ಒಂದು ಕಾಲದ ಟಾಪ್ ನಟಿ ರಾಧಾ ರವರ ಮಗಳು ಇದೀಗ ಕನ್ನಡ ಜನಪ್ರಿಯ ನಟಿ ಯಾರು ಗೊತ್ತೇ??

Cinema

ನಮಸ್ಕಾರ ಸ್ನೇಹಿತರೇ ಕೆಲ ನಟಿಯರು ಕನ್ನಡ ಚಿತ್ರರಂಗಕ್ಕೆ ಕೆಲ ಚಿತ್ರಗಳ ಕಾಲ ಬಂದು ನಂತರ ನಟಿಸಿ ಹೋದರು ತಲ ಕನ್ನಡ ವೀಕ್ಷಕರ ಮನಸ್ಸಿನಲ್ಲಿ ಇಂದಿಗೂ ನೆಲೆಸಿದ್ದಾರೆ. ಏಕೆಂದರೆ ಅವರ ನಟನೆ ಹಾಗೂ ಮುಖಭಾವವನ್ನು ಅಲ್ಲಿನ ಪ್ರೇಕ್ಷಕರು ಅಷ್ಟೊಂದು ಇಷ್ಟಪಟ್ಟಿದ್ದರು ಎಂದರೆ ಅದಕ್ಕಾಗಿ ಇಂದಿನವರೆಗೂ ಅವರು ನಟಿಯನ್ನು ತಮ್ಮ ಮನದಲ್ಲಿ ನೆನಪಿಟ್ಟುಕೊಳ್ಳುತ್ತಾರೆ. ಅಂತಹದೇ ಒಬ್ಬ ನಟಿಯ ಕುರಿತಂತೆ ಇಂದು ನಾವು ಹೇಳಲು ಹೊರಟಿದ್ದೇವೆ‌. ಹೌದು ನಟಿಯಾರು ಹಾಗೂ ಈಗ ಸೂಪರ್ ಸ್ಟಾರ್ ನಟಿಯಾಗಿರುವ ಅವರ ಮಗಳು ಯಾರು ಎಂಬುದನ್ನು ಹೇಳುತ್ತೇವೆ ಬನ್ನಿ.

ಹೌದು ನಾವು ಹೇಳಹೊರಟಿರುವ ನಟಿಯ ಹೆಸರು ರಾಧಾ ಎಂದು. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪಂಚಭಾಷಾ ತಾರೆಯಾಗಿ ಮೆರೆದಿರುವ ನಟಿ ರಾಧಾ. ರಾಧಾ ಮೂಲತಹ ಕೇರಳದವರು. ಇವರು ಇಲ್ಲಿವರೆಗೆ ಮಲಯಾಳಂ ಕನ್ನಡ ತಮಿಳು ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡವರು. ಇವರು ಮಾತ್ರವಲ್ಲದೆ ಇವರ ಸಹೋದರಿಯರಾದ ಮಲ್ಲಿಕಾ ಹಾಗೂ ಅಂಬಿಕ ಕೂಡ ಖ್ಯಾತರಾದವರು. ಅದರಲ್ಲೂ ಅಂಬಿಕಾ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯ ಗಳಿಸಿಕೊಂಡ ನಟಿ ನಿಮಗೆ ಗೊತ್ತೇ ಇದೆ.

ಇನ್ನು ನಿಮಗೆ ಯಾವ ಅಂಬಿಕ ಎಂದು ತಿಳಿಯದಿದ್ದರೆ ಒಂದು ಹಾಡಿನ ಕುರಿತಂತೆ ಹೇಳುತ್ತೇವೆ ಬನ್ನಿ. ಕನ್ನಡ ಚಿತ್ರರಂಗದಲ್ಲಿ ಖ್ಯಾತವಾಗಿರುವ ಚಳಿ ಚಳಿ ಸಾಂಗ್ ಹಾಡಿನ ನಾಯಕಿಯೇ ಅಂಬಿಕ. ಇಂದಿಗೂ ಕೂಡ ಕನ್ನಡ ಚಲನಚಿತ್ರಗಳಲ್ಲಿ ಆಗಾಗ ನಟಿ ಅಂಬಿಕಾ ರವರು ಕಾಣಿಸಿಕೊಳ್ಳುತ್ತಾರೆ. ರಾಧಾ ಕೂಡ ಕನ್ನಡ ಚಿತ್ರರಂಗದಲ್ಲಿ ಸೌಭಾಗ್ಯಲಕ್ಷ್ಮಿ ಎಂಬ ಡಾಕ್ಟರ್ ವಿಷ್ಣುವರ್ಧನ್ ನಟನೆಯ ಚಿತ್ರದಲ್ಲಿ ನಟಿಸಿ ಸಾಕಷ್ಟು ಹೆಸರನ್ನು ಗಳಿಸಿದರು. ಸೌಭಾಗ್ಯಲಕ್ಷ್ಮಿ ಚಿತ್ರ ರಾಧಾ ರವರಿಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರನ್ನು ತಂದು ಕೊಟ್ಟಿತೆಂದರೆ ಸುಳ್ಳಲ್ಲ.

ರಾಧಾ ರವರು ಕನ್ನಡದಲ್ಲಿ ನಟಿಸಿದ್ದು ಬೆರಳಣಿಕೆ ಚಿತ್ರಗಳಷ್ಟೇ ಆದರೂ ಕನ್ನಡ ಪ್ರೇಕ್ಷಕರ ಮನದಲ್ಲಿ ಇಂದಿಗೂ ಅವರಿಗೆ ಜಾಗವಿದೆ. ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಟಾಪ್ ನಟಿಯಾಗಿ ಕೂಡ ಕಾಣಿಸಿಕೊಂಡವರು ನಟಿ ರಾಧಾ. ನಟಿ ರಾಧಾ ರವರು ಚಿತ್ರರಂಗದ ನಂತರ 1991 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ರಾಜಶೇಖರ ನಾಯರ್ ಅವರೊಂದಿಗೆ 1991 ನಲ್ಲಿ ವಿವಾಹವಾದರು. ರಾಧಾ ರವರಿಗೆ ಮೂರು ಮಕ್ಕಳು. ಅವರಲ್ಲಿ ಒಬ್ಬರು ಕನ್ನಡದಲ್ಲಿ ಕೂಡ ನಡೆಸಿ ಸ್ಟಾರ್ ನಟಿಯಾಗಿ ಮಿಂಚಿದವರು ಯಾರೆಂದು ನಿಮಗೆ ಗೊತ್ತು ಹೇಳುತ್ತೇವೆ ಬನ್ನಿ.

ಹೌದು ರಾಧಾರವರ ಮಗಳು ಕಾರ್ತಿಕಾ ನಾಯರ್ ಕೂಡ ನಟಿಯಾಗಿ ಹೆಸರು ಮಾಡಿದವರು. ಕಾರ್ತಿಕ ನಾಯರ್ ಕನ್ನಡಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಸೂಪರ್ ಹಿಟ್ ಚಿತ್ರ ಬೃಂದಾವನದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಬೃಂದಾವನ ಚಿತ್ರದಲ್ಲಿನ ಕಾರ್ತಿಕ ನಾಯರ್ ಅವರ ನಟನೆಗೆ ಕನ್ನಡ ವೀಕ್ಷಕರು ಶಹಬ್ಬಾಸ್ಗಿರಿ ಯನ್ನು ಕೊಟ್ಟಿದ್ದಾರೆ. ನಟಿ ರಾಧಾ ರವರಂತೆ ಅವರ ಮಗಳು ಕೂಡ ಬಹಳ ಪ್ರತಿಭಾನ್ವಿತ ನಟಿ. ಕಾರ್ತಿಕ ನಾಯರ್ ತಮ್ಮ ಪ್ರತಿಭೆಯಿಂದ ಈಗಾಗಲೇ ದಕ್ಷಿಣ ಭಾರತದ ಹಲವಾರು ಚಿತ್ರರಂಗದಲ್ಲಿ ಚಿತ್ರಗಳಲ್ಲಿ ನಟಿಸಿದ್ದಾರೆ.

ನೂಲಿನಂತೆ ಸೀರೆ ತಾಯಿಯಂತೆ ಮಗಳು ಎಂಬಂತೆ ತಾಯಿಯಂತೆ ತಮ್ಮ ಪ್ರತಿಭೆ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಗುರುತನ್ನು ಹೊಂದಿದ್ದಾರೆ. ಒಬ್ಬ ತಾಯಿಯಾಗಿ ರಾಧಾ ರವರು ಕೂಡ ತಮ್ಮ ಮಗಳ ವಿಷಯದಲ್ಲಿ ಬಯಸುವುದನ್ನು ಇದೆ ಅಲ್ಲವೇ. ಒಟ್ಟಾರೆ ಹೇಳುವುದಾದರೆ ರಾಧಾರವರ ಕುಟುಂಬದ ಹಲವಾರು ಸದಸ್ಯರು ಚಿತ್ರರಂಗಕ್ಕೆ ತಮ್ಮ ಬದುಕನ್ನು ಮೀಸಲಿಟ್ಟಿದ್ದಾರೆ ಎಂದು ಹೇಳಬಹುದು. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *