ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರ ಮಡದಿ ಪ್ರೇರಣಾ ರವರ ಜನ್ಮದಿನಕ್ಕೆ ಮೇಘನರಾಜ್ ರವರು ನೀಡಿದಂತಹ ಉಡುಗೊರೆ ಏನು ಗೊತ್ತಾ??
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವೇ ಚಿತ್ರಗಳಲ್ಲಿ ನಟಿಸಿ ಕನ್ನಡದ ಟಾಪ್ ಸ್ಟಾರ್ ಗಳ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ಎಂದರೆ ಅದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಕನ್ನಡ ಚಿತ್ರರಂಗದ ಈ ಜನರೇಶನ್ ನ ಹ್ಯಾಟ್ರಿಕ್ ಹೀರೋ ಎಂದರೂ ಕೂಡ ತಪ್ಪಾಗಲಾರದು. ಕನ್ನಡ ಚಿತ್ರರಂಗದಲ್ಲಿ ತಾವು ನಟಿಸಿದ ಮೊದಲ ಮೂರು ಚಿತ್ರದಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿದಂತಹ ನಟ ಧ್ರುವ ಸರ್ಜಾ.
ಇನ್ನು ಇವರು ತಮ್ಮ ಬಹುಕಾಲದ ಗೆಳತಿ ಪ್ರೇರಣಾ ಶಂಕರ್ ರವರನ್ನು ಮದುವೆಯಾಗಿರುವುದು ನಿಮಗೆಲ್ಲಾ ಗೊತ್ತೇ ಇದೆ. ಪ್ರೆರಣ ಶಂಕರ್ ಅವರು ದಯಾನಂದ ಸಾಗರ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ ಧ್ರುವ ಸರ್ಜಾ ಅವರು ತಮ್ಮ ಪ್ರೀತಿಯ ಮಡದಿಯಾದ ಪ್ರಯಾಣ ಶಂಕರ್ ಅವರ ಜನ್ಮದಿನವನ್ನು ಆಚರಿಸಿದ್ದಾರೆ. ಬೀಚಿನಲ್ಲಿ ಸುಂದರವಾದ ಲೈಟಿಂಗ್ಸ್ ನಲ್ಲಿ ತಮ್ಮ ಪ್ರೀತಿಯ ಮಡದಿಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಇನ್ನು ಪ್ರೇರಣ ರವರ ಜನ್ಮದಿನಕ್ಕೆ ಮೇಘನರಾಜ್ ರವರು ಕೂಡ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.

ಇನ್ನು ಮೇಘನರಾಜ ರವರು ಪ್ರೇರಣಾ ಶಂಕರ್ ರವರಿಗೆ ಏನು ಗಿಫ್ಟ್ ಕೊಟ್ಟಿದ್ದಾರೆ ಗೊತ್ತಾ ಬನ್ನಿ ಹೇಳುತ್ತೇವೆ. ಹೌದು ಸ್ನೇಹಿತರೆ ಮೇಘನರಾಜ್ ರವರು ಹಾಗೂ ಜೂನಿಯರ್ ಚಿರು ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದು ಜನ್ಮದಿನದ ಆಚರಣೆಗೆ ಹೋಗಲು ಆಗಿರಲಿಲ್ಲ. ಹೀಗಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕವಾಗಿ ಪ್ರೀತಿಯಿಂದ ವಿಶ್ ಮಾಡುವ ಮೂಲಕ ಹಾಗೂ ಬರೋಬ್ಬರಿ ಎರಡು ಲಕ್ಷ ಬೆಲೆಬಾಳುವ ಕೃಷ್ಣನ ವಿಗ್ರಹವನ್ನು ಪ್ರೆರಣ ಶಂಕರ್ ರವರ ಮನೆಗೆ ಕಳುಹಿಸಿಕೊಡುವ ಮೂಲಕ ಜನ್ಮದಿನಕ್ಕೆ ಬಹುಮೂಲ್ಯ ವಾದ ಉಡುಗೊರೆ ನೀಡುವ ಮೂಲಕ ಶುಭ ಹಾರೈಸಿದ್ದಾರೆ. ಇನ್ನು ಮೇಘನರಾಜ ರವರು ಹಾಗೂ ಜೂನಿಯರ್ ಚಿರು ಬೇಗ ಗುಣಮುಖರಾಗಲೆಂದು ನಾವೆಲ್ಲರೂ ಹಾರೈಸೋಣ ಸ್ನೇಹಿತರೆ.