ಅಚ್ಯುತ್ ಕುಮಾರ್ ಅವರ ಹೆಂಡತಿ ಕೂಡ ಕನ್ನಡದ ಖ್ಯಾತ ನಟಿ ತುಂಬಾ ಫೇಮಸ್, ಯಾರು ಗೊತ್ತೇ?? ನೀವು ನೋಡಿದ್ದೀರಿ, ಆದರೆ ತಿಳಿದಿಲ್ಲ ಅಷ್ಟೇ.

22

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಯಾವುದೇ ಪಾತ್ರವನ್ನು ಕೂಡ ನೀಡಿದರು ಅದಕ್ಕೆ 100% ನ್ಯಾಯವನ್ನು ನೀಡಬಲ್ಲಂತಹ ಸವ್ಯಸಾಚಿ ಕಲಾವಿದ ಎಂದರೆ ಅದು ಒಂದೇ ಹೆಸರು ಕೇಳಿ ಬರುತ್ತದೆ ಅಚ್ಚುತರಾವ್ ಎಂದು. ಹೌದು ಸ್ನೇಹಿತರೆ ತುಮಕೂರಿನ ತಿಪಟೂರಿನಲ್ಲಿ ಜನಿಸಿದಂತಹ ಅಚ್ಚುತ ಅವರು ಮುಂದಿನ ದಿನಗಳಲ್ಲಿ ನಟನೆ ಆಸಕ್ತಿ ಮೂಡಿ ಬಂದು ಶಿವಮೊಗ್ಗದಲ್ಲಿ ನೀನಾಸಂ ಸಂಸ್ಥೆಯಲ್ಲಿ ರಂಗಭೂಮಿ ತರಬೇತಿಯನ್ನು ಪಡೆಯುತ್ತಾರೆ.

ನಂತರ ಹಲವಾರು ಧಾರವಾಹಿಗಳಿಗೆ ನಟಿಸುವ ಮೂಲಕ ಜನಪ್ರಿಯತೆ ಪಡುತ್ತಾರೆ ಅದರಲ್ಲಿ ಮೂಡಲಮನೆ ಪ್ರಮುಖವಾದದ್ದು. ಆ ದಿನಗಳು ಚಿತ್ರದಲ್ಲಿಯ ಆಯಿಲ್ ಕುಮಾರ್ ಪಾತ್ರದಲ್ಲಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿ ಅಚ್ಚುತ್ ಕುಮಾರ್ ಅವರು ಮುಂದಿನ ದಿನಗಳಲ್ಲಿ ಲೂಸಿಯಾ ಚಿತ್ರದ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಹಾಗೂ ಅವಾರ್ಡ್ ಗಳನ್ನು ಕೂಡ ಪಡೆಯುತ್ತಾರೆ. ಇದಾದ ನಂತರ ಈಗ ಕನ್ನಡ ಚಿತ್ರರಂಗದ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹುಬೇಡಿಕೆಯ ಪೋಷಕ ನಟನಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಅಚ್ಚುತ ರಾವ್ ರವರ ಪತ್ನಿ ಕೂಡ ಖ್ಯಾತನಟಿ ಅವರು ಕೂಡ ಅವರೊಂದಿಗೆ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಚ್ಚುತ್ ರಾವ್ ರವರ ಪತ್ನಿ ನಂದಿನಿ ಪಟವರ್ಧನ್ ಸ್ವಂತ ವಾದ ರಂಗಭೂಮಿ ಸಂಸ್ಥೆಯನ್ನು ಹೊಂದಿದ್ದು ಕೆಲವೊಂದು ಚಿತ್ರ ಹಾಗೂ ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ‌. ಗಂಡ ಹೆಂಡತಿ ಇಬ್ಬರೂ ಕೂಡ ನಟನಾ ವೃತ್ತಿಯಲ್ಲಿ ಇರುವುದರಿಂದಾಗಿ ಇವರಿಬ್ಬರ ನಡುವೆ ಅತ್ಯುತ್ತಮ ಹೊಂದಾಣಿಕೆ ಇದೆ ಎಂದು ಹೇಳಬಹುದಾಗಿದೆ. ಒಟ್ಟಾರೆಯಾಗಿ ಅಚ್ಚುತ್ ಕುಮಾರ್ ರವರು ಕನ್ನಡ ಚಿತ್ರರಂಗಕ್ಕೆ ಸಿಕ್ಕಂತಹ ವರಪ್ರಸಾದ ನಟ ಎಂದು ಹೇಳಬಹುದು. ಇನ್ನು ಅಚ್ಯುತರಾವ್ ರವರ ನಟನೆ ಇಷ್ಟವಾಗಿದ್ದರೆ ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.