ಅಲ್ಲು ಅರ್ಜುನ್, ವಿಜಯ್ ಆಡಿಗೆ ಅದ್ಭುತ ಡ್ಯಾನ್ಸ್ ಮಾಡಿದ ಪುಟಾಣಿ ವೃದ್ಧಿ ವಿಶಾಲ್ ! ವೈರಲ್ ಆದ ವಿಡಿಯೋ

19

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ತೆಲುಗಿನಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾದ ಅಲಾ ವೈಕುಂಠ ಪುರಮುಲೂ ಸಿನಿಮಾದ ಹಾಡುಗಳು ಎಷ್ಟರ ಮಟ್ಟಿಗೆ ಮೋಡಿ ಮಾಡಿದವು ಎಂಬುದು ನೀಮಗೆಲ್ಲರಿಗೂ ತಿಳಿದೇ ಇರುತ್ತದೆ, ಈ ಚಿತ್ರದ ಪ್ರತಿಯೊಂದು ಹಾಡುಗಳು ಕೂಡ ದಾಖಲೆಗಳನ್ನು ಸೃಷ್ಟಿಸುವುದರಲ್ಲಿ ಯಶಸ್ವಿ ಯಾಗಿದ್ದವು, ಅದರಲ್ಲಿಯೂ ರಾಮುಲೋ ರಾಮುಲ ಹಾಗೂ ಬುಟ್ಟ ಬೊಮ್ಮ ಹಾಡುಗಳಂತೂ ಇಂದಿಗೂ ಕೂಡ ಜನರ ಫೇವರೆಟ್ ಎನಿಸಿವೆ.

ಅಷ್ಟೇ ಅಲ್ಲದೆ ಇತ್ತೀಚೆಗೆ ಬಿಡುಗಡೆಯಾದ ತಮಿಳಿನ ಖ್ಯಾತ ನಟ ವಿಜಯ್ ನಟನೆಯ ಮಾಸ್ಟರ್ ಸಿನಿಮಾದ ವಾತಿ ಕಮಿಂಗ್ ಹಾಡು ಕೂಡ ಹೆಚ್ಚು ಸದ್ದು ಮಾಡಿದೆ, ಈ ಎರಡು ಹಾಡುಗಳಲ್ಲಿ ಕೇವಲ ಹಾಡುಗಳಷ್ಟೇ ಅಲ್ಲದೆ ಕೆಲವೊಂದು ಡ್ಯಾನ್ಸ್ ಸ್ಟೆಪ್ ಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಹುತೇಕ ಸೆಲೆಬ್ರಿಟಿಗಳು ಈ ಹಾಡುಗಳಿಗೆ ಡ್ಯಾನ್ಸ್ ಮಾಡುವ ಮೂಲಕ ಹಾಡು ಎಲ್ಲಿಯವರೆಗೆ ತಲುಪಿದೆ ಎಂಬುದನ್ನು ತೋರಿಸುತ್ತಿದ್ದಾರೆ, ಇದೀಗ ಬಾಲ ನಟಿಯಾಗಿರುವ ವೃದ್ಧಿ ವಿಶಾಲ್ ರವರು ಈ ಎರಡು ಹಾಡುಗಳಿಗೆ ಒಟ್ಟಿಗೆ ಡ್ಯಾನ್ಸ್ ಮಾಡಿದ್ದು ಬಿಡುಗಡೆಯಾದ ಕೆಲವೇ ಕೆಲವು ಗಂಟೆಗಳಲ್ಲಿ ಲಕ್ಷಾಂತರ ವ್ಯೂಸ್ ಪಡೆದುಕೊಂಡು ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿ ಇದೆ, ಮೇಲುಗಡೆ ಈ ಪುಟ್ಟ ಬಾಲಕಿಯ ವಿಡಿಯೋ ಹಾಕಿದ್ದು ಒಮ್ಮೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸುವುದನ್ನು ಮರೆಯಬೇಡಿ.

Get real time updates directly on you device, subscribe now.