ಡಾಕ್ಟರ್ ರಾಜಕುಮಾರ್ ಅವರ ಜೀವನದ ನೆರವೇರದ ಕೊನೆ ಆಸೆ ಏನಾಗಿತ್ತು ಗೊತ್ತಾ ?? ಪಾಪ ಬೇಜಾರ್ ಆಗುತ್ತೆ ಕಣ್ರೀ.

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಸುವರ್ಣಯುಗ ಆರಂಭವಾಗಿದ್ದು ಬೇಡರ ಕಣ್ಣಪ್ಪ ಚಿತ್ರದ ಮೂಲಕ ಮುತ್ತುರಾಜ್ ರಾಜಕುಮಾರ್ ಆದಮೇಲೆ. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಭಾರತದಲ್ಲಿ ಅತ್ಯಂತ ಯಶಸ್ವಿ ಸಿನಿ ಜೀವನವನ್ನು ಜೀವಿಸಿದ ನಟ ಎಂದರೆ ಅದು ಕೇವಲ ನಮ್ಮ ಅಣ್ಣಾವ್ರು ಒಬ್ಬರೇ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ನಟನೊಬ್ಬ ಹಾಡುಗಾರಿಕೆ ಗಾಗಿ ರಾಷ್ಟ್ರಪ್ರಶಸ್ತಿಯನ್ನು ಗೆದ್ದಂತಹ ಸಾಧನೆ ಮಾಡಿದ್ದು ನಮ್ಮ ನಟಸಾರ್ವಭೌಮ ಗಾನಗಂಧರ್ವ ಡಾ ರಾಜಕುಮಾರ್ ಒಬ್ಬರೇ.

ಅಂದಿನ ಕಾಲದಲ್ಲಿ ಕನ್ನಡ ಎಂದಾಗ ಪ್ರತಿಯೊಬ್ಬರಿಗೂ ಪರಭಾಷಿಗರಿಗೆ ನೆನಪಾಗುತ್ತಿದ್ದದ್ದು ಮೊದಲಿಗೆ ರಾಜಕುಮಾರ್ ರವರೇ. ಅಣ್ಣಾವ್ರಿಗೆ ಅಷ್ಟೇ ಕನ್ನಡ ಮೊದಲು ಉಳಿದುದೆಲ್ಲ ಆಮೇಲೆ ಎಂಬಂತಿತ್ತು. ಕನ್ನಡ ಚಿತ್ರರಂಗದಲ್ಲಿ 50 ವರ್ಷಗಳ ತುಂಬು ಜೀವನವನ್ನು ರಾಜನಂತೆ ಮೆರೆದ ಸಾಧಿಸಿದ್ದು ನಮ್ಮ ಅಣ್ಣಾವ್ರು. ಒಂದು ಐವತ್ತು ವರ್ಷಗಳ ಕಾಲ ಚಿತ್ರರಂಗವನ್ನು ಆಳಿದರು ಇನ್ನುಮುಂದೆ 5000 ವರ್ಷಗಳ ಕಾಲ ಕೂಡ ಕನ್ನಡಿಗರ ಮನಸ್ಸಿನಲ್ಲಿ ಸದಾ ಹಚ್ಚಹಸಿರಾಗಿ ಉಳಿದಿರುತ್ತಾರೆ. ಸ್ವತಹ ನಾದಬ್ರಹ್ಮ ಹಂಸಲೇಖ ರವರ ಹೇಳುವಂತೆ ಕನ್ನಡ ಚಿತ್ರರಂಗ ರಾಜ್ ಕುಮಾರ್ ರವರು ಬಂದಮೇಲೆ ಸಮೃದ್ಧವಾಗಿ ಬೆಳೆಯಿತು.

ಇನ್ನು ನಮ್ಮ ಪ್ರೀತಿಯ ರಾಜಕುಮಾರ್ ಅವರಿಗೆ ಕೊನೆಯ ಆಸೆ ಒಂದಿತ್ತು ಅದು ಕೊನೆಗೂ ಕೂಡ ಪೂರ್ತಿಯಾಗಲಿಲ್ಲ. ರಾಜಕುಮಾರ್ ರವರ ಪೂರ್ತಿಯಾಗದ ಆಸೆ ಏನು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇನೆ ಬನ್ನಿ. ಹೌದು ಸ್ನೇಹಿತರೆ ಬೇರೆಲ್ಲಾ ಸೆಲೆಬ್ರಿಟಿಗಳಿಗೆ ತಾವು ಕೋಟಿ ಸಂಪಾದನೆ ಮಾಡಬೇಕೆಂಬ ಆಸೆ ಇರುತ್ತದೆ ಆದರೆ ನಮ್ಮ ಪ್ರೀತಿಯ ಅಣ್ಣಾವ್ರಿಗೆ ತಮ್ಮ ಕೊನೆಯ ಕಾಲದಲ್ಲಿ ಕೃಷಿಕನಾಗಿ ಭೂಮಿ ತಾಯಿಯ ಸೇವೆ ಮಾಡುತ್ತಾ ಮಣ್ಣಲ್ಲಿ ಮಣ್ಣಾಗುವ ಆಸೆಯನ್ನು ಹೊಂದಿದ್ದರಂತೆ. ಇದೇ ಅವರ ಆಸೆಯೇ ಸಾಕು ಅವರು ಎಂತಹ ಸರಳ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ಹೇಳುವುದಕ್ಕೆ.

Get real time updates directly on you device, subscribe now.