ಇತರ ರಾಜ್ಯಗಳಲ್ಲಿ ಇಲ್ಲದ ಸಮಸ್ಯೆ ಕರ್ನಾಟಕದಲ್ಲಿ ಮಾತ್ರ ಯಾಕೆ??ಕನ್ನಡ ಚಿತ್ರರಂಗದ ಈ ಸಮಸ್ಯೆಗೆ ಪರಿಹಾರವೇನು??
ನಮಸ್ಕಾರ ಸ್ನೇಹಿತರೇ ಭಾರತ ದೇಶದಲ್ಲಿ ಬೇರೆ ಉದ್ಯಮ ಗಳಂತೆ ಸಿನಿಮಾ ಉದ್ಯಮ ಕೂಡ ಸಾಕಷ್ಟು ಲಾಭದಾಯಕವಾಗಿದ್ದು. ದೇಶದ ಪ್ರಗತಿಯಲ್ಲಿ ಈ ಉದ್ಯಮ ಕೂಡಾ ಕೋಟ್ಯಾಂತರ ರೂಪಾಯಿಗಳ ಬಂಡವಾಳವನ್ನು ಹೂಡಿದೆ. ಇಂದಿನ ವಿಷಯದಲ್ಲಿ ನಾವು ಭಾರತದ ಯಾವ ಯಾವ ಭಾಗದಲ್ಲಿ ಟಿಕೆಟ್ ದರ ಹೇಗಿದೆ ಎಂದು ನಾವು ಹೇಳುತ್ತೇವೆ.
ಭಾರತದಲ್ಲಿ ಅತ್ಯಂತ ಅಗ್ಗದ ಟಿಕೆಟ್ ಬೆಲೆ ಇರೋದು ಚೆನ್ನೈ ನಗರದಲ್ಲಿ. ಇಲ್ಲಿ single-screen ಟಿಕೆಟ್ ಬೆಲೆ 80 ರೂಪಾಯಿ ಹಾಗೂ ಮಲ್ಟಿಪ್ಲೆಕ್ಸ್ ನ ಬೆಲೆ ಸರಾಸರಿ 107 ರೂಪಾಯಿ. ಇನ್ನು ತಮಿಳುನಾಡು ರಾಜ್ಯದಲ್ಲಿ ಬರೋಬ್ಬರಿ 1670 ಚಿತ್ರಮಂದಿರಗಳಿವೆ. ಇನ್ನು ಆಂಧ್ರ ಹಾಗೂ ತೆಲಂಗಾಣ ರಾಜ್ಯದಲ್ಲಿ ಕೂಡ ಟಿಕೆಟ್ ಬೆಲೆ ಸಾಕಷ್ಟು ಅಗ್ಗ. ಇನ್ನು ಇಲ್ಲಿ ಸಿಂಗಲ್ ಸ್ಕ್ರೀನ್ ನಲ್ಲಿ 50 ರಿಂದ 30 ರೂಪಾಯಿವರೆಗೂ ಕೂಡ ನೋಡಬಹುದು. ಇನ್ನು ಮಲ್ಟಿಪ್ಲೆಕ್ಸ್ ನಲ್ಲಿ ಸರಿಸುಮಾರು 149 ರೂಪಾಯಿಗಳನ್ನು ನೀಡಬೇಕಾಗುತ್ತದೆ. ತೆಲುಗು ರಾಜ್ಯಗಳಾದ ಆಂಧ್ರ ಹಾಗೂ ತೆಲಂಗಾಣದಲ್ಲಿ ಸರಿ ಸುಮಾರು 900ಕ್ಕೂ ಅಧಿಕ ಚಿತ್ರಮಂದಿರಗಳಿವೆ.
ಇನ್ನು ಕೇರಳದಲ್ಲಿ ಕೂಡ ಟಿಕೆಟ್ ಬೆಲೆ ಅಗ್ಗ. ಕೇರಳದ ಕೊಚ್ಚಿಯಲ್ಲಿ ಸಿಂಗಲ್ ಸ್ಕ್ರೀನ್ ಟಿಕೆಟ್ ಬೆಲೆ ಸರಾಸರಿ 107 ರೂಪಾಯಿ. ಇನ್ನು ಮಲ್ಟಿ ಸ್ಕ್ರೀನ್ ಬೆಲೆ 127 ರೂಪಾಯಿ. ಇನ್ನು ಕೇಳಿದ ರಾಜ್ಯದಲ್ಲಿರುವುದು ಕೇವಲ 287 ಚಿತ್ರಮಂದಿರಗಳು. ಇನ್ನು ಮಲಯಾಳಂ ಚಿತ್ರರಂಗ ಕಡಿಮೆ ಬಜೆಟ್ ನಲ್ಲಿ ಅತ್ಯಂತ ಹೆಚ್ಚು ಲಾಭವನ್ನು ಪಡೆಯಲು ಹೆಸರುವಾಸಿ. ಇನ್ನು ಗುಜರಾತಿನಲ್ಲಿ ಸಿಂಗಲ್ ಸ್ಕ್ರೀನ್ 127 ಹಾಗೂ ಮಲ್ಟಿ ಸ್ಕ್ರೀನ್ 157 ರೂಪಾಯಿಗೆ ಸರಿಸುಮಾರು ಟಿಕೆಟ್ ದರ ಸಿಗುತ್ತದೆ. ಇನ್ನು ಕರ್ನಾಟಕದಲ್ಲಿ ಕೂಡ ಅದರಲ್ಲೂ ಬೆಂಗಳೂರಿನಲ್ಲಿ ಸಿಂಗಲ್ ಸ್ಕ್ರೀನ್ 149 ಹಾಗೂ ಮಲ್ಟಿ ಸ್ಕ್ರೀನ್ ಸರಿಸುಮಾರು 283 ರೂಪಾಯಿ. ಅತ್ಯಂತ ದುಬಾರಿ ಟಿಕೆಟ್ ಸಿಗೋದು ದೇಶದ ರಾಜಧಾನಿ ದಿಲ್ಲಿಯಲ್ಲಿ. ಇಲ್ಲಿ single-screen ಗಳ ಸರಿಸುಮಾರು ಬೆಲೆ 263 ರೂಪಾಯಿ. ಮಲ್ಟಿ ಸ್ಕ್ರೀನ್ ಟಿಕೆಟ್ ನ ಸರಿಸುಮಾರು ಬೆಲೆ 323 ರೂಪಾಯಿ.