ಬಿಗ್ ಬಾಸ್ ಫೈನಲ್ ವೇದಿಕೆಯಲ್ಲಿ ನಡೆಯಲಿದೆ ಮಹಾ ಸಂಗಮ, ಕಾರ್ಯಕ್ರಮಕ್ಕೆ ಟಾಪ್ ನಟನ ಎಂಟ್ರಿ ಖಚಿತ, ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಬಿಗ್ ಬಾಸ್ ಫೈನಲ್ ಸಂಚಿಕೆಯ ಕುರಿತು ಎಲ್ಲೆಡೆ ಚರ್ಚೆಗಳು ಆರಂಭವಾಗಿ ಬಿಟ್ಟಿವೇ. ಎಲ್ಲಿ ನೋಡಿದರೂ ಯಾವ ಸ್ಪರ್ಧಿ ಗೆಲ್ಲಬಹುದು ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ ಇಂತಹ ಸಮಯದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಹೇಗಿರಲಿದೆ ಎಂಬುದರ ಕುರಿತು ಚರ್ಚೆ ಆರಂಭವಾಗಿದೆ. ಇನ್ನು ಈ ಬಾರಿಯ ಫೈನಲ್ ಕಾರ್ಯಕ್ರಮ ನಿಜಕ್ಕೂ ಬಹಳ ಕುತೂಹಲದಿಂದ ಕೂಡಿರಲಿದೆ ಎಂದರೆ ತಪ್ಪಾಗಲಾರದು
ಯಾಕೆಂದರೆ ಮಂಜು ಪಾವಗಡ ಕೆಪಿ ಅರವಿಂದ್ ಹಾಗೂ ಪ್ರಶಾಂತ್ ಸಂಬರ್ಗಿ ರವರ ನಡುವೆ ಸಾಕಷ್ಟು ಪೈಪೋಟಿ ನಡೆಯುತ್ತಿದೆ ಹಾಗೂ ಅದೇ ಸಮಯದಲ್ಲಿ ವೈಷ್ಣವಿ ಹಾಗೂ ದಿವ್ಯ ಉರುದುಗ ರವರ ಅದೃಷ್ಟ ಕೈಹಿಡಿದರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ. ಇಂತಹ ಸಮಯದಲ್ಲಿ ಭಾರಿ ಕುತೂಹಲ ಮೂಡಿಸಿರುವ ಕಾರಣ ವಾಹಿನಿಯು ಕೂಡ ಬಹಳ ವಿಜೃಂಭಣೆಯಿಂದ ಫಿನಾಲೆ ನಡೆಸಿ ಕೊಡಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ. ಇದೀಗ ಈ ಫೈನಲ್ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತರಲು ಟಾಪ್ ನಟರೊಬ್ಬರು ಫೈನಲ್ ವೇದಿಕೆಗೆ ಬರಲಿದ್ದಾರೆ. ಯಾರು ಎಂದು ನಾವು ತಿಳಿಸಿಕೊಡುತ್ತೇವೆ, ಆದರೆ ಅದಕ್ಕೂ ಮುನ್ನ ಯಾರು ಗೆಲ್ಲಬಹುದು ಎಂಬುದನ್ನು ನೀವು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಇಂತಹ ಸಮಯದಲ್ಲಿ ಕನ್ನಡ ಕಿರುತೆರೆಯ ಮೂಲಗಳಿಂದ ಮಾಹಿತಿಯೊಂದು ಕೇಳಿಬಂದಿದ್ದು ಬಿಗ್ ಬಾಸ್ ವೇದಿಕೆಯಲ್ಲಿ ಕನ್ನಡ ಚಿತ್ರರಂಗದ ಮಹಾನ್ ಜೋಡಿಗಳು ಒಂದಾಗಲಿದ್ದಾರೆ ಎಂಬುದರ ಕುರಿತು ಸುದ್ದಿ ತಿಳಿದು ಬಂದಿದೆ. ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇನ್ನು ಕೆಲವೇ ಕೆಲವು ದಿನಗಳಲ್ಲಿ ಕೆಜಿಎಫ್ ಚಿತ್ರದ ಎರಡನೇ ಭಾಗ ಬಿಡುಗಡೆ ಯಾಗಲಿದೆ, ಈ ಚಿತ್ರದ ಪ್ರಮೋಶನ್ ಗಾಗಿ ನಟ ಯಶ್ ರವರು ಬಿಗ್ ಬಾಸ್ ಕಾರ್ಯಕ್ರಮದ ಫೈನಲ್ ವೇದಿಕೆಯಲ್ಲಿ ಕಾಣಿಸಿ ಕೊಳ್ಳುವುದು ಬಹುತೇಕ ಖಚಿತವಾಗಿದ್ದು, ಒಂದು ವೇಳೆ ಅದೇ ನಡೆದಲ್ಲಿ ಎಲ್ಲ ಟಿಆರ್ಪಿ ಲೆಕ್ಕಾಚಾರಗಳು ಉಡೀಸ್ ಆಗುವುದು ಖಚಿತ.