ್ತಿರುವುದು ಅಂದಿನ ಕಾಲದ ಹಿಟ್ ಸ್ಟಾರ್ ಮಾಧವಿಯವರ ಬಗ್ಗೆ! ಈಕೆ 70-90ರ ದಶಕದ ಬಹುಬೇಡಿಕೆಯ ನಟಿ. ಹೈದ್ರಾಬಾದ್ ನಲ್ಲಿ ಹುಟ್ಟಿದ ಈಕೆ ಒಬ್ಬ ಬಹುಭಾಷಾ ತಾರೆ. ಕನ್ನಡ, ಮಲಯಾಳಂ, ತೆಲುಗು ತಮಿಳು, ಓರಿಯಾ, ಬೆಂಗಾಲಿ, ಹಿಂದೆ ಹೀಗೆ ಹಲವು ಭಾಷೆಗಳಲ್ಲಿ ಸುಮಾರು 300ರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಕನ್ನಡದಲ್ಲಿ ದಾ. ರಾಜ ಕುಮಾರ್, ಸಾಹಸಿ ಸಿಂಹ ವಿಷ್ಣುವರ್ಧನ್, ಅನಂತನಾಗ್, ಟೈಗರ್ ಪ್ರಭಾಕರ್, ರೆಬಲ್ ಸ್ಟಾರ್ ಅಂಬರೀಷ್ ಹೀಗೆ ಕನ್ನಡದ ಎಲ್ಲಾ ಮೇರು ನಟರ ಜೊತೆ ನಾಯಕಿಯಾಗಿ ಅಭಿನಯಿಸಿದ್ದಾರೆ ನಟಿ ಮಾಧವಿ. ಜೀವನ ಚೈತ್ರ, ಶ್ರುತಿ ಸೇರಿದಾಗ, ಮಲೆಯ ಮಾರುತ, ಚಾಣಾಕ್ಯ, ರುದ್ರನಾದ ಇನ್ನೂ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿ ಮಾಧವಿ ತಮ್ಮ ಅದ್ಭುತ ನಟನೆಯ ಮೂಲಕ ಮನೆ ಮಾತಾಗಿದ್ದವರು.
ಇನ್ನು ಮಾಧವಿಯವರ ನಿಜ ಜೀವನದ ಬಗ್ಗೆ ಮಾತನಾಡುವುದಾದರೆ, ಅವರು ಅಮೇರಿಕಾದಲ್ಲಿದ್ದ ಉದ್ಯಮಿ ರಾಲ್ಫಾ ಶರ್ಮಾ ಅವರನ್ನು ಮದುವೆಯಾಗಿದ್ದಾರೆ. ನಟಿ ಮಾಧವಿಯವರಿಗೆ ಮೂರು ಜನ ಹೆಣ್ಣುಮಕ್ಕಳು. ಟಿಫಾನಿ ಶರ್ಮಾ, ಎವೆಲಿನ್ ಶರ್ಮಾ, ಪ್ರಿಸ್ಸಿಲ್ಲಾ ಶರ್ಮಾ. ಅವರಲ್ಲಿ ಒಬ್ಬಳು ಪಕ್ಕಾ ಮಾಧವಿಯವರ ತರಾನೇ ಇದ್ದು, ಅವರೂ ಕೂಡ ನಟನೆಗೆ ಬಂದರೆ ಚೆನ್ನಾಗಿರುತ್ತೆ ಅನ್ನುತ್ತಾರೆ ಅಭಿಮಾನಿಗಳು. ಆದರೆ ಅವರ ವಿದ್ಯಾಭ್ಯಾಸ ಮುಗಿಯುವವರೆಗೆ ನಟನೆಗೆ ಕಳುಹಿಸುವ ಉದ್ದೇಶ ವಿಲ್ಲ ಎನ್ನುತ್ತಾರೆ ನಟಿ ಮಾಧವಿ.