ಬಿಗ್ ಬಾಸ್ ಮನೆಯಿಂದ ಬಂದ ಒಂದೇ ದಿನಕ್ಕೆ ಶಿವಣ್ಣನ ನೋಡಲು ಮನೆಗೆ ಹೋದ ಮಂಜುಗೆ ಶಿವಣ್ಣ ಮಾಡಿದ್ದೇನು ಗೊತ್ತೇ??

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಅಂತು ಇಂತು ರಿಯಾಲಿಟಿ ಶೋಗಳ ದೊಡ್ಡಣ್ಣ ಎಂದೇ ಖ್ಯಾತವಾಗಿದ್ದ ಬಿಗ್ ಬಾಸ್ ರಿಯಾಲಿಟಿ ಶೋ ಕೊನೆಗೂ ಮುಕ್ತಾಯವನ್ನು ಕಂಡಿದೆ. ಸುಮಾರು 110 ದಿನಗಳಿಗಿಂತ ಹೆಚ್ಚು ಕಾಲ ಪ್ರೇಕ್ಷಕರನ್ನು ಮನರಂಜಿಸಿದ ರಿಯಾಲಿಟಿ ಶೋ ನಿನ್ನೆಯಷ್ಟೇ ಮುಕ್ತಾಯ ಕಂಡಿದೆ. ಇನ್ನು ಈ ಬಾರಿಯ ಬಿಗ್ ಬಾಸ್ ಸೀಸನ್ 8ರ ವಿನ್ನರ್ ಆಗಿ ಮಜಾಭಾರತ ಕೇಳ್ತಿಯ ಮಂಜು ಪಾವಗಡ ರವರು ಜಯಿಸಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಅರವಿಂದ್ ಕೆಪಿ ಹಾಗೂ ಮೂರನೇ ಸ್ಥಾನದಲ್ಲಿ ದಿವ್ಯ ಉರುಡುಗ ರವರು ಕಾಣಿಸಿಕೊಳ್ಳುತ್ತಾರೆ. ಇನ್ನು ಮಂಜು ಪಾವಗಡ ರವರು ಚಿಕ್ಕಂದಿನಿಂದಲೂ ಬಡತನವನ್ನು ಅನುಭವಿಸಿಕೊಂಡು ಬಂದವರು.

ಮೊದಲು ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುತ್ತಿದ್ದ ಇವರು ನಂತರದ ದಿನಗಳಲ್ಲಿ ಮಜಾ ಭಾರತದ ವೇದಿಕೆಯಲ್ಲಿ ತಮ್ಮ ಅಭಿನಯವನ್ನು ತೋರಿಸುವ ಮೂಲಕ ಜನರ ಮನ ಗೆದ್ದರು. ನಂತರ ಬಿಗ್ ಬಾಸ್ ಗೆ ಅವರ ಪ್ರತಿಭೆಯೇ ಅವರನ್ನು ಆಯ್ಕೆ ಮಾಡುವಂತೆ ಮಾಡಿತು. ನಿನ್ನ ಇತ್ತೀಚೆಗಷ್ಟೇ ಬಿಗ್ ಬಾಸ್ ಮನೆಯಲ್ಲಿ ನಿಮ್ಮ ಮನಸ್ಸಿನಲ್ಲಿರುವ ಆಸೆಯನ್ನು ಹೇಳಿಕೊಳ್ಳುವ ಕಾರ್ಯಕ್ರಮವೊಂದನ್ನು ಇಡಲಾಗಿತ್ತು. ಆಗ ಮಂಜು ಪಾವಗಡ ರವರು ತಾವು ಶಿವಣ್ಣನ ಅಭಿಮಾನಿ ಆಗಿದ್ದರಿಂದ ಶಿವಣ್ಣನಿಂದ ನನಗೆ ಆಶೀರ್ವಾದ ಬೇಕು ಎಂಬುದನ್ನು ಪ್ರಸ್ತಾಪಿಸಿ ಕೊಂಡಿದ್ದರು.

ಅದರಂತೆ ಮಂಜು ಪಾವಗಡ ರವರಿಗೆ ಶಿವಣ್ಣನವರು ಗೆದ್ದು ಬನ್ನಿ ಎಂದು ಹಾರೈಸಿದರು. ಅವರ ಹಾರೈಕೆಯಂತೆ ಶಿವಣ್ಣನ ಅಭಿಮಾನಿಗಳ ಬೆಂಬಲ ಕೂಡ ಮಂಜು ಪಾವಗಡ ರವರ ಮೇಲಿದ್ದರಿಂದ ಈಗ ಮಂಜು ಪಾವಗಡ ರವರು ಬಿಗ್ ಬಾಸ್ ವಿಜೇತರಾಗಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಿಂದ ಗೆದ್ದು ಹೊರಬರುತ್ತಿದ್ದ ಒಂದೇ ದಿನಕ್ಕೆ ಒಂದು ಪಾವಗಡ ರವರು ಶಿವಣ್ಣನವರ ಹೋಗಿ ಮತ್ತೊಮ್ಮೆ ಅವರಿಂದ ಆಶೀರ್ವಾದವನ್ನು ಪಡೆದು ಕೊಂಡಿದ್ದಾರೆ. ಶಿವಣ್ಣನವರು ಕೂಡ ಮಂಜು ಪಾವಗಡ ರವರನ್ನು ಪ್ರೀತಿಯಿಂದ ಆದರಿಸಿ ಆಥಿತ್ಯವನ್ನು ನೀಡಿ ಕಳುಹಿಸಿದ್ದಾರೆ. ಕಷ್ಟದಿಂದ ಜೀವನವನ್ನು ಸಾಗಿಸಿಕೊಂಡು ಬಂದವು ಈಗ ಎಲ್ಲರ ಮನಗೆದ್ದಿರುವ ಮಂಜು ಪಾವಗಡ ರವರಿಗೆ ಯೋಗ್ಯವಾದ ಬಹುಮಾನವೇ ಸಿಕ್ಕಿದೆ ಎಂದು ಹೇಳಬಹುದು.

Get real time updates directly on you device, subscribe now.