ಆರಂಭದಲ್ಲಿ ಹೇಳಿದ್ದ ಸುಳ್ಳು ಬಹಿರಂಗ, ತಾನೇ ಸುಳ್ಳು ಹೇಳಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಅರವಿಂದ್, ಏನು ಗೊತ್ತಾ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಅರವಿಂದ ಕೆಪಿ ರವರು ಇದೀಗ ಫಿನಾಲೆ ತಲುಪಿದ್ದಾರೆ ಹಾಗು ಈ ಸಮಯದಲ್ಲಿ ಬಿಗ್ ಬಾಸ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಎಲ್ಲಾ ಸಾಧ್ಯತೆಯನ್ನು ಹೊಂದಿದ್ದಾರೆ ಎಂದರೆ ತಪ್ಪಾಗಲಾರದು. ಆರಂಭದ ದಿನಗಳಿಂದಲೂ ಕೂಡ ಬಹಳ ಉತ್ತಮವಾಗಿ ಆಟವಾಡುತ್ತಿರುವ ಅರವಿಂದ್ ರವರು ಬಹುತೇಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗೆ ಆರಂಭದ ದಿನಗಳಲ್ಲಿ ತಮ್ಮ ಕುರಿತು ತಾವು ಪರಿಚಯ ಮಾಡಿಕೊಳ್ಳುತ್ತಿದ್ದಾಗ ಹೇಳಿರುವ ಕೆಲವೊಂದು ಸುಳ್ಳುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿವೆ.

ಇದರಿಂದ ಅರವಿಂದ್ ರವರು ಯಾಕೆ ಗೆಲ್ಲಬಾರದು ಎಂದು ಮಾತನಾಡುವ ಇತರ ಸ್ಪರ್ಧೀಗಳ ಅಭಿಮಾನಿಗಳಿಗೆ ಇದೀಗ ಮತ್ತೊಂದು ಅಂಶ ಸಿಕ್ಕಿದ್ದು ಅರವಿಂದರು ಸುಳ್ಳು ಹೇಳಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹೌದು ಸ್ನೇಹಿತರೇ ಬಹುಶಃ ನೀವು ಆರಂಭದ ದಿನಗಳನ್ನು ನೋಡಿದರೆ ಅರವಿಂದರು ನೀವು ಯಾಕೆ ಬಿಗ್ಬಾಸ್ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದೀರಿ ಎಂದರೆ ಅಥವಾ ಇನ್ನಿತರ ಸನ್ನಿವೇಶಗಳಲ್ಲಿ ಹಲವಾರು ಬಾರಿ,

ನಾನು ಬೈಕ್ ರೇಸರ್ ಆಗಿದ್ದರೂ ಕೂಡ ನನಗೆ ಹೆಚ್ಚಿನ ಜನಪ್ರಿಯತೆ ಸಿಗಲಿಲ್ಲ, ಹಲವಾರು ಜಾಹೀರಾತುಗಳಲ್ಲಿ ನಟನೆ ಮಾಡಿದ್ದೇನೆ ಆದರೆ ಬೈಕ್ ಓಡಿಸುವುದು ನಾನು ಕೊನೆಯಲ್ಲಿ ಹೀರೋ ಬಂದು ಹೆಲ್ಮೆಟ್ ತೆಗೆಯುತ್ತಾರೆ, ಇದರಿಂದ ಯಾವುದೇ ಜನಪ್ರಿಯತೆ ಸಿಗಲಿಲ್ಲ ಸಿನಿಮಾದಲ್ಲಿ ಕೂಡ ನಟಿಸುವ ಅವಕಾಶ ಪಡೆಯಲು ಸಾಧ್ಯವಾಗಲಿಲ್ಲ, ಹಾಗು ನನಗೂ ಸಿನಿಮಾರಂಗಕ್ಕೆ ನಂಟೇ ಇಲ್ಲ ಎಂದಿದ್ದರು ಆದರೆ ಅರವಿಂದ್ ರವರು ನಿಮಗೆ ತಿಳಿದಿದೆಯೋ ಇಲ್ಲವೋ ತಿಳಿದಿಲ್ಲ ನಾನು ಮತ್ತು ವರಲಕ್ಷ್ಮಿ ಎಂಬ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಹಾಗೂ ಬೆಂಗಳೂರು ಡೇಸ್ ಎಂಬ ಮಲಯಾಳಂ ಚಿತ್ರದಲ್ಲಿ ಕೂಡ ನಟನೆ ಮಾಡಿದ್ದಾರೆ, ಇಷ್ಟಾದರೂ ಕೂಡ ನನಗೂ ಚಿತ್ರರಂಗಕ್ಕೂ ಯಾವುದೇ ನಂಟಿಲ್ಲ ಎಂದು ಹೇಳಿಕೆ ನೀಡಿದ್ದರು. ಇದು ಚಿಕ್ಕ ಅಂಶವಾಗಿ ಇದ್ದರೂ ಕೂಡ ಇತರೆ ಸ್ಪರ್ಧಿಗಳ ಅಭಿಮಾನಿಗಳಿಗೆ ಇದು ಒಂದು ದೊಡ್ಡ ಸುಳ್ಳಿನಂತೆ ಕಾಣಿಸುತ್ತಿರುವುದು ಅರವಿಂದ್ ರವರ ವಿರುದ್ಧ ಮಾತನಾಡಲು ಮತ್ತೊಂದು ಅಂಶ ಸಿಕ್ಕಂತಾಗಿದೆ.

Get real time updates directly on you device, subscribe now.