ಒಡವೆ ಕೊಳ್ಳಲು ಹೋದ ರೈತನಿಗೆ ವಾಚ್ ಮ್ಯಾನ್ ಅವಮಾನ ಮಾಡುತ್ತಾನೆ! ನಂತರ ಆಗಿದ್ದೆ ಬೇರೆ, ನಡೆದ್ದದ್ದೆನು ಗೊತ್ತೇ??

29

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ದೇಶದಲ್ಲಿ ಶ್ರೀಮಂತಿಕೆ ಹಾಗೆ ಬಡತನವನ್ನು ಅಳೆಯುವುದು ಅವರು ಹಾಕಿಕೊಂಡಿರುವ ಬಟ್ಟೆಯಿಂದ ಎಂಬುದು ಸಾಕಷ್ಟು ಬಾರಿ ಸಾಬೀತಾಗಿದೆ ಇದಕ್ಕೆ ಹಲವಾರು ಘಟನೆಗಳು ಕೂಡ ಸಾಕ್ಷಿಯಾಗಿದೆ. ಆದರೆ ಅದು ತಪ್ಪು ಎಂದು ಅರ್ಥ ಆದಮೇಲೆ ಕೂಡ ನಮ್ಮ ದೇಶದಲ್ಲಿ ಇನ್ನೂ ಕೂಡ ಬಡತನವನ್ನು ಅವರ ಹಾಕಿರುವ ಬಟ್ಟೆ ಮೇಲೆ ಅಳೆಯುವುದನ್ನು ಇನ್ನು ಕೂಡ ಬಿಟ್ಟಿಲ್ಲ. ಇನ್ನು ನಾವು ಹೇಳಲು ಹೊರಟಿರುವ ಕಥೆ ತಮಿಳುನಾಡಿನಲ್ಲಿ ನಡೆದಿರುವಂತಹ ನೈಜ ಘಟನೆ.

ಹೌದು ಸ್ನೇಹಿತರೆ ತಮಿಳುನಾಡಿನಲ್ಲಿ ಆರ್ಮುಗಂ ಎಂಬ ರೈತರ ಇರುತ್ತಾರೆ. ಬಹಳ ಪರಿಶ್ರಮಿ ರೈತ ಕಷ್ಟಪಟ್ಟು ತಮ್ಮಲ್ಲಿರುವ 20 ಎಕರೆ ಹೊಲದಲ್ಲಿ ಬೆಳೆಯನ್ನು ಬೆಳೆಯುತ್ತಾರೆ. ಇನ್ನು ಇವರಿಗೆ ಒಬ್ಬ ಪತ್ನಿ ಇದ್ದು ಇಬ್ಬರು ಮಕ್ಕಳಿದ್ದರು. ಮೂರನೇ ಮಗುವಿನ ಜನನದ ಸಂದರ್ಭದಲ್ಲಿ ತಾಯಿ ಇಹಲೋಕವನ್ನು ತ್ಯಜಿಸುತ್ತಾರೆ. ಆಗ ಆರ್ಮುಗಂ ರವರಿಗೆ ಏನು ಮಾಡುವುದು ಎಂದು ತೋಚದಂತಾಗುತ್ತದೆ. ಯಾಕೆಂದರೆ ಅವರಿಗೆ ಇಷ್ಟ 20 ಎಕರೆ ಹೊಲದಲ್ಲಿ ಮೈಮುರಿದು ದುಡಿಯಬೇಕಿತ್ತು. ಬೆಳೆಯನ್ನು ಬೆಳೆದು ಕುಟುಂಬವನ್ನು ಕೂಡ ಸಾಧಿಸಬೇಕಿತ್ತು.

ಇತ್ತ ಮಕ್ಕಳ ಆರೈಕೆ ಹಾಗೂ ಶಿಕ್ಷಣ ಅಭ್ಯಾಸದ ಜವಾಬ್ದಾರಿಯನ್ನು ಕೂಡ ಹೊರಬೇಕಿತ್ತು. ಏನು ಮಾಡಲಿ ಎಂದು ಚಿಂತಿತರಾಗಿದ್ದರು. ಇವರ ಸಂಬಂಧಿಗಳು ಹಾಗೂ ಸ್ನೇಹಿತರು ಇನ್ನೊಂದು ಮದುವೆಯಾಗು ನಿನ್ನ ಮಕ್ಕಳಿಗೂ ಕೂಡ ಆಸರೆಯಾಗುತ್ತದೆ ನಿನಗೂ ಕೂಡ ಕೆಲಸ ಮಾಡಲು ಸಮಯ ಸಿಗುತ್ತದೆ ಎಂಬುದಾಗಿ ಸೂಚನೆ ನೀಡುತ್ತಾರೆ. ಆದರೆ ಆರ್ಮುಗಂ ಇದಕ್ಕೆ ಒಪ್ಪದೇ ನಾನೆ ಹೊಲದಲ್ಲಿ ದುಡಿದು ನನ್ನ ಮಕ್ಕಳನ್ನು ಚೆನ್ನಾಗಿ ಸಾಕುತ್ತೇನೆ ಎಂಬ ನಿರ್ಧಾರಕ್ಕೆ ಬರುತ್ತಾರೆ.

ಹಾಗೆಯೇ ತಮ್ಮಲ್ಲಿ ಇದ್ದಂತಹ 20 ಎಕರೆ ಹೊಲದಲ್ಲಿ ಬೆಳೆಯಲು ಬೆಳೆಯುತ್ತ ದುಡಿಮೆಯನ್ನು ಮಾಡುತ್ತಾ ಮಕ್ಕಳ ಶಿಕ್ಷಣವನ್ನು ಕೂಡ ನೋಡಿಕೊಳ್ಳಲು ಪ್ರಾರಂಭಿಸುತ್ತಾರೆ. ಒಂದೊಮ್ಮೆ ಮಕ್ಕಳು ಹೊಲದ ಕಡೆ ಬಂದರು ಕೂಡ ಗದರಿಸಿ ಮನೆಯಲ್ಲಿ ಓದಿಕೊಳ್ಳಿ ಎಂದು ಹೇಳುತ್ತಿದ್ದರು. ನಂತರ ಒಮ್ಮೆ ಆರ್ಮುಗಂ ರವರು ತಮ್ಮ 20 ಎಕರೆ ಹೊಲದಲ್ಲಿ ನುಗ್ಗೆಕಾಯಿಯನ್ನು ಬೆಳೆಯುತ್ತಾರೆ. ಆ ವರ್ಷ ನುಗ್ಗೆಕಾಯಿ ಬೆಳೆ ಚೆನ್ನಾಗಿ ಬೆಳೆದು ಉತ್ತಮ ಫಲ ದೊರಕುತ್ತದೆ.

ಇನ್ನು ನುಗ್ಗೆಕಾಯಿ ಯನ್ನು ಮಾರಲು ಆರ್ಮುಗಂ ರವರು ಚೆನ್ನೈನಲ್ಲಿ ಇದ್ದ ‌ರಕಾರಿ ತರಕಾರಿ ಮಾರಾಟ ಕೇಂದ್ರಕ್ಕೆ ಹೋಗುತ್ತಾರೆ. ಅಲ್ಲಿ ಆರ್ಮುಗಂ ರವರು ತರಕಾರಿಯನ್ನು ಮಾರಾಟ ಮಾಡಿ 15 ಲಕ್ಷ ಹಣವನ್ನು ಪಡೆಯುತ್ತಾರೆ. ಆ15 ಲಕ್ಷ ಹಣವನ್ನು ತೆಗೆದುಕೊಂಡು ಬರುತ್ತಿರಬೇಕಾದರೆ ತನ್ನ ಮೊದಲ ಮಗಳಿಗೆ ಏನಾದರೂ ಆಭರಣವನ್ನು ತೆಗೆದುಕೊಂಡು ಹೋಗುವ ಅಲೋಚನೆ ಬರುತ್ತದೆ. ಅಲ್ಲೇ ಸಮೀಪದಲ್ಲಿದ್ದ ದೊಡ್ಡ ಆಭರಣ ಅಂಗಡಿಗೆ ಆಭರಣವನ್ನು ಕೊಳ್ಳಲು ಹೋಗುತ್ತಾರೆ. ಆದರೆ ಅಲ್ಲಿದ್ದ ವಾಚ್ಮ್ಯಾನ್ ಆರುಮುಗಂ ರವರಿಗೆ ಒಳಗೆ ಹೋಗಲು ಬಿಡುವುದಿಲ್ಲ ಕಾರಣವೇನೆಂದರೆ ಅವರು ಹಾಕಿಕೊಂಡಿದ್ದಂತಹ ಬಟ್ಟೆ.

ರೈತರಾಗಿದ್ದ ಕಾರಣ ಅವರ ಬಟ್ಟೆಯಲ್ಲಿ ಸ್ವಲ್ಪ ಕೊಳೆ ಕೂಡ ಇತ್ತು ಹಾಗಾಗಿ ಇವನು ಯಾರೋ ಭಿಕ್ಷುಕ ಇರಬಹುದು ಎಂಬುದಾಗಿ ತಿರಸ್ಕಾರ ಮನೋಭಾವದಿಂದ ಅವರನ್ನು ಹೊರತಳ್ಳುತ್ತಾನೆ. ಈ ಗಲಾಟೆಯನ್ನು ನೋಡುತ್ತಿದ್ದಂತೆ ಆ ಸಂಸ್ಥೆಯ ಮ್ಯಾನೇಜರ್ ಬಂದು ಏನಾಯಿತು ಎಂದು ಕೇಳುತ್ತಾನೆ. ವಾಚ್ ಮ್ಯಾನ್ ನಡೆದಂತಹ ವಿಷಯಗಳನ್ನು ಹೇಳುತ್ತಾನೆ. ಆಗ ಅವನು ಕೂಡ ಆರ್ಮುಗಂ ರವರಿಗೆ ತಿರಸ್ಕಾರದ ದೃಷ್ಟಿಯನ್ನು ಬೀರುತ್ತಾನೆ. ಆಗ ಆರ್ಮುಗಂ ರವರು ತನ್ನ ಒಳ ಕಿಸೆಯಲ್ಲಿದ್ದ 15 ಲಕ್ಷ ರೂಪಾಯಿ ಹಣವನ್ನು ತೋರಿಸುತ್ತಾರೆ. ಆಗ ಮ್ಯಾನೇಜರ್ಗೆ ಅದು ಆತ ಕದ್ದಿರುವ ಹಣ ಎಂಬ ಅನುಮಾನ ಬರಲು ಪ್ರಾರಂಭಿಸುತ್ತದೆ. ಅದಕ್ಕಾಗಿಯೇ ಆರ್ಮುಗಂ ರವರನ್ನು ಒಳಗೆ ಕೂರಿಸಲು ಹೇಳಿ ಪೊಲೀಸರಿಗೆ ಫೋನ್ ಮಾಡುತ್ತಾನೆ. ಪೋಲಿಸ್ ರವರು ಆರ್ಮುಗಂ ರವರ ಬಳಿ ಬಂದು ವಿಚಾರಣೆ ಮಾಡಲು ಪ್ರಾರಂಭಿಸುತ್ತಾರೆ.

ಆಗ ಅವರು ತಾವು ನುಗ್ಗೆಕಾಯಿಯನ್ನು ಮಾರಿ ಬಂದಂತಹ ಹಣ ಎಂದು ಹೇಳುತ್ತಾರೆ. ಇದನ್ನು ನಂಬದ ಪೊಲೀಸರು ಆರ್ಮುಗಂ ರವರ ಊರಿನಲ್ಲಿ ದಂತಹ ಪೋಲಿಸ್ ಸ್ಟೇಷನ್ ಗೆ ಫೋನ್ ಮಾಡಿ ಇದರ ಕುರಿತಂತೆ ಪರಿಶೀಲನೆ ಮಾಡುತ್ತಾರೆ. ಆಗ ಅಲ್ಲಿನ ಪೊಲೀಸರೂ ಹೌದು ಆರುಮುಗಂ ರವರಿಗೆ 20 ಎಕರೆ ಹೊಲವಿದ್ದು ಇತ್ತೀಚೆಗಷ್ಟೇ ಒಳ್ಳೆಯ ಬೆಳೆಯನ್ನು ಕೂಡ ಪಡೆದಿದ್ದರು ಒಳ್ಳೆಯ ಲಾಭದ ನಿರೀಕ್ಷೆಯಲ್ಲಿದ್ದಾರೆ ಎಂಬುದಾಗಿ ಭರವಸೆ ನೀಡುತ್ತಾರೆ. ಆಗ ಪೊಲೀಸ್ ಮ್ಯಾನೇಜರ್ ಹಾಗೂ ವಾಚ್ಮನ್ ಗಳಿಗೆ ನಾಡಿನ ರೈತರಿಗೆ ನಾವು ಅವಮಾನ ಮಾಡಿದೆವಲ್ಲ ಎಂಬ ಬೇಸರ ಮೂಡುತ್ತದೆ. ಮೂವರು ಕೂಡ ಆರ್ಮುಗಂ ರವರಿಗೆ ಕ್ಷಮೆಯನ್ನು ಯಾಚಿಸಿ ಸಲ್ಯೂಟ್ ಮಾಡುತ್ತಾರೆ. ಇನ್ನು ಪೊಲೀಸರು ಆರ್ಮುಗಂ ರವರಿಗೆ ತಮ್ಮ ಜೀಪಿನಲ್ಲಿ ಬಸ್ಸ್ಟ್ಯಾಂಡ್ ವರೆಗೂ ಬಿಟ್ಟು ಕಳಿಸಿಕೊಟ್ಟು ಬರುತ್ತಾರೆ. ನೋಡಿದ್ರಲ್ಲ ಸ್ನೇಹಿತರೆ ಯಾವತ್ತೂ ಯಾರ ಬಟ್ಟೆಯನ್ನು ನೋಡಿ ಕೂಡ ನಾವು ಅವರ ವ್ಯಕ್ತಿತ್ವ ಹಾಗೂ ಅಂತಸ್ತನ್ನು ಅಳೆಯಬಾರದು ಎಂದು.

Get real time updates directly on you device, subscribe now.