ಪ್ರೇಕ್ಷಕರ ವೋಟಿಂಗ್ ಅಂತ್ಯ, ನಿಮ್ಮ ಮನೆಯ ಟಿವಿ ಯಲ್ಲಿ ಪ್ರಸಾರವಾಗುವ ಮುನ್ನವೇ ಗೆದ್ದ ಸ್ಪರ್ದಿಯ ಹೆಸರು ಲೀಕ್, ಯಾರಂತೆ ಗೊತ್ತಾ??

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈ ಬಾರಿಯ ಕಿರುತೆರೆಯ ಇತಿಹಾಸದಲ್ಲಿ ಕನ್ನಡ ಬಿಗ್ ಬಾಸ್ ಸಾಕಷ್ಟು ಸುದ್ದಿಯನ್ನು ಮಾಡುತ್ತಿದ್ದು ಈಗಾಗಲೇ ಫಿನಾಲೆ ಪ್ರಾರಂಭವಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ನಿರೂಪಣೆಯಲ್ಲಿ ಪ್ರಾರಂಭ ವಾದಂತಹ ಬಿಗ್ ಬಾಸ್ ಮೊದಲಿಗೆ ಮಧ್ಯಕ್ಕೆ ನಿಂತು ನಂತರ ಸೆಕೆಂಡ್ ಇನ್ನಿಂಗ್ಸ್ ನ ಮೂಲಕ ಮತ್ತೊಮ್ಮೆ ಕಿರುತೆರೆಗೆ ಮರುಕಳಿಸಿ ಈಗ ಫಿನಾಲೆ ಮುಗಿಯುವ ಹಂತಕ್ಕೆ ತಲುಪಿದೆ.

ಈಗಾಗಲೇ ಹಲವಾರು ಅಭ್ಯರ್ಥಿಗಳು ಹಾಗೂ ವೈಲ್ಡ್ ಕಾರ್ಡ್ ಮೂಲಕ ಕೂಡ ಬಂದಂತಹ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ ಬಂದು ಹೋಗಿದ್ದಾರೆ ಈಗ ಕೊನೆಗೆ ಉಳಿದಿರುವುದು ಕೇವಲ ಐದು ಜನ ಸ್ಪರ್ಧಿಗಳು ಮಾತ್ರ. ಬೈಕ್ ರೇಸರ್ ಅರವಿಂದ ಕೆಪಿ ಕಿರುತೆರೆ ನಟಿ ವೈಷ್ಣವಿ ಗೌಡ ನಟಿ ದಿವ್ಯ ಉರುಡುಗ ಉದ್ಯಮಿ ಪ್ರಶಾಂತ್ ಸಂಬರ್ಗಿ ಹಾಗೂ ಹಾಸ್ಯ ಕಲಾವಿದ ಮಂಜು ಪಾವಗಡ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ವಿನ್ನರ್ ಕುರಿತಂತೆ ಸಾಕಷ್ಟು ಚರ್ಚೆಗಳು ಹಾಗೂ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಈಗ ಕೊನೆ ಹಂತ ಬಂದು ತಲುಪಿದೆ.

ಈಗಾಗಲೇ ಕನ್ನಡ ಬಿಗ್ ಬಾಸ್ ಸೀಸನ್ ಎಂಟರ ಫಿನಾಲೆ ಪ್ರಾರಂಭವಾಗಿದ್ದು ಪ್ರಶಾಂತ್ ಸಂಬರ್ಗಿ ಹಾಗೂ ದಿವ್ಯಾ ರವರು ಈಗಾಗಲೇ ಎಲಿಮಿನೇಟ್ ಆಗಿದ್ದಾರೆ. ಕೆಲವೊಂದು ಮೂಲಗಳ ಪ್ರಕಾರ ಈಗಾಗಲೇ ವಿನ್ನರ್ ಹೆಸರು ಲಿಕ್ ಕೂಡ ಆಗಿದೆಯಂತೆ. ಹೌದು ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ವಿಜೇತರ ಹೆಸರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆಯಂತೆ. ಹೌದು ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ವೋಟಿಂಗ್ ನಲ್ಲಿ ಎಲ್ಲಾ ಕಡೆ ಹಾಸ್ಯಕಲಾವಿದ ಮಂಜು ಪಾವಗಡ ರವರ ಹೆಸರು ಲೀಡಿಂಗ್ ನಲ್ಲಿರುವುದು ಈ ಬಾರಿಯ ಬಿಗ್ ಬಾಸ್ ಅನ್ನು ಇವರೇ ಗೆಲ್ಲುತ್ತಾರೆ ಎಂಬುದು ಎಲ್ಲಾ ಕಡೆ ದಟ್ಟವಾಗಿದೆ. ಈ ಬಾರಿಯ ಬಿಗ್ ಬಾಸ್ ವಿಜೇತರ ಹೆಸರನ್ನು ಘೋಷಣೆ ಮಾಡಲು ಇನ್ನು ಕೆಲವೇ ಗಂಟೆಗಳಷ್ಟು ಮಾತ್ರ ಬಾಕಿ ಉಳಿದಿದ್ದು ನಿಜವಾದ ವಿನ್ನರ್ ಯಾರೆಂಬುದು ಆಗಷ್ಟೇ ತಿಳಿಯಲಿದೆ.

Get real time updates directly on you device, subscribe now.