ಟಿ. ಎನ್ ಸೀತಾರಾಮ್ ಗೆ ಮದುವೆಯಲ್ಲಿ ಸಿಕ್ಕಿದ್ದು 1000 ರೂಪಾಯಿ; ಈ ಹಣದಿಂದ ಅವರು ಮಾಡಿದ್ದೇನು ಗೊತ್ತಾ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಮ್ಮೊಟ್ತ ಮೊದಲಿಗೆ ಕನ್ನಡದ ಪ್ರಖಾತ ನಿರ್ದೇಶಕ ಟಿ ಎನ್ ಸೀತಾರಾಮ್ ಅವರ ಮದುವೆ ವಾರ್ಷಿಕೋತ್ಸವಕ್ಕೆ ಎಲ್ಲರೂ ಸೇರಿ ಹಾರೈಸೋಣ. ಹೌದು ಸ್ನೇಹಿತರೆ ಅಗಸ್ಟ್ 28 ಟಿ ಎನ್ ಸೀತಾರಾಮ್ ಹಾಗೂ ಗೀತಾ ಅವರು ಮದುವೆಯಾದ ದಿನ. ತಮ್ಮ ಮದುವೆಯ ದಿನವನ್ನು ನೆನಪಿಸಿಕೊಂಡು ಆ ದಿನದ ಬಗ್ಗೆ ತಮ್ಮ ಅನುಭವವನ್ನು ಫೇಸ್ ಬುಕ್ ಪೇಜ್ ನಲ್ಲಿ ಸೀತಾರಾಮ್ ಅವರು ಪೋಸ್ಟ್ ಮಾಡಿದ್ದು ಆ ಕಥೆ ತುಂಬಾನೆ ಇಂಟರೆಸ್ಟಿಂಗ್ ಆಗಿದೆ. ಏನದು ಕಥೆ ಒಮ್ಮೆ ಓದಿ.

’ಇಂದಿನಂತೆ ಅಂದೂ ಹೀಗೇ ಬೆಳಿಗಿನ ವೇಳೆಗೆ ಬರಿ ಮೋಡ‌. ಹತ್ತು ಗಂಟೆಯ ವೇಳೆಗೆ ಮೋಡಗಳು ಚೆದುರಿ ಶುಭ್ರ ಆಕಾಶವಾಯಿತು. ಬೆಂಗಳೂರು ನಗರಕ್ಕೆ ಸೇರಿರಲಿಲ್ಲ ಆಗ. ಜಯನಗರದ ಕಾಂಪ್ಲೆಕ್ಸ್ ನಿಂದ ಎಷ್ಟೋ ಮೈಲಿ. ನಿರ್ಜನ ಪ್ರದೇಶದ ದೇವಸ್ಥಾನ. ನರಸಿಂಹ ಎಂದು ನನ್ನ ಸ್ನೇಹಿತ. ನಂತರ ಚಿತ್ರ ಸಾಹಿತಿಯಾದ.ಅವನೊಂದು ಸರಕು ಸಾಗಣೆಯ ವ್ಯಾನ್ ಇಟ್ಟಿದ್ದ. ಗೌರಿಬಿದನೂರಿನಿಂದ ರಾಮನಗರಕ್ಕೆ ರೇಷ್ಮೆಗೂಡು ಸಾಗಿಸುವ ವ್ಯಾನ್. ಅದರಲ್ಲಿ ನಮ್ಮನ್ನೆಲ್ಲಾ ಅಲ್ಲಿ ಬಿಟ್ಟು ರಾಮನಗರಕ್ಕೆ ಹೊರಟು ಹೋಗಿದ್ದ‌. ಮದುವೆಗೆ ಇರು ಅಂದರೆ ಇರಲಿಲ್ಲ’. ಹೀಗೆ ತಮ್ಮ ಸ್ನೇಹಿತನನ್ನು ನೆನಪಿಸಿಕೊಂಡರು ಸೀತಾರಾಮ್ ಅವರು.

ಹಾಗ್ ಮುಂದಿವರೆಸಿದ ಸೀತಾರಾಮ್ ಅವರು ’ಇನ್ನು ಮದುವೆ ಆಗಲಾರೆ ಎಂಬ ಎಷ್ಟೋ ದಿನದ ನಿಲುವು ಬದಲಾದ ದಿನ. ಹೆಚ್ಚು ಜನಗಳಿಲ್ಲದ ದೂರದ ಜಾಗದಲ್ಲಿ ಮದುವೆಯಾಗಬೇಕು.ಸೂಟು, ಬೂಟು ಉಂಗುರ, ಯಾವ ಆಡಂಬರವೂ ಇರಬಾರದು. ಮದುವೆಗೆ ಹೆಚ್ಚು ಜನ ಬರಬಾರದು.ಮದುವೆ ಅತಿ ಸರಳವಾಗಿ ನಡೆಯ ಬೇಕು ಎಂಬುದಷ್ಟೇ ನನ್ನ ಆಗ್ರಹವಾಗಿತ್ತು‌. ಅವರ ಕಡೆಯವರಿಗೆ ಒಳಗೊಳಗೇ ಸ್ವಲ್ಪ ದಿಗಿಲು.ಜನ ಬರಬಾರದು, ದೂರದ ಜಾಗದಲ್ಲಿ ಸರಳವಾಗಿ ಮಾಡಬೇಕು ಎಂದರೆ ಯಾವುದೋ ಸಂಗತಿ ಮುಚ್ಚಿಟ್ಟುಕೊಳ್ಳಲು ಇರಬಹುದೇ ಎಂಬ ಸಣ್ಣ ಅನುಮಾನ ಅವರಿಗೆ ನನ್ನ ಜೇಬಿನಲ್ಲಿ ಇಡಿಯ ಖರ್ಚಿಗೆ ಉಳಿದಿದ್ದುದು ಐನೂರ ಎಪ್ಪತ್ತು ರೂಪಾಯಿ.ವಧುವನ್ನೂ ಕರೆದುಕೊಂಡು ಊರು ತಲುಪುವುದು ಹೇಗೆಂಬ ಚಿಂತೆ. ಮದುವೆಯ ಸಡಗರದಲ್ಲೂ ಆತಂಕದಲ್ಲಿ ಇದ್ದೆ. ಎಂದಿದ್ದಾರೆ.

’ಮದುವೆಗೆ ಹೆಚ್ಚು ಜನ ಬರಬಾರದೆಂಬ ಆಶಯ ವಿದ್ದರೂ ಹತ್ತಿರದ ಜನ ಬಂದಿದ್ದರು.ಅಂದು ಬರಿಯ ಗೆಳೆಯರಾಗಿದ್ದು ನಂತರದ ದಿನಗಳಲ್ಲಿ ಎಂ.ಎಲ್.ಎ, ಮಂತ್ರಿ ಗಳಾದವರು, ಸಿನಿಮಾ ನಟರಾದವರು, ಖ್ಯಾತ ಪತ್ರಕರ್ತ ರು, ಮುಂತಾದ ಕೆಲವು ಜನಬಂದಿದ್ದರು.ದುಡ್ಡು ಕಡಿಮೆಯಾದರೆ ತಾನು ಸ್ವಲ್ಪ ಕೊಡುತ್ತೇನೆಂದು ಗೆಳೆಯ ಕಿಟ್ಟಿ ಧೈರ್ಯ ಹೇಳುತ್ತಿದ್ದರು. ಮಧ್ಯಾಹ್ನ ಸರಳ ಊಟದ ನಂತರ ನರಸಿಂಹ ರಾಮನಗರದಿಂದ ವ್ಯಾನ್ ತಂದರು.ಅದರಲ್ಲಿ ಎಲ್ಲರೂ ಗೌರಿಬಿದನೂರಿಗೆ ವಾಪಸ್. ನಾನು ಗೀತಾ ಮಾತ್ರ ಮಲ್ಲೇಶ್ವರಂ ನಲ್ಲಿದ್ದ ಕಿಟ್ಟಿ ಮನೆಗೆ ಬಂದೆವು. ಉಡುಗೊರೆ ಬೇಡವೆಂದರೂ ಕೆಲವರು ಕವರುಗಳನ್ನು ಜೇಬಿಗೆ ತುರುಕಿದ್ದರು.ಅದರಲ್ಲಿ ಒಂದು ಕವರಿನಲ್ಲಿ ಒಂದು ಸಾವಿರವಿತ್ತು.ಇಂದಿನ ಐವತ್ತು ಸಾವಿರಕ್ಕೆ ಸಮ.ಯಾರು ಕೊಟ್ಟರೆಂದು ಬರೆದಿರಲಿಲ್ಲ. ಬಹಳ ದಿನ ಯಾರು ಕೊಟ್ಟಿರ ಬಹುದೆಂದು ತಲೆ ಕೆಡಿಸಿಕೊಂಡು, ವಾಪಸ್ ಕೊಡಬೇಕಾಗಬಹುದೆಂದು ಹೆದರಿ ಹಾಗೇ ಗೌರಿಬಿದನೂರಿನ ದೇವರ ಮನೆಯಲ್ಲಿ ಇಟ್ಟಿದ್ದೆ. ಮತ್ತೆ ಹುಟ್ಟಿದರೆ ಬದಲಾಯಿಸದೆ ಇಟ್ಟುಕೊಳ್ಳ ಬಯಸುವ ಪುಟಗಳಲ್ಲಿ ಇದೂ ಒಂದು’. ಹೀಗೆ ತಮ್ಮ ಮದುವೆಯ ದಿನವನ್ನು ಅತ್ಯಂತ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ ನಿರ್ದೇಶಕ ಟಿ ಎನ್ ಸೀತಾರಾಮ್.

Get real time updates directly on you device, subscribe now.