ಇದಕ್ಕೆಲ್ಲ ಕಾರಣ ಆ ದುನಿಯಾ ವಿಜಯ ರವರ ಪತ್ನಿ ಕೀರ್ತಿಯಿಂದ ಲೂಸ್ ಮಾದ ಯೋಗಿ ರವರ ತಾಯಿ, ಏನಂತೆ ಗೊತ್ತಾ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಎಲ್ಲ ನಟರೂ ಫ್ಯಾಮಿಲಿ ಯಂತೆ. ಆದರೆ ಕೆಲವು ನಟರ ಫ್ಯಾಮಿಲಿ ಒಂದಾಗಿಲ್ಲ ಇದು ನಿಮಗೆ ಗೊತ್ತಿರಬಹುದು. ಹೌದು ನಾವು ಹೇಳಲು ಹೊರಟಿರೋದು ಲೂಸ್ ಮಾದ ಯೋಗಿ ಹಾಗೂ ದುನಿಯಾ ವಿಜಯ ರವರ ಫ್ಯಾಮಿಲಿಯ ಕುರಿತಂತೆ. ಹೌದು ಸ್ನೇಹಿತರೆ ದುನಿಯಾ ವಿಜಯ್ ರವರ ಮೊದಲ ಚಿತ್ರ ದುನಿಯಾ ವನ್ನು ಲೂಸ್ ಮಾದ ರವರ ತಾಯಿ ಅಂದರೆ ದುನಿಯಾ ವಿಜಯ ರವರ ಅಕ್ಕ ಹಾಗೂ ಅವರ ಪತಿ ನಿರ್ಮಿಸಿದ್ದು. ಈ ವಿಚಾರವಾಗಿ ಲಾಭದ ಹಂಚಿಕೆಯ ಕುರಿತಂತೆ ಎರಡು ಕುಟುಂಬದ ನಡುವೆ ಭಿನ್ನಾಭಿಪ್ರಾಯಗಳು ಎದ್ದು ಇವರಿಬ್ಬರು ದೂರವಾಗಿದ್ದರು.

ಆದರೆ ಇತ್ತೀಚಿಗೆ ದುನಿಯಾ ವಿಜಯ ರವರ ತಾಯಿಯವರ ಇಹಲೋಕ ತ್ಯಜಿಸಿದ ಮೂಲಕ ಎರಡೂ ಕುಟುಂಬಗಳು ಕೂಡ ಈಗ ಮತ್ತೊಮ್ಮೆ ಒಂದಾಗಿದೆ. ಈ ಕುರಿತಂತೆ ಸಂದರ್ಶನವೊಂದರಲ್ಲಿ ದುನಿಯಾ ವಿಜಯ್ ಅವರ ಅಕ್ಕನಲ್ಲಿ ಕೇಳಿದಾಗ ಅದಕ್ಕೆ ನಾನು ದುನಿಯಾ ವಿಜಯ ರವರ ಪತ್ನಿ ಕೀರ್ತಿ ಅವರಿಗೆ ಧನ್ಯವಾದಗಳನ್ನು ತಿಳಿಸಬೇಕು ಎಂದು ಹೇಳಿದ್ದಾರೆ. ಹೌದು ಸ್ನೇಹಿತರೆ ದುನಿಯಾ ವಿಜಯ ರವರ ತಂದೆ ಹಾಗೂ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಸ್ವತಹ ದುನಿಯಾ ವಿಜಯ ರವರ ಪತ್ನಿಯಾಗಿರುವ ಕೀರ್ತಿ ಅವರೇ,

ಅಕ್ಕ ಹಾಗೂ ಭಾವನವರಿಗೆ ಫೋನ್ ಮಾಡಿ ಕರೆಸೋಣ ಎಂದು ಸಲಹೆ ನೀಡಿದ್ದರಂತೆ. ಈ ಕಾರಣದಿಂದಾಗಿ ಅದೆಷ್ಟು ವರ್ಷಗಳ ಹಿಂದೆ ಮಾತು ಬಿಟ್ಟಿದ್ದ ದುನಿಯಾ ವಿಜಯ್ ರವರು ಮತ್ತೊಮ್ಮೆ ತಮ್ಮ ಪತ್ನಿ ಕೀರ್ತಿ ಅವರಿಂದಾಗಿ ಲೂಸ್ ಮಾದ ರವರ ತಾಯಿ ಅರ್ಥಾತ್ ದುನಿಯಾ ವಿಜಯ ರವರ ಅಕ್ಕನವರಿಗೆ ಫೋನ್ ಮಾಡಿದರು. ದುನಿಯಾ ವಿಜಯ್ ಅವರ ತಾಯಿ ಇಹಲೋಕವನ್ನು ತ್ಯಜಿಸುತ್ತಾ ಮಕ್ಕಳ ಕುಟುಂಬವನ್ನು ಮತ್ತೊಮ್ಮೆ ಒಂದು ಮಾಡಿದರು ಎಂದು ಹೇಳಬಹುದು. ಇದೇ ರೀತಿಯಲ್ಲಿ ಹಾಲು-ಜೇನಿನಂತೆ ದುನಿಯಾ ವಿಜಯ್ ಹಾಗೂ ಲೂಸ್ ಮಾದ ರವರ ಕುಟುಂಬ ಒಂದಾಗಿರಿ ಎಂದು ಹಾರೈಸೋಣ ಸ್ನೇಹಿತರೆ.

Get real time updates directly on you device, subscribe now.