44 ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ಕನ್ನಡದ ಟಾಪ್ ನಟಿ, ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿಯರು ಕೇವಲ ಒಂದು ಭಾಷೆಗೆ ಸೀಮಿತವಾಗದೆ ಬಹುಭಾಷೆಗಳಲ್ಲಿ ನಟಿಸುತ್ತಾರೆ. ಹೀಗಾಗಿ ನಟರಿಗಿಂತ ಹೆಚ್ಚಾಗಿ ನಟಿಯರು ಜನಪ್ರಿಯತೆಯನ್ನು ಪಡೆದುಕೊಳ್ಳುವುದು ಸರ್ವೇಸಾಮಾನ್ಯ. ಇಂದು ನಾವು ಹೇಳುತ್ತಿರುವ ವಿಷಯದಲ್ಲೂ ಕೂಡ ಈ ನಟಿ ಬಹುಭಾಷಾ ನಟಿಯಾಗಿ ಮಿಂಚಿದ್ದಾರೆ. ಹೌದು ಸ್ನೇಹಿತರೆ ನಾವು ಹೇಳಲು ಹೊರಟಿರುವುದು ದಕ್ಷಿಣ ಭಾರತದ ಬಹುಭಾಷಾ ಹಾಗೂ ಬಹುಬೇಡಿಕೆ ನಟಿಯಾಗಿ ಕಾಣಿಸಿಕೊಂಡಿರುವ ಊರ್ವಶಿ ಅವರ ಬಗ್ಗೆ.
ಕೇರಳದಲ್ಲಿ ಜನಿಸಿ ಮಲಯಾಳಂ ಚಿತ್ರರಂಗದ ಮೂಲಕ ಬಾಲನಟಿಯಾಗಿ ಚಿತ್ರರಂಗವನ್ನು ಪ್ರವೇಶಿಸಿ ನಂತರದ ದಿನಗಳಲ್ಲಿ, ಕನ್ನಡ ತೆಲುಗು ತಮಿಳು ಮಲಯಾಳಂ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿ ಭಾಷೆಯಾಗಿ ಮಿಂಚುತ್ತಾರೆ. ದಕ್ಷಿಣ ಭಾರತದ ಎಲ್ಲಾ ಭಾಷೆಯ ಚಿತ್ರರಂಗಗಳಲ್ಲಿ ಸೇರಿ ಮುನ್ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಇನ್ನು ಈಗ ಪ್ರಸ್ತುತ ಪೋಷಕ ಪಾತ್ರದಲ್ಲಿ ಕೂಡ ನಟಿಸುತ್ತಿದ್ದಾರೆ. ಇನ್ನು ಊರ್ವಶಿ ಅವರ ವೈವಾಹಿಕ ಜೀವನದ ವಿಚಾರವನ್ನು ಹೇಳುವುದಾದರೆ, ಇವರು ಎರಡು ಮದುವೆಯಾಗಿದ್ದಾರೆ.

ಮೊದಲಿಗೆ ಮನೋಜ್ ಎಂಬುವವರನ್ನು ಮದುವೆಯಾಗಿ ಒಬ್ಬ ಹೆಣ್ಣು ಮಗಳನ್ನು ಪಡೆದಿದ್ದರು. ನಂತರ ಮನೋಜ್ ರವರಿಗೆ ವಿಚ್ಛೇದನ ನೀಡಿ ಹೆಣ್ಣುಮಗಳನ್ನು ಕೂಡ ಅವರ ಸುಪರ್ದಿಗೆ ನೀಡುತ್ತಾರೆ. ನಂತರ 2016 ರಲ್ಲಿ ಚೆನ್ನೈ ಮೂಲದ ಉದ್ಯಮಿ ಶಿವಪ್ರಸಾದ್ ರವರನ್ನು ಮದುವೆಯಾಗಿ ಗಂಡು ಮಗನೊಬ್ಬನನ್ನು ಪಡೆಯುತ್ತಾರೆ. ಆದರೆ ನಿಮಗೊಂದು ಸ್ವಾರಸ್ಯಕರ ವಿಷಯ ಗೊತ್ತಾ ಸ್ನೇಹಿತರೆ, ಈ ಗಂಡು ಮಗುವಿಗೆ ಜನ್ಮ ನೀಡುವ ಆಗ ಊರ್ವಶಿ ಅವರಿಗೆ ಬರೋಬ್ಬರಿ 44 ವರ್ಷ ವಯಸ್ಸಾಗಿತ್ತು. ಇನ್ನು ಆ ಗಂಡು ಮಗುವಿನ ಹೆಸರು ಇಹಾನ್ ಪ್ರಜಾಪತಿ ಎಂದು. ಒಂದು ಕನ್ನಡದಲ್ಲಿ ಊರ್ವಶಿ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಕಾಂಬಿನೇಷನ್ ಸೂಪರ್ ಹಿಟ್ ಆಗಿತ್ತು.