ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೇವೆ ಸಲ್ಲಿಸಿರುವ ಜನಪ್ರಿಯ ನಟ ರಾಜೇಶ್ ರವರ ಮಗಳು ಕೂಡ ಖ್ಯಾತ ನಟಿ ಯಾರು ಗೊತ್ತೇ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಒಂದು ಕುಂಟುಂಬದ ಒಬ್ಬ ಸದಸ್ಯ ಚಿತ್ರರಂಗಕ್ಕೆ ಕಾಲಿಟ್ಟರೆ ನಂತರ ಅವರ ಕುಟುಂಬದಲ್ಲಿ ಉಳಿದವರು ಅಥವಾ ಮಗ, ಮಗಳು ಹೀಗೆ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಾರೆ. ಈಗ ಚಿತ್ರರಂಗದಲ್ಲಿರುವ ಸಾಕಷ್ಟು ಜನ ನಟ ನಟಿಯರು ಕಲಾವಿದರ ಫ್ಯಾಮಿಲಿಯಿಂದನೇ ಬಂದವರು. ಡಾ. ರಾಜ್ ಕುಟುಂಬನೇ ಇದಕ್ಕೊಂದು ದೊಡ್ಡ ಉದಾಹರಣೆ. ಇನ್ನು ಕಿರುತೆರೆಯಲ್ಲಿ ಮಿಂಚಿ ನಂತರ ಬೆಳ್ಳಿತೆರೆಗೆ ಕಾಲಿಟ್ಟವರು ಕೂಡ ಸಾಕಷ್ಟು ಮಂದಿ. ಹಾಗೆ ಕಿರುತೆರೆಯಲ್ಲಿ ನಟನೆ ಆರಂಭಿಸಿ ಬೆಳ್ಳಿತೆರೆಯಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ಖ್ಯಾತ ನಟ ರಾಜೇಶ್.

ಹೌದು, ಕನ್ನಡದ ಕಿರುತೆರೆಯ ಅತ್ಯುತ್ತಮ ಧಾರಾವಾಹಿಗಳಾಗಿದ್ದ ಮಾಯಾಮೃಗ, ಗುಪ್ತಗಾಮಿನಿ ಮೊದಲಾದ ಧಾರಾವಾಹಿಗಳನ್ನು ನೆನಪಿಸಿಕೊಂಡರೆ ರಾಜೇಶ್ ಕಣ್ಮುಂದೆ ಬರುತ್ತಾರೆ. ರಾಜೇಶ್ ಒಬ್ಬ ರಂಗಭೂಮಿ ಕಲಾವಿದ. ಅಲ್ಲಿಂದ ನೇರವಾಗಿ ನಟನಾ ವೃತ್ತಿಯನ್ನು ಆರಂಭಿಸಲಾಗಲಿಲ್ಲ. ನಟನಾ ತರಬೇತಿಯನ್ನು ಬೆಂಗಳೂರಿನಲ್ಲಿ ಹಾಗೂ ನಂತರ ದೆಹಲಿಯಲ್ಲಿ ಮುಗಿಸಿದರು. ಅದಾದ ನಂತರ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿ ನಂತರವಷ್ಟೇ ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಪಡೆದರು.

ಇಲ್ಲಿ ನಟನೆಗೆ ಮೆಚ್ಚಿದ ಜನ ಬೆಳ್ಳಿತೆರೆಯ ಮೇಲೂ ರಾಜೇಶ್ ಅವರನ್ನು ಮೆಚ್ಚಿದರು. ರಾಜೇಶ್ ಸಿನಿಮಾ ರಂಗ ಪ್ರವೇಶಿಸಿ ಅತ್ಯುತ್ತಮ ಪೋಷಕ ಪಾತ್ರವನ್ನು ನಿರ್ವಹಿಸಿದರು. ನಟ ರಾಜೇಶ್ ಚಿತ್ರಕಥೆ ಬರಹಗಾರರಾಗಿ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ನಟ ರಾಜೇಶ್ ಅವರ ಮಗಳೂ ಕೂಡ ಹಿಂದಿ ಸಿನಿಮಾದಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ’ಬಿಯಾಂಡ್ ದಿ ಕೌಡ್ಸ್’ ಚಿತ್ರದಲ್ಲಿ ಬಾಲ ನಟಿಯಾಗಿ ನಟಿಸಿದ್ದಾರೆ. ರಾಜೇಶ್ ಇತ್ತೀಚಿಗೆ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದಿದ್ದರೂ ಅವರ ಮಗಳು ಇನ್ನು ತೆರೆಯ ಮೇಲೆ ಹೆಚ್ಚಾಗಿ ಅಭಿನಯಿಸುವುದರಲ್ಲಿ ಸಂಶಯವಿಲ್ಲ.

Get real time updates directly on you device, subscribe now.