ಎಷ್ಟೇ ದಪ್ಪ ಇರಿ, ಕೇವಲ ಹೀಗೆ ನಾವು ಹೇಳಿದ ಹಾಗೆ ನೀರು ತಯಾರಿಸಿ ಕುಡಿದು ನೋಡಿ, ಸುಲಭವಾಗಿ ಸಣ್ಣ ಆಗ್ತೀರಾ. ಹೇಗೆ ಗೊತ್ತೇ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ದೇಹದಲ್ಲಿನ ಹೆಚ್ಚುವರಿ ತೂಕವನ್ನು ಇಳಿಸಿಕೊಳ್ಳುವುದು ಅಂದರೆ ಒಂದು ತಪ್ಪಸ್ಸೇ ಸರಿ. ಯಾಕೆಂದರೆ ವರ್ಷಾನುಗಟ್ಟಲೆ ವ್ಯಾಯಾಮ, ಡಯಟ್ ಏನೆ ಮಾಡಿದರೂ ದೇಹ ತೂಕ ಸುಲಭವಾಗಿ ಕಡಿಮೆಯಾಗುವುದೇ ಇಲ್ಲ. ಹೀಗೆ ದೇಹದ ತೂಕವನ್ನು ಇಳಿಸಿಕೊಳ್ಳಲು ಸಾಕಷ್ಟು ಜನ ಶತಾಯಗತಾಯ ಪ್ರಯತ್ನಿಸುತ್ತಾರೆ. ಅದೇಷ್ಟೋ ಹಣವನ್ನೂ ಸಹ ಖರ್ಚು ಮಾಡುತ್ತಾರೆ. ಆದರೆ ಈ ಎಲ್ಲದಕ್ಕಿಂತ ನಾವು ಹೇಳುವ ಈ ಒಂದು ಮನೆ ಮದ್ದು ದೇಹದ ತೂಕ ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದಕ್ಕಾಗಿ ಬೇಕಾಗಿರುವುದು ಜೀರಿಗೆ ಮಾತ್ರ.

ಇಂದಿನ ಕೋವಿಡ್ ಸಮಯದಲ್ಲಿ ಹೊರಗೆ ಹೋಗುವುದಕ್ಕಿಂತ ಮನೆಯಲ್ಲಿಯೇ ಕುಳಿತುಕೊಳ್ಳುವುದು ಹೆಚ್ಚು ಅದರಲ್ಲೂ ಕಂಪನಿಯ ಕೆಲಸಗಳನ್ನು ಮನೆಯಲ್ಲಿಯೇ ಕೂತು ಮಾಡಬೇಕಾದ ಸ್ಥಿತಿಯಿದೆ. ಇಂಥ ಸಂದರ್ಭದಲ್ಲಿ ಸಹಜವಾಗಿಯೇ ಹೆಚ್ಚು ಆಹಾರವನ್ನು ಸೇವಿಸುತ್ತೇವೆ. ಹೀಗಾದಾಗ ತೂಕವೂ ಹೆಚ್ಚುತ್ತಾ ಹೋಗುತ್ತದೆ. ಇದಕ್ಕೆ ಪರಿಹಾರವೆಂದರೆ ಒಂದು ಲೋಟ ಜೀರಿಗೆ ನೀರು. ಒಂದು ಚಮಚ ಜೀರಿಗೆಯನ್ನು ರಾತ್ರಿ ಪೂರ್ತಿ ಒಂದು ಲೋಟ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಈ ನೀರನ್ನು ಕುದಿಸಿ ಕುಡಿಯಿರಿ. ಕುದಿಸಲು ಸಾಧ್ಯವಾಗದಿದ್ದಲ್ಲಿ ಹಾಗೆಯೂ ಕುಡಿಯಬಹುದು. ಇನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ದೇಹದ ತೂಕ ಕಡಿಮೆ ಮಾಡಬಹುದು.

ಜೀರಿಗೆ ನೀರನ್ನು ಬೆಳಗ್ಗೆ ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆಯೂ ಕೂಡ ನಿಮ್ಮನ್ನು ಕಾಡುವುದಿಲ್ಲ. ಜೊತೆಗೆ ಹೊಟ್ಟೆಯೊಳಗಿನ ಕ್ರಿಯೆಗಳು ಸರಿಯಾಗಿ ಆಗುವಂತೆ ಜೀರಾ ನೀರು ನೋಡಿಕೊಳ್ಳುತ್ತದೆ. ಹಾಗೇಯೇ ಊಟವಾದ ಮೇಲೂ ಕೂಡ ಜೀರಾ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಉತ್ತಮ. ಜೀರಾ ನೀರು ಸತತವಾಗಿ ಕುಡಿಯುವುದು ಕೆಲವರ ದೇಹದ ಉಷ್ಣಾಂಶ ಹೆಚ್ಚಿಸಲೂ ಬಹುದು. ಹಾಗಾಗಿ ಬೇಸಿಗೆಯಲ್ಲಿ ಜೀರಿಗೆ ನೀರು ಕುಡಿಯುವುದನ್ನು ತಪ್ಪಿಸಿ ಅಥವಾ ಕಡಿಮೆ ಮಾಡಿ. ಆರೋಗ್ಯದ ಹಲವು ಬೆನಿಫಿಟ್ ಗಳನ್ನು ಹೊಂದಿರುವ ಜೀರಾ ನೀರನ್ನು ದೇಹ ತೂಕ ಕಡಿಮೆ ಮಾಡಿಕೊಳ್ಳಲು ತಪ್ಪದೇ ಕುಡಿಯಿರಿ.

Get real time updates directly on you device, subscribe now.