ಬಿಗ್ ಬಾಸ್ ಮನೆಯಿಂದ ಹೊರ ಬಂದು ಚಂದ್ರಚೂಡ ಮಾಡಿರುವ ಕೆಲಸ ನೋಡಿ, ಮತ್ತೆ ಬಿಗ್ ಬಾಸ್ ವೀಕ್ಷಕರಿಂದ.
ನಮಸ್ಕಾರ ಸ್ನೇಹಿತರೇ ಈ ಬಾರಿಯ ಬಿಗ್ ಬಾಸ್ ಹಲವಾರು ವಿಚಾರ ಗಳಿಗೆ ಬಹಳಷ್ಟು ಸುದ್ದಿಯಾಗಿರೋದು ನಿಮಗೆಲ್ಲಾ ಗೊತ್ತೇ ಇದೆ. ಹೌದು ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ಸಾಕಷ್ಟು ವಿ’ವಾದ ಮನೋರಂಜನೆ ಎಲ್ಲದಕ್ಕೂ ಕಾರಣವಾಗಿದೆ. ಅದರಲ್ಲೂ ನಾವು ಇತ್ತೀಚೆಗಷ್ಟೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಷನ್ ಆಗಿ ಹೊರಹೋಗಿರುವ ಚಕ್ರವರ್ತಿ ಚಂದ್ರಚುಡ್ ರವರ ಬಗ್ಗೆ ಮಾತನಾಡಲೇಬೇಕು. ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದ್ದ ಚಕ್ರವರ್ತಿ ಚಂದ್ರಚುಡ್ ರವರು ಯಾರೂ ಮಾಡದಂತಹ ಸದ್ದನ್ನು ತಮ್ಮ ಮಾತಿನ ಮೂಲಕ ಮಾಡಿದ್ದರು.
ಈ ಹಿಂದಿನ ಬಿಗ್ಬಾಸ್ ನಲ್ಲಿ ವೈಲ್ಡ್ ಕಾರ್ಡ್ ಮೂಲಕ ಬಂದಂತಹ ಸ್ಪರ್ಧಿಗಳು ಇಷ್ಟೊಂದು ದಿನ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡ ಇತಿಹಾಸವೇ ಇಲ್ಲ. ಆದರೆ ಚಕ್ರವರ್ತಿ ಚಂದ್ರಚೂಡ್ ರವರು ತಮ್ಮ ಮಾತಿನ ಪ್ರತಿಭೆಯ ಮೂಲಕ ಬಿಗ್ಬಾಸ್ ಪ್ರೇಕ್ಷಕರಿಗೆ ಮನರಂಜಿಸಿ ಕೊನೆಯವರೆಗೂ ಕೂಡ ಉಳಿದುಕೊಂಡಿದ್ದರು. ಮಾತ್ರವಲ್ಲದೆ ಫೈನಲ್ಗೆ ತಲುಪುವ ಅಭ್ಯರ್ಥಿಗಳಲ್ಲಿ ಇಷ್ಟು ನಲ್ಲಿ ಅವರು ಕೂಡ ನೆಚ್ಚಿನ ಅಭ್ಯರ್ಥಿಯಾಗಿದ್ದರು. ಇನ್ನು ಇತ್ತೀಚೆಗಷ್ಟೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಚಕ್ರವರ್ತಿ ಚಂದ್ರಚುಡ್ ರವರು ಅನಿರೀಕ್ಷಿತ ವಿಚಾರವನ್ನು ಹೊರಹಾಕಿದ್ದಾರೆ.

ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ದಿವ್ಯ ಹಾಗೂ ಅರವಿಂದ್ ರವರ ಕುರಿತಂತೆ ಸಾಕಷ್ಟು ವಿಡಿಯೋಗಳು ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಚಕ್ರವರ್ತಿ ಚಂದ್ರಚೂಡ್ ರವರು ಇದರ ಕುರಿತಂತೆ ಪ್ರತಿಕ್ರಿಯಿಸುತ್ತಾ ಇದು ಪ್ರಶಾಂತ್ ಸಂಬರ್ಗಿ ಅವರು ಮಾಡಿರುವುದು. ಬಿಗ್ ಬಾಸ್ ಮನೆಯಲ್ಲಿ ಮಧ್ಯದಲ್ಲಿ ಹೊರಬಂದಾಗ ಪ್ರಶಾಂತ್ ಸಂಬರ್ಗಿ ಅವರ ಕುರಿತಂತೆ ರಿಸರ್ಚ್ ಮಾಡಿ ದಿವ್ಯ ಹಾಗೂ ಅರವಿಂದ್ ರವರಿಗೆ ಅಪಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದು ಎಷ್ಟರ ಮಟ್ಟಿಗೆ ಸತ್ಯ ಸುಳ್ಳು ಎಂಬುದನ್ನು ಎಲ್ಲ ಅಭ್ಯರ್ಥಿಗಳು ಮನೆಯಿಂದ ಹೊರಬಂದ ಮೇಲಷ್ಟೇ ಕಾದು ನೋಡಬೇಕಾಗಿದೆ.