ಸೂಪರ್ ಸ್ಟಾರ್ ಆಗಬೇಕಿದ್ದಂತಹ ಗೋಲ್ಡನ್ ಸ್ಟಾರ್ ಗಣೇಶ್ ರವರು ಎಡವಿದ್ದೆಲ್ಲಿ ಗೊತ್ತೇ? ಸಾಲು ಸಾಲು ಸೋಲಿಗೆ ಕಾರಣವೇನು ಗೊತ್ತೇ??

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕಿರುತೆರೆಯ ವಾಹಿನಿಯೊಂದರಲ್ಲಿ ನಿರೂಪಕನಾಗಿ ಕೆಲಸಮಾಡುತ್ತಿದ್ದ ಹುಡುಗ ಕನ್ನಡ ಚಿತ್ರರಂಗದಲ್ಲಿ ಗೋಲ್ಡನ್ ಸ್ಟಾರ್ ಆಗಬಲ್ಲ ಎಂಬುದನ್ನು ನಿರೂಪಿಸಿದ್ದು ನಮ್ಮ ಗೋಲ್ಡನ್ ಸ್ಟಾರ್ ಗಣೇಶ್. ಹೌದು ಸ್ನೇಹಿತರೆ ಗೋಲ್ಡನ್ ಸ್ಟಾರ್ ಗಣೇಶ್ ರವರ ಸಿನಿ ಜೀವನದ ಆರಂಭ ಎಲ್ಲಾ ಯುವ ನಟರಿಗೆ ಖಂಡಿತವಾಗಿಯೂ ಸ್ಪೂರ್ತಿ. ಗೋಲ್ಡನ್ ಸ್ಟಾರ್ ಗಣೇಶ್ ಅವರು ಮೊದಲಿಗೆ ಚೆಲ್ಲಾಟ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಟನಾಗಿ ಪಾದಾರ್ಪಣೆ ಮಾಡುತ್ತಾರೆ. ಈ ಚಿತ್ರ ಶತದಿನೋತ್ಸವವನ್ನು ಕಂಡು ಗೋಲ್ಡನ್ ಸ್ಟಾರ್ ಗಣೇಶ್ ರವರು ಕನ್ನಡ ಚಿತ್ರರಂಗದ ಭರವಸೆಯ ನಟನಾಗಿ ಕಾಣಿಸಿಕೊಳ್ಳುತ್ತಾರೆ.

ಇದಾದ ನಂತರ ಬಂದಂತಹ ಮುಂಗಾರು ಮಳೆ ಚಿತ್ರ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. ಇನ್ನು ಇದಾದನಂತರ ಬಂದಂತಹ ಚಿತ್ರಗಳಾದ ಹುಡುಗಾಟ ಕೃಷ್ಣ ಹಾಗೂ ಮತ್ತೊಂದು ಮುಂಗಾರು ಮಳೆಯಿಂದ ಖ್ಯಾತಿಯನ್ನು ಪಡೆದಿದ್ದ ಅಂತಹ ಚೆಲುವಿನ ಚಿತ್ತಾರ ಕೂಡ ಅದ್ಭುತ ಯಶಸ್ಸನ್ನು ಗಳಿಸಿತ್ತು. ಇನ್ನು ಇದಾದ ನಂತರ ಬಂದಂತಹ ಗಾಳಿಪಟ ಚಿತ್ರದ ಯಶಸ್ಸಿನ ಕುರಿತಂತೆ ಹೇಳೋದೇ ಬೇಡ ಬಿಡಿ ಇಂದಿಗೂ ಕೂಡ ಅದು ಎವರ್ಗ್ರೀನ್ ಚಿತ್ರ. ಇಷ್ಟೆಲ್ಲ ಯಶಸ್ಸನ್ನು ಪಡೆದಿದ್ದ ಅಂತಹ ಗೋಲ್ಡನ್ ಸ್ಟಾರ್ ಗಣೇಶ್ ಅವರು ಇಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಪಟ್ಟವನ್ನು ಯಾಕೆ ಪಡೆದುಕೊಂಡಿಲ್ಲ ಎಂಬುವುದು ಗೊತ್ತಾ.

ಇದಕ್ಕೆಲ್ಲ ಯಾವ ವ್ಯಕ್ತಿ ಕಾರಣ ಎಂಬುದು ಗೊತ್ತಾ. ಬನ್ನಿ ಸ್ನೇಹಿತರೆ ನಾವು ನಿಮಗೆ ಆ ವ್ಯಕ್ತಿ ಯಾರು ಎಂಬುದನ್ನು ಹೇಳುತ್ತೇವೆ. ಹೌದು ಸ್ನೇಹಿತರೆ ಇದಕ್ಕೆಲ್ಲ ಕಾರಣ ಸ್ವತಹ ಗೋಲ್ಡನ್ ಸ್ಟಾರ್ ಗಣೇಶ್ ರವರೇ. ಹೌದು ಸ್ನೇಹಿತರೆ ಗಾಳಿಪಟ ಬಿಡುಗಡೆಯಾದ ಅಂತಹ ಮೂರೇ ವಾರಕ್ಕೆ ಅರಮನೆ ಚಿತ್ರವನ್ನು ಬಿಡುಗಡೆ ಮಾಡಿ ತಪ್ಪು ನಿರ್ಧಾರವನ್ನು ಸಾಬೀತುಪಡಿಸುತ್ತಾರೆ. ಇದಾದ ನಂತರ ಬರುವ ಸಂಗಮ ಸರ್ಕಾರಿ ಬೊಂಬಾಟ್ ಹೀಗೆ ಹಲವಾರು ಚಿತ್ರಗಳು ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಸಾಧ್ಯವಾಗದ ಮಟ್ಟಕ್ಕೆ ನಿರಾಸೆಯನ್ನು ಅನುಭವಿಸ್ತು. ಸೂಪರ್ ಸ್ಟಾರ್ ಆಗಬೇಕಿದ್ದ ಅಂತಹ ಗೋಲ್ಡನ್ ಸ್ಟಾರ್ ಗಣೇಶ್ ರವರು ಎಡವಿದ್ದು ಕತೆಯ ಆಯ್ಕೆಯಲ್ಲಿ. ಈಗ ಗೋಲ್ಡನ್ ಸ್ಟಾರ್ ಗಣೇಶ್ ರವರ ಚಿತ್ರಗಳು ಆಗೀಗ ಬಿಡುಗಡೆಯಾದರೂ ಸಹ ನಿರೀಕ್ಷಿತ ಗೆಲುವು ಸಾಧಿಸುತ್ತಿಲ್ಲ.

Get real time updates directly on you device, subscribe now.