ಉಗ್ರಂ ರಿಮೇಕ್ ಅಲ್ಲ, ಕನ್ನಡದ ಟಾಪ್ ನಟ ಮಾಡಲ್ಲ ಎಂದ ಸ್ಟೋರಿಯನ್ನು ಪ್ರಭಾಸ್ ಒಪ್ಪಿಕೊಂಡದ್ದು, ಹೇಗೆ ಗೊತ್ತೇ??

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಕನ್ನಡ ಚಿತ್ರರಂಗ ಇದೀಗ ಇತರ ಚಿತ್ರರಂಗಗಳ ಮಾರ್ಕೆಟ್ ನಂತೆ ತನ್ನ ಮಾರುಕಟ್ಟೆಯನ್ನು ಕೂಡ ಇತರ ಭಾಷೆಗಳಲ್ಲಿ ವಿಸ್ತರಣೆ ಮಾಡಲು ಆರಂಭಿಸಿದೆ. ಅದೇ ಕಾರಣಕ್ಕಾಗಿ ಡಬ್ಬಿಂಗ್ ಅನ್ನು ಮೂಲವಾಗಿ ಬಳಸಿಕೊಂಡು ತನ್ನ ಚಿತ್ರಗಳನ್ನು ಇತರ ಭಾಷೆಗಳಲ್ಲೂ ಕೂಡ ಬಿಡುಗಡೆ ಮಾಡಲು ಆರಂಭಿಸಿದೆ. ಅಷ್ಟೇ ಅಲ್ಲದೆ ಕನ್ನಡ ನಿರ್ದೇಶಕರು, ನಟರು ಹಾಗೂ ನಟಿಯರು ಕೂಡ ಇತರ ಭಾಷೆಗಳಲ್ಲಿ ಅಬ್ಬರಿಸಲು ಆರಂಭಿಸಿದ್ದಾರೆ. ಇದರಿಂದ ಕನ್ನಡ ಚಿತ್ರ ರಂಗದ ಹವಾ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಿರುವಾಗ ಇದೀಗ ಕನ್ನಡ ನಿರ್ದೇಶಕ ಪ್ರಶಾಂತ್ ನೀಲ್ ರವರು ನಿಮಗೆಲ್ಲರಿಗೂ ತಿಳಿದಿರುವಂತೆ ಪ್ರಭಾಸ್ ರವರ ಜೊತೆ ಸಲಾರ್ ಚಿತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ.

ಮೂಲಗಳ ಪ್ರಕಾರ ಪ್ರಭಾಸ್ ರವರು ಆಕ್ಷನ್ ಸಿನಿಮಾ ಮಾಡಲು ಕಾದು ಕುಳಿತಿದ್ದ ಸಂದರ್ಭದಲ್ಲಿ ಪ್ರಶಾಂತ್ ನೀಲ್ ಕಥೆ ಕೇಳಿ, ತಮ್ಮ ಕಾಲ್ ಶೀಟ್ ನಲ್ಲಿ ಸಮಯಾವಕಾಶ ಇಲ್ಲದೆ ಇದ್ದರು ಕೂಡ ಕಥೆ ಕೇಳಿ ಪ್ರಶಾಂತ್ ನೀಲ್ ರವರ ಸಿನಿಮಾ ಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಆದರೆ ಈ ಕಥೆ ಅಸಲಿಗೆ ಪ್ರಭಾಸ್ ರವರಿಗೆ ಎಂದು ಸ್ಪೆಷಲ್ ಆಗಿ ತಯಾರಿಸಿಲ್ಲ ಎಂಬುದು ತಿಳಿದುಬಂದಿದೆ. ಹೌದು ಉಗ್ರಂ ರಿಮೇಕ್ ಅಲ್ಲ ಎಂದು ಪ್ರಶಾಂತ್ ನೀಲ್ ಸ್ಪಷ್ಟ ಪಡಿಸಿದ ಮೇಲೆ ಕಥೆಯ ಕುರಿತು ಮತ್ತೊಂದು ಮಾಹಿತಿ ಸಿಕ್ಕಿದ್ದು,

ಪ್ರಭಾಸ್ ರವರಿಗಾಗಿ ಅಲ್ಲದೇ, ಕನ್ನಡದ ಟಾಪ್ ನಟನಿಗಾಗಿ ತಯಾರಿಸಿದ ಚಿತ್ರವನ್ನು ಕನ್ನಡ ಟಾಪ್ ನಟ ಕೇಳಿ ಕಥೆ ಇಷ್ಟವಾಗಿಲ್ಲ ಎಂದು ರಿಜೆಕ್ಟ್ ಮಾಡಿದ ಮೇಲೆ ಪ್ರಶಾಂತ್ ನೀಲ್ ರವರು, ಪ್ರಭಾಸ್ ರವರಿಗೆ ತಕ್ಕಂತೆ ಕೊಂಚ ಬದಲಾವಣೆ ಮಾಡಿ, ಪ್ರಭಾಸ್ ರವರಿಗೆ ತಿಳಿಸಿದಾಗ ಪ್ರಭಾಸ್ ರವರು ಸಿನಿಮಾಕ್ಕೆ ಒಪ್ಪಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ. ಹೌದು ಸ್ನೇಹಿತರೇ, ಮೂಲಗಳ ಪ್ರಕಾರ ಕಥೆ ರಿಜೆಕ್ಟ್ ಮಾಡಿದ ಆ ಟಾಪ್ ಕನ್ನಡದ ನಟ ಮತ್ಯಾರು ಅಲ್ಲ, ಅವರೇ ರಾಕಿಂಗ್ ಸ್ಟಾರ್ ಯಶ್. ರಾಕಿಂಗ್ ಸ್ಟಾರ್ ಯಶ್ ಅವರನ್ನು ಪರಿಗಣಿಸಿ ಸಲಾರ್ ಚಿತ್ರಕಥೆಯನ್ನು ಬರೆಯಲಾಗಿದೆ . ಆದರೆ ಕೆಜಿಎಫ್ ಸ್ಟಾರ್ ಸ್ಕ್ರಿಪ್ಟ್ ಅನ್ನು ತಿರಸ್ಕರಿಸಿದಾಗ, ಪ್ರಶಾಂತ್ ನೀಲ್ ಕೆಲವು ಬದಲಾವಣೆಗಳನ್ನು ಮಾಡಿದರು ಮತ್ತು ಅದೇ ಸ್ಕ್ರಿಪ್ಟ್ ಅನ್ನು ಪ್ರಭಾಸ್ಗೆ ನಿರೂಪಿಸಿದರು. ನಿರೂಪಣೆಯಿಂದ ತುಂಬಾ ಪ್ರಭಾವಿತರಾದ ಪ್ರಭಾಸ್ ತಮ್ಮ ಮೆಚ್ಚುಗೆಯನ್ನು ನೀಡಿದರು.

Get real time updates directly on you device, subscribe now.